Site icon Vistara News

Ameesha Patel | ಪಾಕಿಸ್ತಾನಿ ನಟನ ಜತೆ ಅಮೀಶಾ ಪಟೇಲ್ ರೊಮ್ಯಾಂಟಿಕ್ ರೀಲ್ಸ್‌; ವಿಡಿಯೊ ವೈರಲ್‌!

Ameesha Patel

ಬೆಂಗಳೂರು: ‘ಕಹೋನಾ ಪ್ಯಾರ್ ಹೈ’ ಮತ್ತು ‘ಗದರ್ ಏಕ್ ಪ್ರೇಮ್ ಕಥಾ’ ಚಿತ್ರಗಳ ಖ್ಯಾತಿಯ ನಟಿ ಅಮೀಶಾ ಪಟೇಲ್ (Ameesha Patel) ಪಾಕಿಸ್ತಾನಿ ನಟ ಇಮ್ರಾನ್ ಅಬ್ಬಾಸ್ ಜತೆಗೆ ರೊಮ್ಯಾಂಟಿಕ್ ರೀಲ್ಸ್‌ವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ಆ ವಿಡಿಯೊ ವೈರಲ್‌ ಆಗಿದೆ.

2002ರ ಕ್ರಾಂತಿ ಸಿನಿಮಾದ ʻದಿಲ್ ಮೇ ದರ್ದ್ ಸಾ ಜಗಾ ಹೈʼ ರೊಮ್ಯಾಂಟಿಕ್ ಹಾಡಿಗೆ ಇಮ್ರಾನ್ ಅಬ್ಬಾಸ್‌ ಜತೆ ನಟಿ ರೀಲ್ಸ್‌ ಮಾಡಿದ್ದಾರೆ. ಈ ರೀಲ್ಸ್‌ ಅನ್ನು ಬಹ್ರೇನ್‌ನಲ್ಲಿ ಚಿತ್ರೀಕರಿಸಲಾಗಿದೆ ಎಂದು ನಟಿ ಹೇಳಿಕೊಂಡಿದ್ದಾರೆ. ಅಮೀಶಾ ಪಟೇಲ್ ಇಮ್ರಾನ್ ಅಬ್ಬಾಸ್ ಜತೆ ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎಂದು ವರದಿಯಾಗಿತ್ತು. ಸಂದರ್ಶನವೊಂದರಲ್ಲಿ ನಟಿ ಇಮ್ರಾನ್‌ನೊಂದಿಗೆ ಯುಎಸ್‌ನ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿದ್ದಾಗಿನಿಂದ ತನಗೆ ಪರಿಚಯವಿದೆ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ | ಡ್ರೆಸ್ ಕಾರಣಕ್ಕೆ ಮತ್ತೆ ಸುದ್ದಿಯಾದ ನಟಿ ರಶ್ಮಿಕಾ ಮಂದಣ್ಣ; ಹಾಟ್‌ ಫೋಟೊ ವೈರಲ್‌

ಈ ವಿಡಿಯೊ ವೈರಲ್‌ ಆದ ಬೆನ್ನಲ್ಲೆ ಅಮೀಶಾ ಮತ್ತು ಇಮ್ರಾನ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗಾಸಿಪ್‌ಗಳು ಹರಿದಾಡುತ್ತಿವೆ. ಈ ಬಗ್ಗೆ ಯಾವುದೇ ಅಧಿಕೃತವಾಗಿ ನಟಿ ಎಲ್ಲಿಯೂ ಹೇಳಿಕೊಂಡಿಲ್ಲ. ನಟ ಇಮ್ರಾನ್ ಅಬ್ಬಾಸ್‌ಗೆ ನಟಿ ಅಮೀಶಾ ಪಟೇಲ್ ಹೊರತುಪಡಿಸಿ ಅನೇಕ ನಟಿಯರೊಂದಿಗೆ ಅಫೇರ್‌ ಇತ್ತು ಎನ್ನಲಾಗುತ್ತಿದೆ.

ಈ ವಿಡಿಯೊ ಹಂಚಿಕೊಂಡಿರುವ ನಟ ಇಮ್ರಾನ್ ಅಬ್ಬಾಸ್‌ ʻʻನನ್ನ ನೆಚ್ಚಿನ ಬಾಲಿವುಡ್ ಟ್ಯೂನ್‌ಗಳಲ್ಲಿ ಇದೂ ಒಂದಾಗಿದೆ. ಸ್ನೇಹಿತೆ ಅಮೀಶಾ ಪಟೇಲ್ ಜತೆ ಈ ಹಾಡಿಗೆ ರೀಲ್ಸ್‌ ಮಾಡಿರುವುದು ತುಂಬಾ ಇಷ್ಟವಾಯಿತು. ಅಲ್ಕಾ ಯಾಗ್ನಿಕ್ ಮತ್ತು ಉದಿತ್ ನಾರಾಯಣ್ ಹಾಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Ira khan | ನೂಪುರ್ ಶಿಖರೆ ಜತೆ ಎಂಗೇಜ್‌ ಆದ ಆಮಿರ್​ ಖಾನ್ ಪುತ್ರಿ ಇರಾ ಖಾನ್‌: ವಿಡಿಯೊ ವೈರಲ್‌!

Exit mobile version