Site icon Vistara News

Amithabh Bachachan: ಮುಂಬೈ ಕರಾವಳಿ ರಸ್ತೆಯ ಸುರಂಗ ಮಾರ್ಗ ‘ಅದ್ಭುತ’ ಎಂದ ಬಚ್ಚನ್

Amithab Bachachan

ಮುಂಬೈ: ಹಿರಿಯ ನಟ ಅಮಿತಾಭ್ ಬಚ್ಚನ್ ಉತ್ತಮ ಕೆಲಸಕ್ಕೆ ಸದಾ ಬೆಂಬಲ ನೀಡುತ್ತಲೇ ಇರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಇವರು ಹೊಸದಾಗಿ ಉದ್ಘಾಟನೆಗೊಂಡ ಮುಂಬೈ ಕರಾವಳಿ ರಸ್ತೆಯ ಸುರಂಗ ಮಾರ್ಗದ ಕುರಿತು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಮೆಗಾಸ್ಟಾರ್ ಅಮಿತಾಭ್ ಬಚ್ಚನ್ (Amithabh Bachachan) ಹೊಸದಾಗಿ ಉದ್ಘಾಟನೆಗೊಂಡ ಮುಂಬೈ ಕರಾವಳಿ ರಸ್ತೆಯ ಸುರಂಗ ಮಾರ್ಗದ ಮೂಲಕ ಮೊದಲ ಬಾರಿಗೆ ಪ್ರಯಾಣಿಸಿದ್ದು, ಸಖತ್ ಖುಷಿಯಾಗಿದ್ದಾರೆ. ಸುರಂಗ ಮಾರ್ಗದ ಮೂಲಕ ತನ್ನ ಡ್ರೈವ್‌ ನ ವೀಡಿಯೊವನ್ನು ಹಂಚಿಕೊಂಡಿದ್ದು “ಅದ್ಭುತ” ಎಂದು ಪ್ರಶಂಸಿಸಿದ್ದಾರೆ. ಜೊತೆಗೆ ಈ ವಿಡಿಯೋ ಸಖತ್ ವೈರಲ್ ಆಗಿದೆ.

ಅಮಿತಾಭ್ ಎಕ್ಸ್ ಖಾತೆಯಲ್ಲಿ ಸುರಂಗದ ಮೂಲಕ ತಮ್ಮ ಕಾರು ಚಾಲನೆ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಮಿತಾಭ್ ಸನ್‌ ರೂಫ್‌ ಇರುವ ಐಷಾರಾಮಿ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತು ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ. ಅಮಿತಾಭ್ “ಮೊದಲ ಬಾರಿಗೆ ಸುರಂಗದಲ್ಲಿ ಪ್ರಯಾಣ – ಹಾಜಿ ಅಲಿಗೆ ಮೊದಲು ಬಂದು ಮತ್ತು ಮರೈನ್ ಡ್ರೈವ್‌ ಗೆ ಅರ್ಧ ದಾರಿಯಲ್ಲಿದೆ .. ಒಂದು ಅದ್ಭುತ!” ಎಂದು ಬರೆದಿದ್ದಾರೆ. ಈ ಪೋಸ್ಟ್ ಹಾಕಿದ ನಿಮಿಷದಲ್ಲೇ 1.3 ಲಕ್ಷ ವ್ಯೂಸ್‌ ಪಡೆದಿದೆ.

ಈ ಕರಾವಳಿ ರಸ್ತೆಯನ್ನು ಇತ್ತೀಚೆಗೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಉದ್ಘಾಟಿಸಿದ್ದರು. ಈ ರಸ್ತೆ ಬಾಂದ್ರಾ-ವರ್ಲಿ ಸೀ ಲಿಂಕ್ ಮತ್ತು ಮೆರೈನ್ ಡ್ರೈವ್ ಅನ್ನು ಸಂಪರ್ಕಿಸುತ್ತದೆ. ರಸ್ತೆಯ ಉದ್ದವು 10.8 ಕಿಲೋಮೀಟರ್ ಆಗಿದೆ, ಇದು ಎರಡು ಕಿಲೋಮೀಟರ್ ಉದ್ದದ ಸುರಂಗವನ್ನು ಒಳಗೊಂಡಿದೆ. ಈ ಸುರಂಗವು ಪ್ರಿಯದರ್ಶಿನಿ ಪಾರ್ಕ್ ಮತ್ತು ಮರೈನ್ ಡ್ರೈವ್ ನಡುವೆ ಇದೆ.

ಇದನ್ನೂ ಓದಿ: Pushpa 2: ಅಲ್ಲು ಅರ್ಜುನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌; ಬಹು ನಿರೀಕ್ಷಿತ ʼಪುಷ್ಪ 2ʼ ಚಿತ್ರದ ಟೀಸರ್‌ ರಿಲೀಸ್‌ ಡೇಟ್‌ ಫಿಕ್ಸ್‌

ಅಮಿತಾಭ್ ಬಚ್ಚನ್ ಅವರು ಮುಂಬೈನ ವರ್ಲಿಯಿಂದ ಮರೈನ್ ಡ್ರೈವ್‌ಗೆ ಕರಾವಳಿ ರಸ್ತೆ ಸುರಂಗ ಮಾರ್ಗದ ಮೂಲಕ ಪ್ರಯಾಣಿಸಿದ್ದಾರೆ. ವಾಂಖೇಡೆ ಸ್ಟೇಡಿಯಂ ನಲ್ಲಿ ನಡೆದ ಮುಂಬೈ ಇಂಡಿಯನ್ಸ್ vs ರಾಜಸ್ಥಾನ ರಾಯಲ್ಸ್ ಪಂದ್ಯವನ್ನು ವೀಕ್ಷಿಸಲು ಬಿಗ್ ಬಿ ಸ್ಟೇಡಿಯಂನಲ್ಲಿದ್ದರು. ಪಂದ್ಯ ಮುಗಿದ ನಂತರ ಬಚ್ಚನ್ ಕಾಣಿಸಿಕೊಂಡರು. 81 ವರ್ಷದ ಹಿರಿಯ ನಟ ಪ್ರತಿ ಬಾರಿಯೂ ಉತ್ಸಾಹದಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತಾರೆ.

ಅಮಿತಾಭ್ ಅವರ ಮುಂಬರುವ ಚಿತ್ರಗಳು

ಅಮಿತಾಭ್ ಬಚ್ಚನ್ ಕೈಯಲ್ಲಿ ಹಲವು ಚಿತ್ರಗಳಿವೆ. ಅವರು ‘ಕಲ್ಕಿ 2898 AD’ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಅವರೊಂದಿಗೆ ಪ್ರಭಾಸ್, ದೀಪಿಕಾ ಪಡುಕೋಣೆ ಮತ್ತು ಕಮಲ್ ಹಾಸನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದಲ್ಲದೇ ಸೆಕ್ಷನ್ 84ರಲ್ಲೂ ಬಿಗ್ ಬಿ ಕಾಣಿಸಿಕೊಳ್ಳಲಿದ್ದಾರೆ. ಇದೊಂದು ಕೋರ್ಟ್ ರೂಂ ಡ್ರಾಮಾ ಚಿತ್ರವಾಗಲಿದೆ.

Exit mobile version