Site icon Vistara News

Ameesha Patel: ಕಾರ್ಸೆಟ್ ಟಾಪ್‌ನಲ್ಲಿ ಹಾಟ್‌ ಆಗಿ ಕಾಣಿಸಿಕೊಂಡ ಅಮೀಶಾ ಪಟೇಲ್!

Ameesha Patel Skintight Corset Sexy Video

ಬೆಂಗಳೂರು: ʻಕಹೋ ನಾ ಪ್ಯಾರ್ ಹೈʼ ಸಿನಿಮಾ ಮೂಲಕ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಅಮೀಶಾ ಪಟೇಲ್ (Ameesha Patel) ಕ್ಲೀವೇಜ್-ಬೇರಿಂಗ್ ಕಾರ್ಸೆಟ್ ಟಾಪ್‌ನಲ್ಲಿ ಇರುವ ಹಾಟ್‌ ವಿಡಿಯೊವನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಆಗಾಗ ಬಿಕಿನಿ ಫೋಟೊಗಳನ್ನು ಹಂಚಿಕೊಳ್ಳುವ ನಟಿ ಈ ಬಾರಿ ಕಪ್ಪು ಬಣ್ಣದ ಪಾರದರ್ಶಕ ಕಾರ್ಸೆಟ್ ಟಾಪ್‌ನಲ್ಲಿ ಮ್ಯಾಚಿಂಗ್ ಜೀನ್ಸ್‌ನೊಂದಿಗೆ ಮಾದಕ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಆಗಾಗ ತಮ್ಮ ಬಿಕಿನಿ ಫೋಟೊಗಳಿಗಾಗಿ ಅಮೀಶಾ ಸುದ್ದಿಯಲ್ಲಿರುತ್ತಾರೆ. ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಇತ್ತೀಚೆಗೆ ರಾಂಚಿ ಸಿವಿಲ್ ನ್ಯಾಯಾಲಯವು ನಟಿ ಅಮೀಶಾ ಹಾಗೂ ಇವರ ವ್ಯಾಪಾರ ಪಾಲುದಾರ ಕೃನಾಲ್ ವಿರುದ್ಧ ವಾರಂಟ್ ಹೊರಡಿಸಿತ್ತು. ಈ ಮೂಲಕ ನಟಿ ಕಾನೂನು ತೊಂದರೆಗೆ ಸಿಲುಕಿದ್ದರು.

ಇಂಡಿಯಾ ಟುಡೆ ವರದಿಯ ಪ್ರಕಾರ, ಅಜಯ್ ಕುಮಾರ್ ಸಿಂಗ್ ಎಂಬ ಚಲನಚಿತ್ರ ನಿರ್ಮಾಪಕ, ಅಮೀಶಾ ಪಟೇಲ್ ಮತ್ತು ಅವರ ಪಾಲುದಾರರ ವಿರುದ್ಧ ವಂಚನೆ, ಬೆದರಿಕೆ ಮತ್ತು ಚೆಕ್ ಬೌನ್ಸ್ ಪ್ರಕರಣವನ್ನು ದಾಖಲಿಸಿದ್ದಾರೆ. ಹಲವು ಬಾರಿ ಸಮನ್ಸ್ ನೀಡಿದರೂ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅಮೀಶಾ ವಿರುದ್ಧ ಸಿಆರ್‌ಪಿಸಿ ಸೆಕ್ಷನ್ 420 ಮತ್ತು 120 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ʻದೇಸಿ ಮ್ಯಾಜಿಕ್ʼ ಎಂಬ ಸಿನಿಮಾದ ಪ್ರಚಾರಕ್ಕಾಗಿ ಅಮೀಶಾ ಮತ್ತು ಅವರ ವ್ಯಾಪಾರ ಪಾಲುದಾರರಿಂದ 2.5 ಕೋಟಿ ರೂ.ಗಳನ್ನು ತೆಗೆದುಕೊಂಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ಅಜಯ್ ಕುಮಾರ್ ಪ್ರಕಾರ, ಅಮೀಷಾ ಪಟೇಲ್ ಮತ್ತು ಅವರ ವ್ಯಾಪಾರ ಪಾಲುದಾರರು “ಚಿತ್ರ ಮುಗಿದ ನಂತರ ಹಣವನ್ನು ಬಡ್ಡಿಯೊಂದಿಗೆ ಹಿಂತಿರುಗಿಸುವುದಾಗಿ ಹೇಳಿದ್ದರು, ಆದರೆ ಅದು ಇಂದಿಗೂ ಬಿಡುಗಡೆಯಾಗಲಿಲ್ಲ.”

ಇದನ್ನೂ ಓದಿ: Urfi Javed: ಹೋಟೆಲ್​ ಪರಿಚಾರಕಿಯಾದ ಉರ್ಫಿ ಜಾವೇದ್​​; ಅವಳ ಹಿಂದಿರುವ ಕನ್ನಡಿಯಲ್ಲಿದೆ ಮಾದಕತೆ !

ಅಮೀಶಾ ಪಟೇಲ್‌ ಪೋಸ್ಟ್‌

ಗದರ್‌ 2ನಲ್ಲಿ ನಟನೆ

ಅಮೀಶಾ ಪಟೇಲ್ ಅವರು ಅನಿಲ್ ಶರ್ಮಾ ಅವರ ಜತೆ ಗದರ್ 2ನಲ್ಲಿ ಸನ್ನಿ ಡಿಯೋಲ್ ಜತೆ ಕಾಣಿಸಿಕೊಳ್ಳಲಿದ್ದಾರೆ. ʻಗದರ್ 2: ದಿ ಕಥಾ ಕಂಟಿನ್ಯೂಸ್ʼ ( Gadar 2: The Katha Continues) ಬಿಡುಗಡೆಯೊಂದಿಗೆ ತಾರಾ ಸಿಂಗ್ ಮತ್ತು ಸಕೀನಾ ಅವರ ಪ್ರೇಮಕಥೆ ಅನಾವರಣಗೊಳ್ಳಲಿದೆ. ಆಗಸ್ಟ್ 11ರಂದು ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Exit mobile version