ಮುಂಬೈ: ಬಾಲಿವುಡ್‌ನ ಹಿರಿಯ ನಟ ಅಮಿತಾಭ್ ಬಚ್ಚನ್ (Amitabh Holi ) ʼಪ್ರಾಜೆಕ್ಟ್ ಕೆʼ ಚಿತ್ರೀಕರಣದ ವೇಳೆ ಪಕ್ಕೆಲುಬಿಗೆ ಗಾಯ ಮಾಡಿಕೊಂಡಿದ್ದು, ಸದ್ಯ ಬೆಡ್ ರೆಸ್ಟ್‌ನಲ್ಲಿದ್ದಾರೆ. ಇದೇ ವೇಳೆ ಹೋಳಿ ಹಬ್ಬ ಕೂಡ ಬಂದಿರುವುದರಿಂದ ನಟ ಬೇಸರದಿಂದ ಬ್ಲಾಗ್ ಅನ್ನು ಬರೆದುಕೊಂಡಿದ್ದಾರೆ. “ಈ ವರ್ಷ ನನಗೆ ಹೋಳಿ ಆಡಲು ಆಗುತ್ತಿಲ್ಲ” ಎಂದು ನೋವನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: Holi 2023: ಕಾರವಾರದಲ್ಲಿ ಸಡಗರದ ಹೋಳಿ; ಸಮುದ್ರ ಸ್ನಾನದಲ್ಲಿ ಮಿಂದೆದ್ದ ಜನತೆ
ಹೋಳಿಯ ಹಳೆ ನೆನಪನ್ನೂ ಮಾಡಿಕೊಂಡಿರುವ ಬಿಗ್ ಬಿ, “ವಿಜ್ರಂಭಣೆಯಿಂದ ಆಚರಿಸುತ್ತಿದ್ದ ಹೋಳಿ ಸಂಭ್ರಮ ಕಳೆದು ಹೋಗಿದೆ. ವರ್ಷಗಳೇ ಕಳೆದಿವೆ.. ತೆರೆದ ಮನೆ ಬಾಗಿಲು… ಸಂಭ್ರಮದ ಸ್ವಾಗತ… ಹಾಡು, ನೃತ್ಯದಲ್ಲೇ ಮೈ ಮರೆಯುತ್ತಿದ್ದ ನೂರಾರು ಜನರು… ಮುಂಜಾನೆ ಆರಂಭವಾಗಿ ಮರುದಿನವರೆಗೂ ನಡೆಯುತ್ತಿದ್ದ ಸಂಭ್ರಮ… ಆ ದಿನಗಳು ಮತ್ತೆ ಬರದು. ಮತ್ತೆ ಬರಲಿ ಎಂದು ನಾನು ಆಶಿಸುತ್ತೇನೆ. ಆದರೆ ಅದು ಕಷ್ಟ.” ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ ಈ ವರ್ಷದ ಹೋಳಿಯನ್ನು ಮನೆಯಲ್ಲೇ ನರಳುತ್ತ ಯಾವುದೇ ದೈಹಿಕ ಚಟುವಟಿಕೆ ಇಲ್ಲದೆಯೇ ಮಾಡಿದ್ದೇನೆ ಎಂದೂ ಅವರು ಹೇಳಿಕೊಂಡಿದ್ದಾರೆ.
ಅದಕ್ಕೂ ಮೊದಲು ಮಂಗಳವಾರ ರಾತ್ರಿ ಬ್ಲಾಗ್ ಬರೆದಿದ್ದ ಅವರು ಕಾಮನ ದಹನ ಮಾಡಿದ್ದಾಗಿ ಹೇಳಿದ್ದರು. “ಹೋಳಿ ಯಾವ ದಿನ ಎಂದು ಗೊಂದಲಿವಿದ್ದಿದ್ದರಿಂದ ಎಷ್ಟೋ ಕೆಲಸ ಮಾಡದೆಯೇ ಹೋಳಿ ಮಾಡಿ ಮುಗಿಸಿದ್ದಾಯಿತು. ಇಂದೇ ಕಾಮನ ದಹನ ಮಾಡಿದ್ದೇವೆ. ಗಾಯಾಳುವಾಗಿರುವ ನನಗೆ ಹೋಳಿ ಆಡುವ ಭಾಗ್ಯವಿರಲಿಲ್ಲ” ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Amitabh Bachchan: ಬೆಡ್ ರೆಸ್ಟ್‌ನಲ್ಲಿರುವ ಅಮಿತಾಭ್‌ರಿಂದ ಬಂತು ಹೊಸ ಟ್ವೀಟ್; ನನಗಾಗಿ ಪ್ರಾರ್ಥಿಸಿ ಎಂದ ಬಿಗ್ ಬಿ