Site icon Vistara News

Amitabh Bachchan : ಅಮಿತಾಭ್‌ ಅರೆಸ್ಟೆಡ್‌! ಇನ್‌ಸ್ಟಾಗ್ರಾಂ ಪೋಸ್ಟ್‌ ಮೂಲಕವೇ ಅಭಿಮಾನಿಗಳಲ್ಲಿ ಭಯ ಹುಟ್ಟಿಸಿದ ಬಿಗ್‌ ಬಿ!

#image_title

ಮುಂಬೈ: ಇತ್ತೀಚೆಗೆ ನಟ ಅಮಿತಾಭ್‌ ಬಚ್ಚನ್‌ (Amitabh Bachchan) ಅವರು ಬೈಕ್‌ ಮೇಲೆ ಹೆಲ್ಮೆಟ್‌ ಇಲ್ಲದೆಯೇ ಸವಾರಿ ಮಾಡಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು. ಇದರ ಬಗ್ಗೆ ಜನರು ಕೂಡ ಬಿಗ್‌ ಬಿ ಬಗ್ಗೆ ಬೇಸರ ಹೊರಹಾಕಿದ್ದರು. ಅದರ ಬೆನ್ನಲ್ಲೇ ಇದೀಗ ಅಮಿತಾಭ್‌ ಅವರು ʼಅರೆಸ್ಟೆಡ್‌ʼ ಎನ್ನುವ ಮತ್ತೊಂದು ಪೋಸ್ಟ್‌ ಮಾಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಮುಂಬೈ ಪೊಲೀಸ್‌ ಜೀಪಿನ ಪಕ್ಕದಲ್ಲಿ ಜೀಪಿಗೆ ಒರಗಿ ನಿಂತಿರುವ ಫೊಟೋವನ್ನು ಅಮಿತಾಭ್‌ ಹಂಚಿಕೊಂಡಿದ್ದಾರೆ. ಬೇಸರದ ಮುಖ ಮಾಡಿಕೊಂಡಿರುವ ಫೋಟೋ ಅದಾಗಿದೆ. ಹೆಲ್ಮೆಟ್‌ ಹಾಕದಿರುವ ವಿಚಾರದಲ್ಲಿ ಅಮಿತಾಭ್‌ ಅವರಿಗೆ ಮುಂಬೈ ಪೊಲೀಸರಿಂದಲೂ ಎಚ್ಚರಿಕೆ ಬಂದಿತ್ತು. ಅದರ ಬೆನ್ನಲ್ಲೇ ಅವರು ಈ ರೀತಿಯ ಫೋಟೋ ಹಂಚಿಕೊಂಡಿರುವುದರಿಂದ ಅಭಿಮಾನಿಗಳು ಅಚ್ಚರಿ ಮತ್ತು ಭಯದಿಂದ ಪ್ರಶ್ನೆಗಳನ್ನು ಕೇಳಲಾರಂಭಿಸಿದ್ದಾರೆ.

ಇದನ್ನೂ ಓದಿ: Amitabh Bachchan: ಜುಟ್ಟುವನ್ನೇ ಫ್ಯಾನ್‌ ಮಾಡಿಕೊಂಡ ವ್ಯಕ್ತಿ; ವಿಡಿಯೊಗೆ ಅಮಿತಾಭ್ ಬಚ್ಚನ್ ಫಿದಾ
“ನಿಜವಾಗಿಯೂ ನೀವು ಅರೆಸ್ಟ್‌ ಆದಿರಾ?” ಎನ್ನುವಂತಹ ಹಲವಾರು ಪ್ರಶ್ನೆಗಳು ಪೋಸ್ಟ್‌ಗೆ ಬಂದಿವೆ. ಇನ್ನು ಹಲವಾರು ಅಭಿಮಾನಿಗಳು ಇದು ಸಾಧ್ಯವೇ ಇಲ್ಲದ ವಿಚಾರ ಎಂದು ಹೇಳಿದ್ದಾರೆ. “ನಿಮ್ಮಂತಹ ಸಾಧಕರನ್ನು ಮುಟ್ಟುವುದಕ್ಕೂ ಪೊಲೀಸರಿಂದ ಸಾಧ್ಯವಿಲ್ಲ” ಎಂದು ಜನರು ಹೇಳಲಾರಂಭಿಸಿದ್ದಾರೆ.‌


ಇತ್ತೀಚೆಗೆ ಅಮಿತಾಭ್‌ ಅವರು ಅಪರಿಚಿತರೊಬ್ಬರ ಬೈಕ್‌ನಲ್ಲಿ ಪ್ರಯಾಣ ಮಾಡಿದ್ದರು. ತಮ್ಮ ಸೆಟ್‌ಗೆ ತೆರಳಲು ಸಮಯವಾಗಿತ್ತಾದ್ದರಿಂದ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ಅಪರಿಚಿತರ ಬೈಕ್‌ ಹತ್ತಿದೆ ಎಂದು ಹೇಳಿಕೊಂಡಿದ್ದರು. ಹಾಗೆಯೇ ಬೈಕ್‌ ರೈಡ್‌ ಅವಕಾಶ ಮಾಡಿಕೊಟ್ಟ ಅಪರಿಚಿತ ವ್ಯಕ್ತಿಗೆ ಧನ್ಯವಾದಗಳನ್ನು ಅರ್ಪಿಸಿದ್ದರು. ಅವರ ಆ ಪೋಸ್ಟ್‌ ಸಕತ್‌ ವೈರಲ್‌ ಆಗಿತ್ತು.

Exit mobile version