ಬೆಂಗಳೂರು: ಅಮಿತಾಭ್ ಬಚ್ಚನ್ (Amitabh Bachchan) ತಮ್ಮ ಸೊಸೆ, ನಟಿ ಐಶ್ವರ್ಯಾ ರೈ ಬಚ್ಚನ್ ಅವರ ಇನ್‌ಸ್ಟಾಗ್ರಾಮ್ ಅನ್‌ಫಾಲೋ ಮಾಡಿರುವ ಸುದ್ದಿ ಬೆನ್ನಲ್ಲೇ ಹೊಸ ಟ್ವೀಟ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ‘ಎಲ್ಲವನ್ನೂ ಹೇಳಿದೆ, ಎಲ್ಲವನ್ನೂ ಮಾಡಿದೆ’ ಎಂದು ಅಮಿತಾಭ್ ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ, ‘ಸೋ ಡು ದಿ ಡನ್ ಆ್ಯಂಡ್ ಡನ್ ದಿ ಡೂ’ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್ ವೈರಲ್ ಆದ ಬೆನ್ನಲ್ಲೇ ಸಾಕಷ್ಟು ಚರ್ಚೆಗಳು ಆಗುತ್ತಿವೆ. ಮಗ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಜತೆಗಿನ ವಿಚ್ಛೇದನದ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.
ಸಲ್ಮಾನ್ ಖಾನ್, ಅಭಿಷೇಕ್ ಬಚ್ಚನ್, ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ, ಆಲಿಯಾ ಭಟ್, ವಿರಾಟ್ ಕೊಹ್ಲಿ, ಶ್ವೇತಾ ಬಚ್ಚನ್ ನಂದಾ ಮತ್ತು ನವ್ಯಾ ನವೇಲಿ ನಂದಾ ಸೇರಿದಂತೆ ಅಮಿತಾಭ್ ಇನ್‌ಸ್ಟಾಗ್ರಾಮ್‌ನಲ್ಲಿ ಒಟ್ಟು 74 ಜನರನ್ನು ಫಾಲೋ ಮಾಡುತ್ತಿದ್ದರು. ಆದರೆ ಐಶ್ವರ್ಯಾ ರೈ ಅವರನ್ನು ಅನ್‌ಫಾಲೋ ಮಾಡುತ್ತಿದ್ದಾರೆ. ಐಶ್ವರ್ಯಾ ಕೂಡ ಅಭಿಷೇಕ್ ಬಚ್ಚನ್ ಅವರನ್ನು ಮಾತ್ರ ಫಾಲೋ ಮಾಡುತ್ತಿದ್ದಾರೆ.
ಮುಂಬೈನಲ್ಲಿ ನಡೆದ ಅಗಸ್ತ್ಯ ನಂದಾ ಅವರ ಚೊಚ್ಚಲ ಚಲನಚಿತ್ರ ʻದಿ ಆರ್ಚೀಸ್ʼ ವಿಶೇಷ ಪ್ರದರ್ಶನದಲ್ಲಿ ಇಡೀ ಬಚ್ಚನ್ ಕುಟುಂಬ ಭಾಗಿಯಾಗಿತ್ತು. ಮೂಲಗಳ ಪ್ರಕಾರ ಅಗಸ್ತ್ಯ ನಂದಾ ಪಾಪರಾಜಿಗಳ ಕ್ಯಾಮೆರಾಗೆ ಪೋಸ್ ಕೊಡುವಾಗ ಐಶ್ವರ್ಯಾ ರೈ ಅವರು ಅಗಸ್ತ್ಯ ಅವರಿಗೆ ನಗುತ್ತಲೇ ಟೀಕೆ ಮಾಡಿದ್ದರಂತೆ. ‘ನೀನು ಕ್ಯಾಮೆರಾ ಫೇಸ್ ಮಾಡೋದು ಕಲಿಯಬೇಕು’ ಎಂದು ಹೇಳಿದ್ದರು. ಈ ವಿಡಿಯೊ ಸಾಕಷ್ಟು ವೈರಲ್ ಆಗಿತ್ತು. ಈ ಕಾರಣದಿಂದಲೇ ಅಮಿತಾಭ್ ಅವರು ಐಶ್ವರ್ಯಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ವರದಿಯಾಗಿತ್ತು.
ಇದನ್ನೂ ಓದಿ: Amitabh Bachchan: ಐಶ್ವರ್ಯಾ ರೈ ಇನ್‌ಸ್ಟಾ ಅನ್‌ಫಾಲೋ ಮಾಡಿದ ಅಮಿತಾಭ್ ಬಚ್ಚನ್!
