Site icon Vistara News

Kalki 2898 – AD: ನೀವು ದೊಡ್ಡ ಕಲಾವಿದರು ಎಂದು ಕಮಲ್‌ ಹಾಸನ್‌ರನ್ನು ಹೊಗಳಿದ ಬಿಗ್‌ ಬಿ!

Amitabh Bachchan Kamal Haasan

ಬೆಂಗಳೂರು: ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ಅವರ `ಪ್ರಾಜೆಕ್ಟ್ ಕೆ‘ ಸಿನಿಮಾದ ಟೈಟಲ್‌ ರಿವೀಲ್‌ ಆಗಿದೆ. ಈ ಸಿನಿಮಾಗೆ ‘ಕಲ್ಕಿ 2898 ಎಡಿ’ (Kalki 2898 – AD) ಎನ್ನುವ ಟೈಟಲ್ ಇಡಲಾಗಿದೆ. ಗ್ಲಿಂಪ್ಸ್‌ನಲ್ಲಿ ಸಾಕಷ್ಟು ಸಂಗತಿಗಳನ್ನು ಹೇಳಿದ್ದಾರೆ ನಿರ್ದೇಶಕರು.

ಅಮೆರಿಕದ ಸ್ಯಾನ್​ ಡಿಯಾಗೋ ನಗರದಲ್ಲಿ ನಡೆದ ‘ಕಾಮಿಕ್​ ಕಾನ್​’ ಉತ್ಸವದಲ್ಲಿ ಈ ಫಸ್ಟ್​ ಗ್ಲಿಂಪ್ಸ್ ಬಿಡುಗಡೆ ಆಗಿದೆ. ಈ ಕಾರ್ಯಕ್ರಮದಲ್ಲಿ ಪ್ರಭಾಸ್ರಾಣಾ ದಗ್ಗುಬಾಟಿ, ಕಮಲ್​ ಹಾಸನ್ ಭಾಗಿ ಆಗಿದ್ದರು. ಈ ಕಾರ್ಯಕ್ರಮಕ್ಕೆ ವಿಡಿಯೊ ಕಾಲ್ ಮೂಲಕ ಅಮಿತಾಭ್‌ ಬಚ್ಚನ್‌ ಇದ್ದರು. ಈ ವೇಳೆ ಅಮಿತಾಬ್‌ ಅವರು ಕಮಲ್ ಹಾಸನ್ ಅವರನ್ನು ಹಾಡಿ ಹೊಗಳಿದ್ದಾರೆ.

