Site icon Vistara News

Goodbye Movie | ಬಾಲಿವುಡ್ ಬಿಗ್ ಬಿ ಮಗಳಾಗಿ ರಶ್ಮಿಕಾ ಮಂದಣ್ಣ: ರಿಲೀಸ್‌ ಡೇಟ್‌ ಅನೌನ್ಸ್‌!

Goodbye Movie

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಭ್‌ ಬಚ್ಚನ್‌ ಮಗಳಾಗಿ ನ್ಯಾಷನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ “ಗುಡ್ ಬೈʼ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅವರು ಬಾಲಿವುಡ್‌ನಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಬಿಗ್ ಬಿ ಜತೆಗಿನ ʻಗುಡ್ ಬೈʼ ಚಿತ್ರದ (Goodbye Movie) ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಜತೆ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿದೆ. ಚಿತ್ರವು ಅಕ್ಟೋಬರ್ ೭ರಂದು ಚಿತ್ರಮಂದಿರಗಳಲ್ಲಿ ವಿಶ್ವಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.

ಬಿಗ್‌ ಬಿ ಜತೆ ಕನ್ನಡತಿ
ಮೊದಲ ಬಾರಿಗೆ ಅಮಿತಾಭ್‌ ಬಚ್ಚನ್‌ ಜತೆ ನಟಿಸಿರುವ ರಶ್ಮಿಕಾ ಮಂದಣ್ಣ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಚಿತ್ರದ ಮೊದಲ ಪೋಸ್ಟರ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಪೋಸ್ಟರ್‌ ನೋಡಿ ಹೃದಯಸ್ಪರ್ಶಿ ಸಂಬಂಧದ ಕಥೆಯನ್ನು ನೋಡಲು ಕಾತುರರಾಗಿದ್ದೇವೆ ಎಂದು ಸಿನಿಪ್ರಿಯರು ಕಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಚಿತ್ರದ ಪೋಸ್ಟರ್‌ ನೋಡುವಾಗ ಕುಟುಂಬದ ಬಾಂಧವ್ಯ ಮತ್ತು ತಂದೆ ಮಗಳ ಸಂಬಂಧದ ಕುರಿತು ಹೇಳವಂತಿದೆ. ಪೋಸ್ಟರ್‌ನಲ್ಲಿ ಅಮಿತಾಭ್‌ ಬಚ್ಚನ್‌ ಮತ್ತು ರಶ್ಮಿಕಾ ಮಂದಣ್ಣ ಅವರು ಗಾಳಿಪಟ ಹಾರಿಸುತ್ತಿರುವಾಗ ಮಂದಹಾಸದ ನಗು ಇಬ್ಬರಲ್ಲಿಯೂ ಕಾಣಿಸಿದೆ.

ಇದನ್ನೂ ಓದಿ | Amitabh Bachchan | ಕೋಟ್ಯಂತರ ಅಭಿಮಾನಿಗಳಿಗೆ ಅಮಿತಾಭ್‌ ಬಚ್ಚನ್‌ ಕ್ಷಮೆಯಾಚಿಸಿದ್ದು ಏಕೆ?

ಈ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸಿದ್ದಾರೆ. ವಿಕಾಸ್ ಬಹ್ಲ್ ನಿರ್ದೇಶನದ ಈ ಚಿತ್ರದಲ್ಲಿ ಅಮಿತಾಭ್‌ ಬಚ್ಚನ್‌, ರಶ್ಮಿಕಾ ಮಂದಣ್ಣ, ಸಾಹಿಲ್ ಮೆಹ್ತಾ, ಶಿವಿನ್ ನಾರಂಗ್ ಮತ್ತು ಪಾವೈಲ್ ಗುಲಾಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಬ್ಯೂಸಿಯಾದ ʻಕ್ರಶ್ಮಿಕಾ!ʼ
ಅಯಾನ್ ಮುಖರ್ಜಿ ಅವರ ಬಹು ನಿರೀಕ್ಷಿತ ಚಿತ್ರ “ಬ್ರಹ್ಮಾಸ್ತ್ರʼದಲ್ಲಿ ಅಮಿತಾಭ್‌ ಬಚ್ಚನ್‌ ಕಾಣಿಸಿಕೊಳ್ಳಲಿದ್ದಾರೆ. ರಶ್ಮಿಕಾ ಮಂದಣ್ಣ ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದು, ತಮಿಳಿನ ʻವರಿಸುʼ ಚಿತ್ರದಲ್ಲಿ ದಳಪತಿ ವಿಜಯ್ ಜತೆ ನಾಯಕಿಯಾಗಿ ನಟಿಸಲಿದ್ದಾರೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಚಿತ್ರಕ್ಕೆ, ರಾಷ್ಟ್ರ ಪ್ರಶಸ್ತಿ ವಿಜೇತ ದಿಲ್ ರಾಜು ಅವರು ವೆಂಕಟೇಶ್ವರ ಕ್ರಿಯೇಷನ್ಸ್‌ನ ಪ್ರತಿಷ್ಠಿತ ಬ್ಯಾನರ್ ಅಡಿಯಲ್ಲಿ ಚಿತ್ರಕ್ಕೆ ಬೆಂಬಲ ನೀಡುತ್ತಿದ್ದಾರೆ. ರಶ್ಮಿಕಾ ಬಾಲಿವುಡ್‌ನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ʻಮಿಷನ್ ಮಜ್ನುʼ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ | Rashmika Mandanna | ನನ್ನದೇ ಪುಟ್ಟ ಜಗತ್ತಿನಲ್ಲಿ ನಾನು ಎಂದ ನಟಿ: ಏನಿದೆ ರಶ್ಮಿಕಾ ಮನದಲ್ಲಿ?

Exit mobile version