Site icon Vistara News

Amitabh Bachchan: ಜುಟ್ಟುವನ್ನೇ ಫ್ಯಾನ್‌ ಮಾಡಿಕೊಂಡ ವ್ಯಕ್ತಿ; ವಿಡಿಯೊಗೆ ಅಮಿತಾಭ್ ಬಚ್ಚನ್ ಫಿದಾ

Amitabh Bachchan Posts Hilarious Video

ಬೆಂಗಳೂರು: ನಟ ಅಮಿತಾಭ್‌ ಬಚ್ಚನ್ (Amitabh Bachchan) ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ಆಸಕ್ತಿದಾಯಕ ವಿಷಯವನ್ನು ಪೋಸ್ಟ್ ಮಾಡುತ್ತಾರೆ. ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಅಮಿತಾಭ್ ಶೇರ್ ಮಾಡಿರುವ ವಿಡಿಯೊ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ವಿಡಿಯೊವೊಂದಕ್ಕೆ ಫಿದಾ ಆಗಿರುವ ಅಮಿತಾಭ್ ಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬರು ತಮ್ಮ ಜುಟ್ಟವನ್ನು ಫ್ಯಾನ್‌ ರೀತಿ ತಿರುಗಿಸಿಕೊಂಡು ಜೋರಾಗಿ ನಡೆಯುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ತಮಾಷೆ ವಿಡಿಯೊಗೆ ಕ್ಯಾಚಿ ಕ್ಯಾಪ್ಷನ್‌ ಕೂಡ ನೀಡಿದ್ದಾರೆ ಅಮಿತಾಭ್‌.

ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವ್ಯಕ್ತಿಯೊಬ್ಬರು ತಮ್ಮ ಜುಟ್ಟನ್ನು ಫ್ಯಾನ್‌ ರೀತಿ ತಿರುಗಿಸಿಕೊಂಡು ಜೋರಾಗಿ ನಡೆಯುತ್ತಿರುವ ವಿಡಿಯೊ ನಟ ಶೇರ್‌ ಮಾಡಿಕೊಂಡಿದ್ದಾರೆ. ಅಮಿತಾಭ್ ಈ ವಿಡಿಯೊಗೆ ತಮಾಷೆಯ ಕ್ಯಾಪ್ಷನ್‌ ನೀಡಿದ್ದು, ʻʻಇಂತಹ ಬೇಸಿಗೆಯಲ್ಲಿ ಕೂಲ್‌ ಆಗಲು ತನ್ನದೇ ರೀತಿಯ ಫ್ಯಾನ್‌ ಮಾಡಿಕೊಂಡಿದ್ದಾರೆʼʼಎಂದು ಬರೆದುಕೊಂಡಿದ್ದಾರೆ.

ವಿಡಿಯೊ ಈಗಾಗಲೇ ಪೋಸ್ಟ್ ಮಾಡಿದ 1 ಗಂಟೆಯೊಳಗೆ 3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ವಿಡಿಯೊ ವೈರಲ್‌ ಆಗುತ್ತಿದ್ದಂತೆ ʻಸರ್, ಇದು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು ದೇವರು ನೀಡಿದ ಕೊಡುಗೆಯಾಗಿದೆʼʼಎಂದು ಕಮೆಂಟ್‌ ಮಾಡಿದರೆ,ಮತ್ತೊಬ್ಬರು ʻʻಪ್ರತಿಯೊಬ್ಬರಲ್ಲೂ ಈ ಪ್ರತಿಭೆ ಇದೆ. ಆದರೆ ನಾವು ಅದನ್ನು ಕಂಡುಕೊಳ್ಳಬೇಕುʼʼಎಂದು ಕಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Amitabh Bachchan : ಹೆಲ್ಮೆಟ್‌ ಹಾಕದೇ ಬೈಕ್‌ನಲ್ಲಿ ಪ್ರಯಾಣಿಸಿದ ಬಚ್ಚನ್‌ಗೆ ನೆಟ್ಟಿಗರ ಕ್ಲಾಸ್‌

ಅಮಿತಾಭ್‌ ಪೋಸ್ಟ್‌ ಮಾಡಿರುವ ವಿಡಿಯೊ

ಬೈಕ್​​ನಲ್ಲಿ ಹೋಗಿ ಟ್ರೋಲ್ ಆಗಿದ್ದ ಅಮಿತಾಭ್​ ಬಚ್ಚನ್

ಕೆಲವು ದಿನಗಳ ಹಿಂದೆ ಅಮಿತಾಭ್‌ ತಮ್ಮ ಅಭಿಮಾನಿಯೊಬ್ಬರ ಜತೆ ಬೈಕ್​ನಲ್ಲಿ ಹಿಂಬದಿಯಲ್ಲಿ ಕುಳಿತು ಹೋಗುತ್ತಿರುವ ವಿಡಿಯೊ ವೈರಲ್ ಆಗಿತ್ತು. ಅವರು ಹೆಲ್ಮೆಟ್ ಇಲ್ಲದೆ ಬೈಕ್​ನಲ್ಲಿ ಹೋಗಿದ್ದು ನೆಟ್ಟಿಗರಿಗೆ ಇಷ್ಟವಾಗಿರಲಿಲ್ಲ. ತಿಳಿದವರೇ ಹೀಗೆ ಮಾಡಿದರೆ ಹೇಗೆ? ‘ಹೀಗೆ ಬೈಕ್​ನಲ್ಲಿ ಹೆಲ್ಮೆಟ್ ಇಲ್ಲದೆ, ಸೆಕ್ಯೂರಿಟಿ ಇಲ್ಲದೆ ಹೋಗಲು ಹೇಗೆ ಸಾಧ್ಯ?’ ಎಂಬಿತ್ಯಾದಿ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದರು. ಅಷ್ಟೆ ಅಲ್ಲ, ಮುಂಬಯಿ ಪೊಲೀಸರು ಕೂಡ ‘ತಾವು ಕ್ರಮ ಕೈಗೊಳ್ಳುವುದಾಗಿ’ ತಿಳಿಸಿದ್ದರು. ʻʻಸಮಯದ ಅಭಾವ ಇದ್ದಾಗ ನಾನು ಹೀಗೆ ಬೈಕ್​ನಲ್ಲಿ ಹೋಗುತ್ತೇನೆ. ಹೆಚ್ಚಿಗೆ ಸಲ ಹೆಲ್ಮೆಟ್ ಧರಿಸುತ್ತೇನೆ, ಇತರ ಟ್ರಾಫಿಕ್ ನಿಯಮಗಳನ್ನೂ ಪಾಲಿಸುತ್ತೇನೆ ಎಂದು ಅಮಿತಾಬ್‌ ತಮ್ಮ ಬ್ಲಾಗ್​ ಮೂಲಕ , ಸ್ಪಷ್ಟನೆ ಕೊಟ್ಟಿದ್ದರು.

ನಟ ಅಮಿತಾಭ್‌ ಸದ್ಯ ಸಿನಿಮಾಗಳಿಂದ ಬ್ರೇಕ್‌ ತೆಗೆದುಕೊಂಡಿದ್ದಾರೆ. ಪ್ರಭಾಸ್‌-ದೀಪಿಕಾ ಪಡುಕೋಣೆ ಅಭಿನಯದ ʼಪ್ರಾಜೆಕ್ಟ್‌ ಕೆʼ ಸಿನಿಮಾ ಚಿತ್ರೀಕರಣ ವೇಳೆ ಗಾಯಗೊಂಡಿದ್ದರು.

Exit mobile version