ಬೆಂಗಳೂರು: ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ತಮಗೆ ಪೆಟ್ಟಾದ ವಿಚಾರವನ್ನು ಅಕ್ಟೋಬರ್ 22ರಂದು ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ. ಕೌನ್ ಬನೇಗಾ ಕರೋಡ್‌ಪತಿ ಸೆಟ್‌ನಲ್ಲಿ ಕಬ್ಬಿಣದ ತುಂಡು ಕಾಲಿಗೆ ತಗುಲಿ ತೀವ್ರ ರಕ್ತಸ್ರಾವ ಆಗಿದ್ದು, ಕೂಡಲೇ ಸೆಟ್‌ನಲ್ಲಿ ಇದ್ದವರು ಬಿಗ್‌ಬಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಜತೆಗೆ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ಯಾವುದೇ ಒತ್ತಡ ಇಲ್ಲದೇ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ʻಪ್ರಸ್ತುತ ನಾನು ಆರೋಗ್ಯವಾಗಿ ಇದ್ದೇನೆ ಯಾರು ಆತಂಕಪಡಬೇಡಿʼ ಎಂದು ಅಮಿತಾಭ್ ಬಚ್ಚನ್ ತಿಳಿಸಿದ್ದಾರೆ. ಅಭಿಮಾನಿಗಳು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿ | Amitabh Bachchan | ನಟ ಅಮಿತಾಭ್ ಬಚ್ಚನ್ ಪ್ರತಿಮೆ ಸ್ಥಾಪಿಸಿದ ಭಾರತೀಯ ಮೂಲದ ಅಮೆರಿಕ ಕುಟುಂಬ
ಹಲವು ವರ್ಷಗಳಿಂದ ಬಿಗ್‌ಬಿ ಈ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಕೆಬಿಸಿ ಶೂಟಿಂಗ್‌ನಲ್ಲಿ ಅಮಿತಾಭ್ ಬಚ್ಚನ್ ಭಾಗವಹಿಸಿದ್ದರು. ಶೂಟಿಂಗ್ ವೇಳೆ ಅಚಾನಕ್ ಆಗಿ ಕಬ್ಬಿಣದ ತುಂಡು ತಗುಲಿ ಈ ಘಟನೆ ನಡೆದಿದೆ.
ಅಮಿತಾಭ್ ಅವರು ನಟ ಪ್ರಭಾಸ್ ನಟನೆಯ ‘ಪ್ರಾಜೆಕ್ಟ್ – K’ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಉಂಚೈ’, ‘ಗಣಪತ್’, ‘ಘೂಮೆರ್’ ಸೇರಿದಂತೆ ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಮೇಶ್ ಅರವಿಂದ್ ನಿರ್ದೇಶನದ ‘ಬಟರ್‌ಫ್ಲೈ’ ಕನ್ನಡ ಚಿತ್ರಕ್ಕೆ ಹಾಡೊಂದನ್ನು ಹಾಡಿದ್ದಾರೆ ಎಂಬ ಸುದ್ದಿಯೂ ಇದೆ. ಇತ್ತೀಚೆಗಷ್ಟೆ ಬಿಗ್‌ಬಿ ಅಮಿತಾಭ್ ಬಚ್ಚನ್ ನಟನೆಯ ‘ಬ್ರಹ್ಮಾಸ್ತ್ರ’ ಹಾಗೂ ‘ಗುಡ್‌ಬೈ’ ಸಿನಿಮಾಗಳು ಬಿಡುಗಡೆ ಆಗಿದ್ದವು.
ಇದನ್ನೂ ಓದಿ | Amitabh Bachchan | ಕೋಟ್ಯಂತರ ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಕ್ಷಮೆಯಾಚಿಸಿದ್ದು ಏಕೆ?