‘ನಿಮ್ಮ ಎನರ್ಜಿಯಿಂದ ನಾವು ಬದುಕುತ್ತಿದ್ದೇವೆ’ ಎಂದು ಕಮಲ್ ಹೇಳುತ್ತಿದ್ದಂತೆಯೇ ‘ನೀವು ದೊಡ್ಡ ಕಲಾವಿದರು. ನಿಮ್ಮ ಸಿನಿಮಾಗಳು ವಾಸ್ತವತೆಗೆ ಹತ್ತಿರವಿರುತ್ತವೆ. ನೀವು ಸಿನಿಮಾಗಾಗಿ ಸಾಕಷ್ಟು ಕಷ್ಟ ಪಡುತ್ತೀರಿ. ನೀವು ನಿರ್ವಹಿಸಿದ ಪಾತ್ರಗಳು ಅದ್ಭುತವಾಗಿವೆ. ನಾವಿಬ್ಬರೂ ಒಟ್ಟಾಗಿ ನಟಿಸಿರುವುದು ಹೆಮ್ಮೆಯ ಸಂಗತಿ’ ಎಂದು ಅಮಿತಾಭ್ ಮಾತನಾಡಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಕಮಲ್ ಹಾಸನ್ ಅವರನ್ನು ಹೊಗಳಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಜುಲೈ 1 ರಂದು ‘ಕಲ್ಕಿ 2898 ಎಡಿ’ ಟೀಸರ್‌ ಬಿಡುಗಡೆಗೊಂಡಿದೆ. ಪ್ರಭಾಸ್ ಅವರ ಫಸ್ಟ್ ಲುಕ್ ಪೋಸ್ಟರ್ ಮೊನ್ನೆತಾನೆ ಬಿಡುಗಡೆಗೊಂಡಿತ್ತು. ಸಾಮಾನ್ಯ ಪ್ರತಿಕ್ರಿಯೆನ್ನು ಪಡೆದುಕೊಂಡಿತು. ‘ಪ್ರಾಜೆಕ್ಟ್​ ಕೆ’ ಚಿತ್ರದಲ್ಲಿ ಪ್ರಭಾಸ್ ಅವರು ಕಲ್ಕಿ ಅವತಾರ ತಾಳಿದ್ದಾರೆ. ಈ ಸಿನಿಮಾದಲ್ಲಿ ಅನೇಕ ಸೂಪರ್ ಹೀರೊ ಮಾದರಿಯ ಪಾತ್ರಗಳು ಕಾಣಿಸಿವೆ. ದೀಪಿಕಾ ಪಡುಕೋಣೆ ಅವರು ಕೂಡ ‘ಕಲ್ಕಿ 2898-ಎಡಿ’ ಚಿತ್ರದಲ್ಲಿದ್ದಾರೆ. ಅವರ ಪಾತ್ರ ಕೂಡ ಇಲ್ಲಿ ಕಾಣಿಸಿದೆ.ಅಮಿತಾಭ್ ಬಚ್ಚನ್ ಅವರ ಮುಖವನ್ನು ಮಾತ್ರ ತೋರಿಸಲಾಗಿದೆ. ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ: Kalki 2898 – AD: ʻಪ್ರಾಜೆಕ್ಟ್‌ ಕೆʼ ಸಿನಿಮಾ ಟೈಟಲ್‌ ರಿವೀಲ್‌; ಪ್ರಭಾಸ್‌, ದೀಪಿಕಾ, ಅಮಿತಾಭ್‌ ಲುಕ್‌ ಔಟ್‌!

“ಜಗತ್ತನ್ನು ಕತ್ತಲೆಯು ಸ್ವಾಧೀನಪಡಿಸಿಕೊಂಡಾಗ, ಒಬ್ಬ ವೀರನು ಉದಯಿಸುತ್ತಾನೆ” ಎಂದು ವಿಡಿಯೊಗೆ ಶೀರ್ಷಿಕೆಯನ್ನು ನೀಡಿದೆ ಚಿತ್ರತಂಡ. ಮಹಾನಟಿ ಖ್ಯಾತಿಯ ನಾಗ್ ಅಶ್ವಿನ್ ಬರೆದು ನಿರ್ದೇಶಿಸಿದ್ದಾರೆ.

ತೆಲುಗು, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ ಪ್ರಾಜೆಕ್ಟ್‌ ಕೆ ಸಿನಿಮಾ ಸ್ಯಾನ್‌ ಡಿಯಾಗೊದಲ್ಲಿ ಕಾಮಿಕ್‌ ಕಾನ್‌ನ ಭಾಗವಾಗಲಿದೆ ಎಂದು ಘೋಷಿಸಲಾಗಿತ್ತು. ಈ ರೀತಿ ಕಾಮಿಕ್‌ ಕಾನ್‌ಗೆ ಆಯ್ಕೆಯಾದ ಮೊದಲನೇ ಭಾರತೀಯ ಸಿನಿಮಾ ಎನ್ನುವ ಖ್ಯಾತಿಯನ್ನೂ ಇದು ಪಡೆದುಕೊಂಡಿತ್ತು. ಈ ಬಗ್ಗೆ ದೀಪಿಕಾ ಪಡುಕೋಣೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದರು. “ಕಾಮಿಕ್ ಕಾನ್‌ಗೆ ಹೋದ ಮೊದಲ ಭಾರತೀಯ ಚಲನಚಿತ್ರದ ಭಾಗವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅಲ್ಲಿ ನಿಮ್ಮನ್ನು ನೋಡೋಣ” ಎಂದು ದೀಪಿಕಾ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು.

Exit mobile version