ಬೆಂಗಳೂರು : ಟಾಲಿವುಡ್ ನಟಿ ಸಮಂತಾ (Samantha) ಮೈಯೋಸಿಟಿಸ್ ಕಾಯಿಲೆಯಿಂದ ಬಳಲುತ್ತಿದ್ದರು. ಇದಕ್ಕಾಗಿ ವಿದೇಶದಲ್ಲಿ ನಟಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ʻಯಶೋದʼ ಸಿನಿಮಾ ಪ್ರಚಾರಕ್ಕೆ ಭಾಗಿಯಾಗಿ ಸಮಂತಾ ವಿದೇಶಕ್ಕೆ ಹಾರಿದ್ದರು. ತಮ್ಮ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ನಟಿ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ, ನಟಿ ಸಮಂತಾ ಮುಂಬೈ ಏರ್ಪೋರ್ಟ್ನಲ್ಲಿ ಕ್ಯಾಮೆರಾಗೆ ಸಿಕ್ಕಿದ್ದಾರೆ.
ಏರ್ಪೋರ್ಟ್ನಲ್ಲಿ ಕ್ಯಾಮಮೆರಾಗಳನ್ನ ಕಂಡರೂ ನಟಿ ಸಮಂತಾ ಸ್ಮೈಲ್ ಮಾಡಲೇ ಇಲ್ಲ. ಅಭಿಮಾನಿಗಳು ಸೆಲ್ಫಿ ಕೇಳಿದಾಗಲೂ ಸಮಂತಾ ಸುಮ್ಮನೆ ನಿಂತುಬಿಟ್ಟಿದ್ದರು. ಸಮಂತಾ ತಮ್ಮ ಆರೋಗ್ಯದ ಕಾರಣದಿಂದ ಕೆಲಸದಿಂದ ಸುದೀರ್ಘ ವಿರಾಮ ತೆಗೆದುಕೊಳ್ಳುತ್ತಿದ್ದಾರೆ ಎಂಬ ವದಂತಿಗಳು ಹರಡಿದ್ದವು.
ಇದನ್ನೂ ಓದಿ | Samantha | ಮೇಕಪ್ ಇಲ್ಲದ ಫೋಟೊ ಹಂಚಿಕೊಂಡ ಸಮಂತಾ: 2023ಕ್ಕೆ ಕೌಂಟ್ಡೌನ್ ಆರಂಭಿಸಿದ ನಟಿ!
ನಟಿ ತಮ್ಮ ಮುಂಬರುವ ಚಿತ್ರ ಶಾಕುಂತಲಂ ಬಿಡುಗಡೆಗೆ ತಯಾರಾಗಿದೆ. ಗುಣಶೇಖರ್ ನಿರ್ದೇಶನದ,ಈ ಚಿತ್ರ ಫೆಬ್ರವರಿ 17 ರಂದು ಥಿಯೇಟರ್ಗೆ ಬರಲಿದೆ. ಚಿತ್ರವು 2D ಮತ್ತು 3D ನಲ್ಲಿಯೂ ತಮಿಳು, ತೆಲುಗು, ಕನ್ನಡ, ಹಿಂದಿ ಹಾಗೂ ಮಲಯಾಳಂನಲ್ಲಿ ಬಿಡುಗಡೆಗೊಳ್ಳಲಿದೆ. ಮಹಾಕವಿ ಕಾಳಿದಾಸನ ಅಭಿಜ್ಞಾನ ʻಶಾಕುಂತಲಂʼ ನಾಟಕವನ್ನು ಆಧರಿಸಿ ಚಿತ್ರ ನಿರ್ಮಾಣವಾಗಿದೆ. ರಾಜ ದುಷ್ಯಂತ ಪಾತ್ರದಲ್ಲಿ ದೇವ್ ಮೋಹನ್ ನಟಿಸಿದರೆ, ಶಕುಂತಲೆಯಾಗಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಲಿವುಡ್ ನಟ ಅಲ್ಲು ಅರ್ಜುನ್ ಮಗಳು ಅರ್ಹಾ ಕೂಡ ಈ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ರಾಜಕುಮಾರ ಭರತನಾಗಿ ಕಾಣಿಸಿಕೊಳ್ಳಲಿದ್ದಾರೆ. ನೀಲಿಮಾ ಗುಣ ಮತ್ತು ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಸಚಿನ್ ಖೇಡೇಕರ್, ಅನನ್ಯ ನಾಗಲ್ಲ, ಮೋಹನ್ ಬಾಬು, ಗೌತಮಿ ಮತ್ತು ಅದಿತಿ ಬಾಲನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ | Samantha Ruth Prabhu | ಸದ್ಯಕ್ಕೆ ನಟನೆಗೆ ಸಮಂತಾ ಬ್ರೇಕ್, ಸ್ವಲ್ಪ ದಿನ ವಿಶ್ರಾಂತಿಗೆ ಮೊರೆ!