ಮುಂಬೈ: ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಅವರು ಬ್ಲಾಗ್ ಮೂಲಕ, ಸಾಮಾಜಿಕ ಜಾಲತಾಣಗಳ ಮೂಲಕ ನಿರಂತರವಾಗಿ ಅಭಿಮಾನಿಗಳ ಜತೆ ಸಂಪರ್ಕದಲ್ಲಿರುತ್ತಾರೆ. ಆದರೆ, ಇತ್ತೀಚೆಗೆ ಅವರು ಬ್ಲಾಗ್‌ನಲ್ಲಿ ಹೆಚ್ಚು ಸಕ್ರಿಯರಾಗಿಲ್ಲ. ಯಾವುದೇ ಉಭಯ ಕುಶಲೋಪರಿ ನಡೆಸಿಲ್ಲ. ಇದಕ್ಕಾಗಿ ಬೇಸರ ವ್ಯಕ್ತಪಡಿಸಿರುವ ಬಿಗ್ ಬಿ, ಅಭಿಮಾನಿಗಳಿಗೆ ಕ್ಷಮೆಯಾಚಿಸಿದ್ದಾರೆ.
“ಬ್ಲಾಗ್‌ಗೆ ಬರುವುದು ಮತ್ತೆ ತಡವಾಗಿದೆ. ಬೇರೆ ಬೇರೆ ಚಟುವಟಿಕೆಗಳು, ಬೇರೆ ಬೇರೆ ಕೆಲಸಗಳಿಂದಾಗಿ ನಿಮ್ಮ ಜತೆ ಬೆರೆಯಲು ಸಾಧ್ಯವಾಗಿಲ್ಲ. ಪ್ರತಿದಿನವೂ ಬ್ಲಾಗ್‌ಗೆ ಬರುವುದು ಸ್ವಲ್ಪ ಕಷ್ಟವಾಗುತ್ತಿದೆ. ಆದರೂ, ಎಷ್ಟು ಸಾಧ್ಯವೋ ಅಷ್ಟು ನಿಮ್ಮ ಜತೆ ನಿರಂತರವಾಗಿ ಸಂಪರ್ಕದಲ್ಲಿರಲು ಯತ್ನಿಸುತ್ತೇನೆ. ತಡವಾಗಿ ನಿಮ್ಮ ಜತೆ ಬೆರೆಯುತ್ತಿರುವುದಕ್ಕೆ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.
ಅಭಿಮಾನಿಗಳಿಗೆ ಸ್ಫೂರ್ತಿ ತುಂಬುವ ಕೆಲಸವನ್ನೂ ಅಮಿತಾಭ್ ಮಾಡಿದ್ದಾರೆ. “ನಾವು ಅನುದಿನವೂ ಸವಾಲುಗಳನ್ನು ಎದುರಿಸುತ್ತೇವೆ. ಆದರೆ, ನಾವೇ ಅವುಗಳ ಮೇಲೆ ಸವಾರಿ ಮಾಡಬೇಕು. ಸವಾಲುಗಳನ್ನು ಎದುರಿಸಿ, ಹಿನ್ನಡೆಯಾದರೆ ತಾಳ್ಮೆ ವಹಿಸಿ, ಮತ್ತೆ ಎದ್ದೇಳಿ, ಅವುಗಳ ಮೇಲೆ ಸವಾರಿ ಮಾಡಿ” ಎಂದಿದ್ದಾರೆ.
ಬಿಗ್ ಬಿ ಅವರು “ಕೌನ್ ಬನೇಗಾ ಕರೋಡ್‌ಪತಿ” ರಿಯಾಲಿಟಿ ಶೋ, “ಅನಿಮಲ್” ಚಿತ್ರದ ಶೂಟಿಂಗ್ ಸೇರಿ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಅವರು ಬ್ಲಾಗ್ ಬರೆಯುವುದರಲ್ಲಿ ಸಕ್ರಿಯರಾಗಿದ್ದಾರೆ. ಕೊರೊನಾ ತಗುಲಿದಾಗಲೂ ಅವರು ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದರು.
ಇದನ್ನೂ ಓದಿ | Kaun Banega Crorepati | 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ₹ 7.5 ಕೋಟಿ ಬೆಲೆಬಾಳುವ ಪ್ರಶ್ನೆ!