T 4854 – everything said everything done .. so do the done and done the do .. pic.twitter.com/wYrAMetoGo
— Amitabh Bachchan (@SrBachchan) December 8, 2023
ಅತ್ತೆ, ನಾದಿನಿ ಕ್ರಾಪ್ ಮಾಡಿ ಫೋಟೊ ಹಂಚಿಕೊಂಡಿದ್ದ ಐಶ್ವರ್ಯಾ ರೈ!
ಅಕ್ಟೋಬರ್ 11ರಂದು (Aishwarya Rai) ಅಮಿತಾಭ್ ಬಚ್ಚನ್ ತಮ್ಮ 81ನೇ ಹುಟ್ಟುಹಬ್ಬ ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಮಧ್ಯರಾತ್ರಿಯೇ ಸಂಭ್ರಮಾಚರಣೆಯಲ್ಲಿ ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಭಾಗಿಯಾಗಿ ವಿಶಸ್ ಕೂಡ ತಿಳಿಸಿದ್ದರು. ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ನವ್ಯಾ ನವೇಲಿ ನಂದಾ ಅವರು ಜಯಾ ಬಚ್ಚನ್, ಆರಾಧ್ಯಾ ಬಚ್ಚನ್ ಮತ್ತು ಅಗಸ್ತ್ಯ ನಂದಾ ಅಮಿತಾಭ್ ಅವರ ಜತೆ ಇರುವ ಫೋಟೊ ಕೂಡ ಶೇರ್ ಮಾಡಿಕೊಂಡಿದ್ದರು. ಇದೇ ಫೋಟೊವನ್ನು ಅಕ್ಟೋಬರ್ 12ರಂದು ಐಶ್ವರ್ಯಾ ರೈ ಫೋಟೊ ಹಂಚಿಕೊಂಡಿದ್ದರು. ಆದರೆ ಅತ್ತೆ ಜಯಾ ಬಚ್ಚನ್, ನವ್ಯಾ ನವೇಲಿ ನಂದಾ ಅವರನ್ನು ಹೊರಗಿಟ್ಟು, ಅಮಿತಾಭ್ ಬಚ್ಚನ್ ಜತೆ ಆರಾಧ್ಯಾ ಬಚ್ಚನ್ ಮಾತ್ರ ಕಾಣುವಂತೆ ಕ್ರಾಪ್ ಮಾಡಿ ಫೋಟೊ ಪೋಸ್ಟ್ ಮಾಡಿದ್ದರು. ʻʻಐಶ್ವರ್ಯಾ ಬೇಕು ಅಂತಲೇ ಫೋಟೊ ಕ್ರಾಪ್ ಮಾಡಿದ್ದಾರೆʼʼ ಎಂದು ನೆಟ್ಟಿಗರು ಕಮೆಂಟ್ ಕೂಡ ಮಾಡಿದ್ದರು.
ಇದನ್ನೂ ಓದಿ: Amitabh Bachchan: 50 ಕೋಟಿ ರೂ. ಮೌಲ್ಯದ ಬಂಗಲೆ ಗಿಫ್ಟ್ ಕೊಟ್ಟ ಅಮಿತಾಭ್; ಮಗ, ಸೊಸೆಗೆ ಅಲ್ಲ!
ಪ್ಯಾರಿಸ್ ಫ್ಯಾಷನ್ ವೀಕ್ ಪೋಸ್ಟ್
ಪ್ಯಾರಿಸ್ ಫ್ಯಾಶನ್ ವೀಕ್ ಫೋಟೊವನ್ನು ಈ ಹಿಂದೆ ನವ್ಯಾ ನವೇಲಿ ನಂದಾ ಹಂಚಿಕೊಂಡಿದ್ದರು. ಅದರಲ್ಲಿ ಐಶ್ವರ್ಯಾ ಕೂಡ ಭಾಗಿಯಾಗಿದ್ದರು. ಅಷ್ಟೇ ಅಲ್ಲದೇ ನವ್ಯಾ ಮತ್ತು ಅವರ ತಾಯಿ ಶ್ವೇತಾ ಬಚ್ಚನ್ ಅವರು ಅದೇ ಇವೆಂಟ್ನಲ್ಲಿ ಭಾಗಿಯಾಗಿದ್ದರು. ಈ ವೇಳೆ ಫೋಟೊ ಶೇರ್ ಮಾಡುವಾಗ ಐಶ್ವರ್ಯಾ ಅವರನ್ನು ಟ್ಯಾಗ್ ಮಾಡಿರಲಿಲ್ಲ. ಹೀಗಾಗಿ ಐಶ್ವರ್ಯಾ ಅವರು ಶೀಘ್ರದಲ್ಲೇ ಅಭಿಷೇಕ್ ಬಚ್ಚನ್ ಅವರಿಗೆ ಡಿವೋರ್ಸ್ ಕೊಡಲಿದ್ದಾರೆ ಎಂಬ ವದಂತಿಗಳು ಶುರುವಾದವು.