ಮುಂಬಯಿ: ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್, ಪ್ರಭಾಸ್, ನಾನಿ, ದುಲ್ಕರ್ ಸಲ್ಮಾನ್ ಹಾಗೂ ಚಿತ್ರ ನಿರ್ಮಾಪಕರಾದ ರಾಘವೇಂದ್ರ ರಾವ್, ಪ್ರಶಾಂತ್ ನೀಲ್ ಮತ್ತು ನಾಗ್ ಅಶ್ವಿನ್ ಅವರೆಲ್ಲರೂ ಒಂದೇ ಫ್ರೇಮ್‌ನಲ್ಲಿರುವ ಒಂದು ಫೋಟೊ ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಇಷ್ಟು ದೊಡ್ಡ ತಾರಾಗಡಣವನ್ನು ಜತೆಯಾಗಿ ನೋಡಿ ಫುಲ್ ಖುಷಿ ಆಗಿದ್ದಾರೆ.
ಹೈದರಾಬಾದ್‌ನ ನಿರ್ಮಾಣ ಸಂಸ್ಥೆ ʻವೈಜಯಂತಿ ಮೂವೀಸ್ʼನ ಹೊಸ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ತೆಗೆದಿರುವ ಫೋಟೊ ಇದಾಗಿದೆ. ಯಶಸ್ವಿ 50 ವರ್ಷಗಳನ್ನು ಪೂರೈಸಿರುವ ವೈಜಯಂತಿ ಮೂವೀಸ್ ಪ್ರಸ್ತುತ ಪ್ರಭಾಸ್, ಅಮಿತಾಬ್ ಮತ್ತು ದೀಪಿಕಾ ಪಡುಕೋಣೆ ಅಭಿನಯದಲ್ಲಿ ‘ಪ್ರಾಜೆಕ್ಟ್ ಕೆ’ ಸಿನಿಮಾ ಮಾಡುತ್ತಿದೆ.
ಈ ಹಿಂದೆ, ನಟಿ ದೀಪಿಕಾ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಚಿತ್ರದ ಶೂಟಿಂಗ್ ದಿನಾಂಕಗಳನ್ನು ಮುಂದೂಡುವಂತೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ನಿರ್ಮಾಪಕರಿಗೆ ವಿನಂತಿಸಿದ್ದರು.
500 ಕೋಟಿ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರವು ಏಕಕಾಲದಲ್ಲಿ ಹಿಂದಿ ಮತ್ತು ತೆಲುಗಿನಲ್ಲಿ ಚಿತ್ರೀಕರಣಗೊಳ್ಳುತ್ತಿದೆ ಮತ್ತು ತೆಲುಗು ಚಿತ್ರರಂಗದಲ್ಲಿ ದೀಪಿಕಾ ಅವರ ಚೊಚ್ಚಲ ಚಿತ್ರ ಇದಾಗಿದೆ, ‘ಪ್ರಾಜೆಕ್ಟ್ ಕೆ’ ಸಿನಿಮಾವನ್ನು ನಾಗ್ ಅಶ್ವಿನ್ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ : Brahmastra Movie : ತೆರೆಯ ಮೇಲೆ ಮೊದಲ ಬಾರಿಗೆ ʼRaliaʼ ಚುಂಬನ : ಫ್ಯಾನ್‌ಗಳು ಫುಲ್ ಖುಷ್