Site icon Vistara News

Avatar 3 | ಅವತಾರ್-2 ಸಕ್ಸೆಸ್‌ ಬೆನ್ನಲ್ಲೇ ಅವತಾರ್‌-3 ಸೀಕ್ವೆಲ್ ಮಾಡಲು ಮುಂದಾದ ಜೇಮ್ಸ್ ಕ್ಯಾಮರೂನ್!

Avatar 3

ಬೆಂಗಳೂರು : 2022ರಲ್ಲಿ ತೆರೆ ಕಂಡ ಜೇಮ್ಸ್ ಕ್ಯಾಮರೂನ್ ಅವರ ʼಅವತಾರ್: ದಿ ವೇ ಆಫ್ ವಾಟರ್ʼ (Avatar: The Way of Water) ಬಾಕ್ಸ್‌ ಆಫೀಸ್‌ನಲ್ಲಿ ಭಾರಿ ಕಲೆಕ್ಷನ್‌ ಮಾಡಿದೆ. ಇದರ ಬೆನ್ನಲ್ಲೇ ತಯಾರಕರು ಜನಪ್ರಿಯ ಫ್ರ್ಯಾಂಚೈಸ್‌ನಲ್ಲಿ ಅವತಾರ್‌-3 ಈಗಾಗಲೇ ಕೆಲಸ ಆರಂಭಗೊಂಡಿದೆ ಎಂದು ಖಚಿತಪಡಿಸಿದ್ದಾರೆ. ಅವತಾರ್ 2, 13 ವರ್ಷಗಳ ನಂತರ 2022ರಲ್ಲಿ ತೆರೆ ಕಂಡಿದೆ.ಈಗ, ಅವತಾರ್ 3 (Avatar 3) ಮತ್ತು 4 ರ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಎಂದು ನಿರ್ದೇಶಕರು ಮಾಹಿತಿ ಹಂಚಿಕೊಂಡಿದ್ದಾರೆ.

ಅವತಾರ್‌-2 ಕಲೆಕ್ಷನ್​ನಿಂದಾಗಿ ಚಿತ್ರತಂಡಕ್ಕೆ ಭರವಸೆ ಮೂಡಿದೆ. ಹಾಗಾಗಿ ‘ಅವತಾರ್​’ ಸಿನಿಮಾದ 3, 4 ಮತ್ತು 5ನೇ ಸೀಕ್ವೆಲ್​ಗಳನ್ನು ಮಾಡಲು ಜೇಮ್ಸ್ ಕ್ಯಾಮರೂನ್ ಮುಂದೆ ಬಂದಿದ್ದಾರೆ. ಶೋವೊಂದರಲ್ಲಿ ಜೇಮ್ಸ್ ಕ್ಯಾಮರೂನ್ ಮಾತನಾಡಿ ʻʻಪ್ರೇಕ್ಷಕರು ಏನು ಬಯಸುತ್ತಾರೆಯೋ ಅದನ್ನು ನೀಡುವುದು ನನ್ನ ಕರ್ತವ್ಯ. ಈ ಸಿನಿಮಾಗೆ ಹಾಕಿದ ಬಂಡವಾಳ ಇನ್ನು ಕೆಲವೇ ದಿನಗಳಲ್ಲಿ ವಾಪಸ್​ ಬರಲಿದೆ ಎನಿಸುತ್ತದೆ. ಹಾಗಾಗಿ ನಾನು ಇನ್ನುಳಿದ ಸೀಕ್ವೆಲ್​ಗಳನ್ನು ಮಾಡಲೇಬೇಕಾಗಿದೆ. ಮುಂದಿನ ಆರು ಅಥವಾ ಏಳು ವರ್ಷಗಳಲ್ಲಿ ನಾನು ಏನು ಮಾಡುತ್ತೇನೆ ಎಂದು ನನಗೆ ತಿಳಿದಿದೆʼʼಎಂದಿದ್ದಾರೆ. ಅಚ್ಚರಿ ಎಂದರೆ, ‘ಅವತಾರ್​ 3’ ಸಿನಿಮಾದ ಬಹುತೇಕ ದೃಶ್ಯಗಳನ್ನು ಅವರು ಈಗಾಗಲೇ ಚಿತ್ರಿಸಿಕೊಂಡಿದ್ದಾರೆ. ಇನ್ನೇನಿದ್ದರೂ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳತ್ತ ಗಮನ ಹರಿಸಬೇಕಷ್ಟೇ.

ಇದನ್ನೂ ಓದಿ | Avatar: The Way of Water | ಭಾರತದಲ್ಲಿ 223 ಕೋಟಿ ರೂ. ಗಳಿಸಿದ ಅವತಾರ್‌-2!

ಜೇಮ್ಸ್ ಕ್ಯಾಮರೂನ್ ಅವರ ಅವತಾರ್‌-೧, 2009ರಲ್ಲಿ ಬಿಡುಗಡೆಯಾಗಿತ್ತು. ಆಗಿನ ಕಾಲಕ್ಕೆ ₹20 ಸಾವಿರ ಕೋಟಿಗೂ ಹೆಚ್ಚು ಹಣ ಬಾಚಿತ್ತು. ಈ ಪೈಕಿ ಅವತಾರ್-3, 2024ರ ಡಿಸೆಂಬರ್ 20ರಂದು ರಿಲೀಸ್‌ ಆದರೆ, 2026ರ ಡಿಸೆಂಬರ್ 18ಕ್ಕೆ ಅವತಾರ್-4 ಹಾಗೂ 2028ರ ಡಿಸೆಂಬರ್ 22ರಂದು ಅವತಾರ್ ಪಾರ್ಟ್ 5 ರಿಲೀಸ್‌ ಆಗಲಿದೆ.

ಇದನ್ನೂ ಓದಿ | Avatar: The Way of Water | 12 ದಿನಗಳಲ್ಲಿ ವಿಶ್ವಾದ್ಯಂತ 8,200 ಕೋಟಿ ರೂ. ಗಳಿಕೆ ಕಂಡ ಅವತಾರ್‌-2!

Exit mobile version