Site icon Vistara News

Amitabh Bachchan : ಜಯಾ ಜೋಡಿಯಾಗಿ 50 ವರ್ಷ: ಸಮಯ ಎಣಿಸುತ್ತ ಬ್ಲಾಗ್‌ ಹಂಚಿಕೊಂಡ ಬಿಗ್‌ ಬಿ

Amitabh Bachchan and jaya bachchan old photo

#image_title

ಮುಂಬೈ: ಬಾಲಿವುಡ್‌ನ ಅತ್ಯಂತ ಹಿರಿಯ ಜೋಡಿ ಅಮಿತಾಭ್‌ ಬಚ್ಚನ್‌ (Amitabh Bachchan) ಮತ್ತು ಜಯಾ ಬಚ್ಚನ್‌ ಮದುವೆಯಾಗಿ ಇಂದಿಗೆ ಸರಿಯಾಗಿ 50 ವರ್ಷಗಳು ಕಳೆದಿವೆ. ದಾಂಪತ್ಯದಲ್ಲಿ ಸುವರ್ಣೋತ್ಸವ ಆಚರಿಸಿಕೊಳ್ಳುತ್ತಿರುವ ಸಲುವಾಗಿ ಅಮಿತಾಭ್‌ ಅವರು ತಮ್ಮ ಬ್ಲಾಗ್‌ನಲ್ಲಿ ಕೆಲವು ಸಾಲುಗಳನ್ನು ಬರೆದಿದ್ದಾರೆ.

ಶುಕ್ರವಾರ ರಾತ್ರಿಯೇ ಬ್ಲಾಗ್‌ ಬರೆದಿರುವ ಅಮಿತಾಭ್‌, “ಜೂನ್‌ 3 ಕೆಲವೇ ಕ್ಷಣಗಳಲ್ಲಿ ಬರುತ್ತದೆ. ಹಾಗೆಯೇ ವರ್ಷಗಳನ್ನು 50 ಎಂದು ಎಣಿಸಲಾಗುವುದು. ನಿಮ್ಮಿಂದ ಬಂದಿರುವ ಮತ್ತು ಬರಬಹುದಾದ ಪ್ರೀತಿ, ಗೌರವ ಮತ್ತು ಶುಭಾಶಯಗಳಿಗೆ ಕೃತಜ್ಞತೆಗಳು” ಎಂದು ಬರೆದಿದ್ದಾರೆ.

ಇದನ್ನೂ ಓದಿ: Amitabh Bachchan: ಜುಟ್ಟುವನ್ನೇ ಫ್ಯಾನ್‌ ಮಾಡಿಕೊಂಡ ವ್ಯಕ್ತಿ; ವಿಡಿಯೊಗೆ ಅಮಿತಾಭ್ ಬಚ್ಚನ್ ಫಿದಾ
ಅಪ್ಪ ಅಮ್ಮನ ವಿವಾಹ ವಾರ್ಷಿಕೋತ್ಸವದ ಸಂಬಂಧ ಶ್ವೇತಾ ಬಚ್ಚನ್‌ ಅವರು ಕೂಡ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ತಾರಾ ಜೋಡಿಯ ಅತ್ಯಂತ ಹಳೆಯದೊಂದು ಫೋಟೋವನ್ನು ಹಂಚಿಕೊಂಡಿರುವ ಅವರು, “ಹ್ಯಾಪಿ 50 ಪೋಷಕರೇ. ಈಗ ನೀವು ʼಗೋಲ್ಡನ್‌ʼ. ಸುದೀರ್ಘ ದಾಂಪತ್ಯದ ಗುಟ್ಟೇನು ಎಂದು ನಾನು ಒಮ್ಮೆ ಅವರನ್ನು ಕೇಳಿದ್ದೆ. ಅದಕ್ಕೆ ನನ್ನ ಅಮ್ಮ ಪ್ರೀತಿ ಎಂದು ಹೇಳಿದ್ದರೆ ಅಪ್ಪ, ʼಹೆಂಡತಿ ಯಾವಾಗಲೂ ಸರಿಯೇʼ ಎಂದು ಹೇಳಿದ್ದರು” ಎಂದು ಹೇಳಿದ್ದಾರೆ.‌


ಶ್ವೇತಾ ಬಚ್ಚನ್‌ ಅವರು ಹಂಚಿಕೊಂಡಿರುವ ಫೋಟೋದಲ್ಲಿ ಜಯಾ ಬಚ್ಚನ್‌ ಸೀರೆಯುಟ್ಟು ತಲೆಯ ಮೇಲೆ ಸೆರಗನ್ನು ಹೊದ್ದಿದ್ದಾರೆ. ಹಾಗೆಯೇ ಅಮಿತಾಭ್‌ ಅವರು ಪ್ರಿಂಟಡ್‌ ಶರ್ಟ್‌ ಧರಿಸಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ನೋಡಿಕೊಳ್ಳುತ್ತಿರುವ ಕ್ಯಾಂಡಿಡ್‌ ಫೋಟೋ ಅದಾಗಿದೆ. ಈ ಪೋಸ್ಟ್‌ಗೆ ಬಾಲಿವುಡ್‌ನ ಅನೇಕ ಗಣ್ಯರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಅಮಿತಾಭ್‌ ಮತ್ತು ಜಯಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಶುಭ ಹಾರೈಸುತ್ತಿದ್ದಾರೆ.

Exit mobile version