Site icon Vistara News

Amitabh Bachchan: 50 ಕೋಟಿ ರೂ. ಮೌಲ್ಯದ ಬಂಗಲೆ ಗಿಫ್ಟ್‌ ಕೊಟ್ಟ ಅಮಿತಾಭ್‌; ಮಗ, ಸೊಸೆಗೆ ಅಲ್ಲ!

Amitabh Bachchan

ಬೆಂಗಳೂರು: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ಅವರ ಪತ್ನಿ ಜಯಾ ಬಚ್ಚನ್ ಮುಂಬೈನ ಜುಹೂನಲ್ಲಿರುವ ತಮ್ಮ ಬಂಗಲೆಯನ್ನು (ಪ್ರತೀಕ್ಷಾ ಮನೆ) ಮಗಳು ಶ್ವೇತಾ ನಂದಾಗೆ ಉಡುಗೊರೆಯಾಗಿ ನೀಡಿದ್ದಾರೆ. ವಿಠ್ಠಲನಗರ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿರುವ ಬಂಗಲೆಯು 674 ಚದರ ಮೀಟರ್ ಮತ್ತು 890.47 ಚದರ ಮೀಟರ್ ಅಳತೆಯ ಎರಡು ಪ್ಲಾಟ್‌ಗಳಲ್ಲಿ ಇದೆ. ಇವುಗಳ ಮೌಲ್ಯ ಅಂದಾಜು 50.63 ಕೋಟಿ ರೂ. ಎಂದು ವರದಿಯಾಗಿದೆ.

ಬಾಲಿವುಡ್ ಮೆಗಾಸ್ಟಾರ್ ಮತ್ತು ಅವರ ಕುಟುಂಬವು ತಮ್ಮ ವೃತ್ತಿಜೀವನದ ಆರಂಭದಲ್ಲಿ ಹಲವು ವರ್ಷಗಳ ಕಾಲ ಪ್ರತೀಕ್ಷಾ ನಿವಾಸದಲ್ಲಿ ವಾಸಿಸುತ್ತಿದ್ದರು. ಜುಹುದಲ್ಲಿ ಎರಡು ಇತರ ಬಂಗಲೆಗಳನ್ನು ಹೊಂದಿದ್ದಾರೆ. ಜಲ್ಸಾ ಮತ್ತು ಜನಕ್. ಶ್ವೇತಾ ಬಚ್ಚನ್ ನಂದಾ ಅವರು ಲೇಖಕಿ, ಅಂಕಣಕಾರರು, ಮಾಜಿ ಮಾಡೆಲ್ ಮತ್ತು ಉದ್ಯಮಿ. ಅವರ ‘ಪ್ಯಾರಡೈಸ್ ಟವರ್ಸ್’ ಎಂಬ ಕಾದಂಬರಿ ಸಖತ್‌ ಮಾರಾಟವಾಗಿತ್ತು.

ವರದಿಗಳ ಪ್ರಕಾರ, ನಟ ಸುಮಾರು 60 ಕೋಟಿ ವಾರ್ಷಿಕ ಆದಾಯದೊಂದಿಗೆ 3,190 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಅಮಿತಾಭ್‌ ಬಚ್ಚನ್ ಬಳಿಯಿರುವ ಬೆಲೆಬಾಳುವ ಆಸ್ತಿಗಳಲ್ಲಿ ಹಲವು ಸೈಟ್‌ಗಳು, ಬಂಗಲೆಗಳು, ಐಷಾರಾಮಿ ಕಾರುಗಳು ಒಳಗೊಂಡಿವೆ. ಗೇಮ್ ಶೋ, ಕೌನ್ ಬನೇಗಾ ಕರೋಡ್‌ಪತಿಯ ಒಂದು ಸಂಚಿಕೆಯಲ್ಲಿ, ಅಮಿತಾಭ್‌ ಬಚ್ಚನ್ ತಮ್ಮ ತಂದೆ ಡಾ ಹರಿವಂಶರಾಯ್‌ ಬಚ್ಚನ್ ಅವರ ಬಂಗಲೆಗೆ ಪ್ರತೀಕ್ಷಾ ಎಂದು ಹೆಸರಿಟ್ಟಿದ್ದಾಗಿ ಬಹಿರಂಗಪಡಿಸಿದ್ದರು. ಅವರ ತಂದೆಯ ಕವಿತೆಯಲ್ಲಿ ‘ಸ್ವಾಗತ್ ಸಬ್ಕೆ ಲಿಯೇ ಯಹಾಂ ಪರ್ ನಹಿ ಕಿಸಿಕೆ ಲಿಯೇ ಪ್ರತೀಕ್ಷಾ’ ಎಂದು ಉಲ್ಲೇಖಿಸಲಾಗಿತ್ತು.

ಇದನ್ನೂ ಓದಿ; Amitabh Bachchan: ಸೀಕ್ವೆಲ್‌ ಆಗ್ತಾ ಇದೆ ಅಮಿತಾಭ್‌ ನಟನೆಯ ʻಖಾಕಿʼ ಸಿನಿಮಾ!

ಶ್ವೇತಾ ಬಚ್ಚನ್‌ ಅವರಿಗೆ ನವ್ಯಾ ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಎಂಬ ಇಬ್ಬರು ಮಕ್ಕಳಿದ್ದಾರೆ. ಅಗಸ್ತ್ಯ ನಂದಾ ಮತ್ತು ಶಾರುಖ್‌ ಮಗಳು ಸುಹಾನಾ ಖಾನ್ (Suhana Khan) ಇತ್ತೀಚೆಗೆ ಮನೀಶ್ ಮಲ್ಹೋತ್ರಾ ಅವರ ದೀಪಾವಳಿ ಪಾರ್ಟಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ಅವರ ನಿರ್ದೇಶನದ ಮುಂಬರುವ ‘ದಿ ಆರ್ಚೀಸ್’ ನಲ್ಲಿ ಈ ಇಬ್ಬರು ಸ್ಟಾರ್ ಮಕ್ಕಳು ʻದಿ ಆರ್ಚೀಸ್ʼ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇದೀಗ ಇಬ್ಬರು ರಿಲೇಶನ್‌ಶಿಪ್‌ನಲ್ಲಿ ಇದ್ದಾರೆ ಎಂಬ ಗಾಸಿಪ್‌ಗಳು ಇವೆ.

Exit mobile version