ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ತಮ್ಮ ಮುಂಬರುವ ಚಿತ್ರ ‘ಪ್ರಾಜೆಕ್ಟ್ ಕೆ’ ಚಿತ್ರೀಕರಣದ ವೇಳೆ ಹೈದರಾಬಾದ್‌ನಲ್ಲಿ ಗಾಯಗೊಂಡಿದ್ದಾರೆ. ನಟ ತಮ್ಮ ಬ್ಲಾಗ್‌ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಅವರ ಮುಂಬೈನ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ಬ್ಲಾಗ್‌ನಲ್ಲಿ ಅಮಿತಾಭ್ ʻʻಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದ ಸಮಯದಲ್ಲಿ, ನಾನು ಗಾಯಗೊಂಡಿದ್ದೇನೆ. ಆದ್ದರಿಂದ ಮಾಡಬೇಕಾಗಿದ್ದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ರದ್ದುಗೊಳಿಸಲಾಗಿದೆ. ವಾಸಿಯಾಗುವವರೆಗೆ ಶೂಟಿಂಗ್ ಮುಂದೂಡಲಾಗಿದೆ. ನಾನು ಜಲ್ಸಾದಲ್ಲಿ ವಿಶ್ರಾಂತಿ ಪಡೆಯುತ್ತೇನೆ. ನಾನು ಜಲ್ಸಾ ಗೇಟ್‌ನಲ್ಲಿ ಹಿತೈಷಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬರಬೇಡಿʼʼ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Project K: ಪ್ರಭಾಸ್, ದೀಪಿಕಾ, ಅಮಿತಾಭ್ ನಟನೆಯ ʻಪ್ರಾಜೆಕ್ಟ್ ಕೆʼ ರಿಲೀಸ್ ಡೇಟ್ ರಿವೀಲ್!
ಪ್ರಾಜೆಕ್ಟ್ ಕೆ
ಟಾಲಿವುಡ್ ನಟ ಪ್ರಭಾಸ್ ಶೀಘ್ರದಲ್ಲೇ ನಾಗ್ ಅಶ್ವಿನ್ ಅವರ ʼಪ್ರಾಜೆಕ್ಟ್ ಕೆʼ ಸಿನಿಮಾದ (Project K Movie) ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಮೂವಿಸ್‌ನ 50ನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾವಾಗಿದೆ. ವಿಶೇಷವೆಂದರೆ ಈ ಸಿನಿಮಾ ಒಂದು ಪಾರ್ಟ್‌ನಲ್ಲಿ ಬರದೆ ಎರಡು ಭಾಗಗಳಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ.
“ಪ್ರಾಜೆಕ್ಟ್ ಕೆ ಸಿನಿಮಾದ ದೃಷ್ಟಿ ಮತ್ತು ಕಥಾವಸ್ತುವು ತುಂಬಾ ದೊಡ್ಡದಾಗಿದೆ. ಹಾಗಾಗಿ ತಯಾರಕರು ಇದನ್ನು 2 ಭಾಗದ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಮೊದಲ ಭಾಗವು ಈ ಸಿನಿಮಾ ಜಗತ್ತನ್ನು ಪರಿಚಯಿಸಿ, ಸಂಘರ್ಷವನ್ನು ಆರಂಭಿಸುತ್ತದೆ. ಬಾಹುಬಲಿ ಫ್ರಾಂಚೈಸ್‌ನಂತೆಯೇ ದ್ವಿತೀಯ ಭಾಗದಲ್ಲಿ ಇಡೀ ನಾಟಕವು ತೆರೆದುಕೊಳ್ಳಲಿದೆ. ಇದು ಭಾರತೀಯ ಚಿತ್ರರಂಗವು ಹಿಂದೆಂದೂ ಕಾಣದ ಸಂಘರ್ಷದ ಸಿನಿಮಾವಾಗಿರಲಿದೆ” ಎಂದು ಮೂಲವು ತಿಳಿಸಿದೆ.
ಇದನ್ನೂ ಓದಿ: Deepika Padukone | ದೀಪಿಕಾ ಬರ್ತ್ ಡೇಗೆ ಪ್ರಾಜೆಕ್ಟ್ ಕೆ ಗಿಫ್ಟ್; ಕದ್ದು ಕೊಟ್ಟಂತಿದೆ ಎಂತಿದ್ದಾರೆ ಅಭಿಮಾನಿಗಳು
ಸಿನಿಮಾದಲ್ಲಿ ಪ್ರಭಾಸ್ ಬೇರೆಯದ್ದೇ ರೀತಿಯ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲನೇ ಬಾರಿಗೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪ್ರಭಾಸ್‌ಗೆ ಜೋಡಿಯಾಗಿ ನಟಿಸುತ್ತಿದ್ದಾರೆ.