Site icon Vistara News

Amitabh Bachchan: ಆಸ್ಪತ್ರೆಗೆ ದಾಖಲಾದ ಅಮಿತಾಭ್‌ ಬಚ್ಚನ್: ಆಂಜಿಯೋಪ್ಲಾಸ್ಟಿ ಮಾಡಿದ ವೈದ್ಯರು

Amitabh Bachchan admitted to Kokilaben Hospital

ಬೆಂಗಳೂರು: ಉಸಿರಾಟದ ಸಮಸ್ಯೆಯಿಂದಾಗಿ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್ (Amitabh Bachchan) ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ನಟನಿಗೆ ಹಾರ್ಟ್‌ ಸರ್ಜರಿ ಮಾಡಬೇಕಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ವರದಿಯಾಗಿದೆ. ಮುಂಬೈನ ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ (Angioplasty) ಮಾಡಲಾಗಿದೆ. ಆದರೆ ಅವರಿಗೆ ಹೃದಯಸಂಬಂಧಿ ಅನಾರೋಗ್ಯ ಉಂಟಾಗಿಲ್ಲ ಎಂದೂ ಕೂಡ ಹೇಳಲಾಗುತ್ತಿದೆ.

ಆಗಿದ್ದೇನು?

ಅಮಿತಾಭ್ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೋಕಿಲಾಬೆನ್​ ಆಸ್ಪತ್ರೆಯಲ್ಲಿ ಅವರಿಗೆ ಆಂಜಿಯೋಪ್ಲಾಸ್ಟಿ (Angioplasty) ಮಾಡಲಾಗಿದೆ. ಆದರೆ ಅವರಿಗೆ ಹೃದಯಸಂಬಂಧಿ ಅನಾರೋಗ್ಯ ಉಂಟಾಗಿಲ್ಲ ಎಂದೂ ಕೂಡ ಹೇಳಲಾಗುತ್ತಿದೆ. ಅಮಿತಾಭ್​ ಬಚ್ಚನ್​ ಅವರು ಆಸ್ಪತ್ರೆಗೆ ದಾಖಲಾದ ವಿಷಯ ಹೊರಬೀಳುವುದಕ್ಕೂ ಒಂದು ಗಂಟೆ ಮೊದಲು ಅವರ ಮಾಡಿದ ಎಕ್ಸ್​ ಪೋಸ್ಟ್​ ಗಮನ ಸೆಳೆದಿತ್ತು. ‘ಎಂದೆಂದಿಗೂ ಚಿರಋಣಿ’ ಎಂದು ಅಮಿತಾಭ್​ ಬಚ್ಚನ್​ ಬರೆದುಕೊಂಡಿದ್ದಾರೆ. ಸರ್ಜರಿ ಆದ ಬಳಿಕ ಅವರು ಈ ರೀತಿ ಪೋಸ್ಟ್​ ಮಾಡಿರಬಹುದು ಎನ್ನಲಾಗಿದೆ. ಬೇಗ ಗುಣಮುಖರಾಗಿ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದಾರೆ.

ಕಾಲಿನ ರಕ್ತನಾಳದ ಸಮಸ್ಯೆ ಇರುವುದರಿಂದ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ ಎಂದೂ ಹೇಳಲಾಗಿದೆ. ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿ ಬಗ್ಗೆ ಕುಟುಂಬ ಮಾಹಿತಿ ಹಂಚಿಕೊಂಡಿಲ್ಲ.

ಇದನ್ನೂ ಓದಿ: Aamir Khan: ಅಮಿತಾಭ್‌ ಬಚ್ಚನ್ ರಿಹರ್ಸಲ್‌ ಕಂಡು ನಾನು ಮೂಕಸ್ಮಿತನಾದೆ: ಆಮೀರ್ ಖಾನ್

ʻಕಲ್ಕಿ 2898 ಎಡಿʼ ಚಿತ್ರದ ಬಗ್ಗೆ ಬಿಗ್‌ ಅಪ್‌ಡೇಟ್‌ ಕೊಟ್ಟ ʻಬಿಗ್‌ ಬಿʼ!

ಅಮಿತಾಭ್ ಬಚ್ಚನ್ ಅವರು ತಮ್ಮ ಮುಂಬರುವ ಚಿತ್ರ, ʻಕಲ್ಕಿ 2898 ಎಡಿʼ (Kalki 2898 AD) ಬಗ್ಗೆ ಬಿಗ್‌ ಅಪ್‌ಡೇಟ್‌ ಬಗ್ಗೆ ನಿನ್ನೆಯಷ್ಟೇ ಹಂಚಿಕೊಂಡಿದ್ದರು. ʻʻನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾದ ಶೂಟಿಂಗ್‌ ಬಹುತೇಕ ಪೂರ್ಣಗೊಂಡಿದೆ. ಮೇ 9ರಂದು ಸಿನಿಮಾ ಬಿಡುಗಡೆಯಾಗಲಿದೆʼʼ ಎಂದು ಬರೆದುಕೊಂಡಿದ್ದರು. ಭೂತ ಮತ್ತು ಭವಿಷ್ಯದ ಕಥೆ ಹೇಳಲಿರುವ ʼಕಲ್ಕಿ 2898 ಎಡಿʼ ಚಿತ್ರಕ್ಕೆ ಟಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ನಾಗ್‌ ಅಶ್ವಿನ್‌ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಮಹಾಶಿವ ರಾತ್ರಿ ಪ್ರಯುಕ್ತ ಚಿತ್ರತಂಡ ಹೊಸ ಪೋಸ್ಟರ್‌ ಬಿಡುಗಡೆ ಮಾಡಿತ್ತು. ಈ ಸಿನಿಮಾದಲ್ಲಿ ಪ್ರಭಾಸ್‌ ಭೈರವನಾಗಿ ಮಿಂಚಲಿದ್ದಾರೆ.

ಕಲ್ಕಿ 2898 ಎಡಿʼ ಈ ವರ್ಷದ ಅತೀ ಹೆಚ್ಚಿನ ಬಜೆಟ್‌ ಹೊಂದಿರುವ ಚಿತ್ರ ಎನಿಸಿಕೊಳ್ಳಲಿದೆ. ಈ ಚಿತ್ರದ ಬಜೆಟ್‌ ಬರೋಬ್ಬರಿ 600 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಅಂದರೆ ಇತ್ತೀಚಿನ ಬಹು ಕೋಟಿ ರೂ. ಬಜೆಟ್‌ನ ʼಸಲಾರ್‌ʼ (270 ಕೋಟಿ ರೂ.), ʼಅನಿಮಲ್‌ʼ (100 ಕೋಟಿ ರೂ.) ಮತ್ತು ʼಡಂಕಿʼ (140 ಕೋಟಿ ರೂ.) ಈ ಮೂರು ಚಿತ್ರಗಳ ಒಟ್ಟು ಬಜೆಟ್‌ಗಿಂತ ಜಾಸ್ತಿ. ಅಲ್ಲದೆ 2022ರಲ್ಲಿ ತೆರೆಕಂಡ ಬಾಲಿವುಡ್‌ ಚಿತ್ರ ʼಬಹ್ಮಾಸ್ತ್ರʼಕ್ಕಿಂತಲೂ (400 ಕೋಟಿ ರೂ.) ʼಕಲ್ಕಿʼಯ ಬಜೆಟ್‌ ಅಧಿಕ. ಹೀಗಾಗಿಯೇ ಈ ಚಿತ್ರದ ಮೇಲೆ ನಿರೀಕ್ಷೆ ಗರಿಗೆದರಿದೆ.

Exit mobile version