ಬೆಂಗಳೂರು: ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಸುದ್ದಿಯಾಗುತ್ತಲೇ ಇರುತ್ತಾರೆ. ಈ ಬಾರಿ ಆಕಳಿಸುತ್ತಿರುವ ಫೋಟೊ ಹಂಚಿಕೊಂಡಿದ್ದಾರೆ. ಬೆಳಗ್ಗೆ 3 ಗಂಟೆಗೆ ಕೆಲಸ ಮುಗಿಸಿದಾಗ ನಿಮ್ಮ ಪರಿಸ್ಥಿತಿ ಹೀಗಾಗುತ್ತದೆ ಎಂದು ಕ್ಯಾಪ್ಷನ್ ಮೂಲಕ ಹೇಳಿಕೊಂಡಿದ್ದಾರೆ. 43 ವರ್ಷಗಳ ಹಿಂದೆ ತೆರೆಕಂಡ ‘ದೋ ಔರ್ ದೋ ಪಾಂಚ್’ ತೆರೆಕಂಡ ಸಿನಿಮಾ ನೋಡುವ ವೇಳೆ ಅಮಿತಾಭ್ ಪ್ಯಾಂಟ್‌ನಲ್ಲಿ ಇಲಿ ಹರಿದಾಡಿರುವ ತಮಾಷೆಯ ಸಂಗತಿಯನ್ನೂ ಹೇಳಿಕೊಂಡಿದ್ದಾರೆ.
ಅಮಿತಾಭ್ ಕೆಂಪು ಮತ್ತು ನೀಲಿ ಬಣ್ಣದ ಚೆಕ್ ಶರ್ಟ್‌ನಲ್ಲಿ ಸಖತ್ ಲುಕ್ ನಲ್ಲಿ ಮಿಂಚಿದ್ದಾರೆ. ‘ಬೆಳ್ಳಂಬೆಳಗ್ಗೆ 3 ಗಂಟೆಗೆ ಕೆಲಸ ಮುಗಿಸಿದರೆ ಹೀಗೆ ಆಗುವುದು’ ಎಂದು ಬರೆದುಕೊಂಡಿದ್ದಾರೆ. 43 ವರ್ಷಗಳ ಹಿಂದೆ ತೆರೆಕಂಡ ‘ದೋ ಔರ್ ದೋ ಪಾಂಚ್’ ಸಿನಿಮಾದ ವೇಳೆ ನಡೆದ ತಮಾಷೆಯ ಸಂಗತಿಯನ್ನೂ ಹಂಚಿಕೊಂಡಿದ್ದಾರೆ.
‘2+2=5; ದೋ ಔರ್ ದೋ ಪಾಂಚ್ ಚಿತ್ರ ಬಿಡುಗಡೆಯಾಗಿ 43 ವರ್ಷಗಳಾಗಿವೆ. ಈ ಸಿನಿಮಾದ ಶೂಟಿಂಗ್ ತುಂಬಾ ಮಜವಾಗಿತ್ತು.! ಬೆಲ್ ಬಾಟಮ್ ಮತ್ತು ಎಲ್ಲಾ!!! ಆ ಕಾಲದಲ್ಲಿ ಬೆಲ್ ಬಾಟಮ್ ತುಂಬ ಆಕರ್ಷಕವಾಗಿತ್ತು.. ನಾನು ಥಿಯೇಟರ್‌ನಲ್ಲಿ ಸಿನಿಮಾ ನೋಡಲು ಹೋದಾಗ ನನ್ನ ಪ್ಯಾಂಟ್‌ನಲ್ಲಿ ಇಲಿ ಹರಿದಾಡಿತು. ಧನ್ಯವಾದಗಳು ಬೆಲ್ ಬಾಟಮ್’ ಎಂದು ಇನ್‌ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Amitabh Bachchan | ಒಪ್ಪಿಗೆ ಇಲ್ಲದೇ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ, ಹೆಸರು ಬಳಸಿಕೊಳ್ಳುವಂತಿಲ್ಲ!
ಇದನ್ನೂ ಓದಿ: Amitabh Bachchan | ತಮ್ಮ ಮುದ್ದು ನಾಯಿ ಮರಿ ನಿಧನಕ್ಕೆ ಭಾವುಕ ಪೋಸ್ಟ್ ಹಂಚಿಕೊಂಡ ಅಮಿತಾಭ್ ಬಚ್ಚನ್!
ಅಮಿತಾಭ್ ಇತ್ತೀಚೆಗೆ ನಿರ್ದೇಶಕ ಸೂರಜ್ ಬರ್ಜತ್ಯಾ ಅವರ ಫ್ಯಾಮಿಲಿ ಎಂಟರ್ಟೈನರ್ ಚಿತ್ರ ‘ಉಂಚೈ’ನಲ್ಲಿ ಬೋಮನ್ ಇರಾನಿ, ಅನುಪಮ್ ಖೇರ್ ಮತ್ತು ಪರಿಣಿತಿ ಚೋಪ್ರಾ ಅವರೊಂದಿಗೆ ಕಾಣಿಸಿಕೊಂಡರು. ಅವರು ಮುಂದಿನ ಪ್ಯಾನ್-ಇಂಡಿಯಾ ಚಲನಚಿತ್ರ ‘ಪ್ರಾಜೆಕ್ಟ್ ಕೆ’ನಲ್ಲಿ ನಟರಾದ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.