ಬೆಂಗಳೂರು: ಬಾಲಿವುಡ್ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amitabh Bachchan) ತಮ್ಮ ಮುಂಬರುವ ಚಿತ್ರ ಪ್ರಾಜೆಕ್ಟ್ ಕೆ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದಾರೆ. ಇದೀಗ ನಟ ತಮ್ಮ ಬ್ಲಾಗ್ ಮೂಲಕ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
“ಒಬ್ಬರು ಕಳೆದುಹೋದ ಅವಕಾಶದ ಬಗ್ಗೆ ದುಃಖಿಸಬಹುದು. ಅಥವಾ ಅದನ್ನು ಹಿಂಪಡೆದುಕೊಳ್ಳಬಹುದು. ಸೋಲಿನ ನಷ್ಟ ನೋವಿನಿಂದ ಕೂಡಿರುತ್ತದೆ. ಇದು ನನ್ನ ದೇಹ , ನನ್ನ ಮನಸ್ಸು ನನ್ನ ಇಚ್ಛೆ, ನನ್ನ ಆಸೆ. ನಾನು ಶಾಂತಿಯಿಂದ ಇಲ್ಲ. ನನ್ನ ನ್ಯೂನತೆಗಳ ಬಗ್ಗೆ ನನಗೆ ತಿಳಿದಿದೆ. ನನ್ನೊಳಗೊಇನ ಕೊರತೆಗಳ ಬಗ್ಗೆ ಅರಿವಿದೆ. ಇವೆಲ್ಲವನ್ನೂ ತೊಡೆದುಹಾಕಲು ನಾನು ನಿರ್ಧರಿಸಿದ್ದೇನೆ. ಜೀವನ ಅಂದರೆ ಹರಿತವಾದ ಬಾಣವಿದ್ದಂತೆ, ದೇಹದಿಂದ ಮೊದಲು ನೋವಿನ ಬಾಣವನ್ನು ಹೊರತೆಗೆಯಿರಿʼʼ ಎಂದು ಭಾವನಾತ್ಮಕವಾಗಿ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಬ್ಲಾಗ್‌ನಲ್ಲಿ ಅಮಿತಾಭ್ ಕೆಲವು ದಿನಗಳ ಹಿಂದೆ ʻʻಹೈದರಾಬಾದ್‌ನಲ್ಲಿ ಪ್ರಾಜೆಕ್ಟ್ ಕೆ ಚಿತ್ರೀಕರಣದ ಸಮಯದಲ್ಲಿ, ನಾನು ಗಾಯಗೊಂಡಿದ್ದೇನೆ. ಆದ್ದರಿಂದ ಮಾಡಬೇಕಾಗಿದ್ದ ಎಲ್ಲಾ ಕೆಲಸಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ರದ್ದುಗೊಳಿಸಲಾಗಿದೆ. ವಾಸಿಯಾಗುವವರೆಗೆ ಶೂಟಿಂಗ್ ಮುಂದೂಡಲಾಗಿದೆ. ನಾನು ಜಲ್ಸಾದಲ್ಲಿ ವಿಶ್ರಾಂತಿ ಪಡೆಯುತ್ತೇನೆ. ನಾನು ಜಲ್ಸಾ ಗೇಟ್‌ನಲ್ಲಿ ಹಿತೈಷಿಗಳನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬರಬೇಡಿʼʼ ಎಂದು ಬರೆದುಕೊಂಡಿದ್ದರು.
ಇದನ್ನೂ ಓದಿ: Amitabh Bachchan: ಬೆಡ್ ರೆಸ್ಟ್‌ನಲ್ಲಿರುವ ಅಮಿತಾಭ್‌ರಿಂದ ಬಂತು ಹೊಸ ಟ್ವೀಟ್; ನನಗಾಗಿ ಪ್ರಾರ್ಥಿಸಿ ಎಂದ ಬಿಗ್ ಬಿ
ಪ್ರಾಜೆಕ್ಟ್ ಕೆ
ಟಾಲಿವುಡ್ ನಟ ಪ್ರಭಾಸ್ ಶೀಘ್ರದಲ್ಲೇ ನಾಗ್ ಅಶ್ವಿನ್ ಅವರ ʼಪ್ರಾಜೆಕ್ಟ್ ಕೆʼ ಸಿನಿಮಾದ (Project K Movie) ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಿನಿಮಾ ನಿರ್ಮಾಣ ಸಂಸ್ಥೆ ವೈಜಯಂತಿ ಮೂವಿಸ್‌ನ 50ನೇ ವರ್ಷದ ಸಂಭ್ರಮಾಚರಣೆ ಸಮಯದಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾ ದಕ್ಷಿಣ ಭಾರತದ ಬಹುನಿರೀಕ್ಷಿತ ಸಿನಿಮಾವಾಗಿದೆ. ವಿಶೇಷವೆಂದರೆ ಈ ಸಿನಿಮಾ ಒಂದು ಪಾರ್ಟ್‌ನಲ್ಲಿ ಬರದೆ ಎರಡು ಭಾಗಗಳಲ್ಲಿ ಬರಲಿದೆ ಎಂದು ಮೂಲಗಳು ತಿಳಿಸಿವೆ.
“ಪ್ರಾಜೆಕ್ಟ್ ಕೆ ಸಿನಿಮಾದ ದೃಷ್ಟಿ ಮತ್ತು ಕಥಾವಸ್ತುವು ತುಂಬಾ ದೊಡ್ಡದಾಗಿದೆ. ಹಾಗಾಗಿ ತಯಾರಕರು ಇದನ್ನು 2 ಭಾಗದ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಮೊದಲ ಭಾಗವು ಈ ಸಿನಿಮಾ ಜಗತ್ತನ್ನು ಪರಿಚಯಿಸಿ, ಸಂಘರ್ಷವನ್ನು ಆರಂಭಿಸುತ್ತದೆ. ಬಾಹುಬಲಿ ಫ್ರಾಂಚೈಸ್‌ನಂತೆಯೇ ದ್ವಿತೀಯ ಭಾಗದಲ್ಲಿ ಇಡೀ ನಾಟಕವು ತೆರೆದುಕೊಳ್ಳಲಿದೆ. ಇದು ಭಾರತೀಯ ಚಿತ್ರರಂಗವು ಹಿಂದೆಂದೂ ಕಾಣದ ಸಂಘರ್ಷದ ಸಿನಿಮಾವಾಗಿರಲಿದೆ” ಎಂದು ಮೂಲವು ತಿಳಿಸಿದೆ.