Site icon Vistara News

Amitabh Bachchan: ಸೀಕ್ವೆಲ್‌ ಆಗ್ತಾ ಇದೆ ಅಮಿತಾಭ್‌ ನಟನೆಯ ʻಖಾಕಿʼ ಸಿನಿಮಾ!

Amitabh Bachchan's Khakee To Get A Sequel

ಬೆಂಗಳೂರು: ʻಗದರ್ʼ ಸಿನಿಮಾದ 22 ವರ್ಷಗಳ ನಂತರ, ಸನ್ನಿ ಡಿಯೋಲ್ ಗದರ್‌ 2ನಲ್ಲಿ ತಾರಾ ಸಿಂಗ್ ಆಗಿ ಮತ್ತೆ ಕಮ್‌ಬ್ಯಾಕ್‌ ಆದರು. ಭಾರತದಾದ್ಯಂತ ಬಾಕ್ಸ್ ಆಫೀಸ್ ದಾಖಲೆಗಳನ್ನು ಉಡೀಸ್‌ ಮಾಡಿದರು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಗೂ ಹೆಚ್ಚು ಗಳಿಸಿತು. ಇದರ ಯಶಸಿನ ಬೆನ್ನಲ್ಲೆ ಹಿಂದಿಯಲ್ಲಿ ಹಲವು ಸಿನಿಮಾಗಳು ಸೀಕ್ವೆಲ್‌ನತ್ತ ಸಾಗುತ್ತಿದೆ. ಈ ಪಟ್ಟಿಗೆ ಇತ್ತೀಚಿಗೆ ಅಮಿತಾಭ್‌ ಬಚ್ಚನ್, ಅಕ್ಷಯ್ ಕುಮಾರ್, ಅಜಯ್ ದೇವಗನ್, ಐಶ್ವರ್ಯ ರೈ ಬಚ್ಚನ್ ಅಭಿನಯದ ʻಖಾಕಿʼ ಸೇರ್ಪಡೆಯಾಗಲಿದೆ ಎನ್ನಲಾಗುತ್ತಿದೆ. 2004 ಖಾಕಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು.

2004ರ ಖಾಕಿ ಸಿನಿಮಾ ನಿರ್ಮಿಸಿದ ನಿರ್ಮಾಪಕ ಕೇಶು ರಾಮ್ಸೆ ಅವರ ಪುತ್ರ ಆರ್ಯೆಮನ್ ರಾಮ್ಸೆ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಹೌದು, ನಾವು ಖಾಕಿ ಸಿನಿಮಾದ ಸೀಕ್ವೆಲ್‌ ಮಾಡಲು ಯೋಜಿಸುತ್ತಿದ್ದೇವೆ. ಸ್ಕ್ರಿಪ್ಟಿಂಗ್ ಆಗಿದೆ. ಅಭಿಮಾನಿಗಳು ಮತ್ತು ಪ್ರೇಕ್ಷಕರು ಇನ್ನೂ ನೆನಪಿನಲ್ಲಿಟ್ಟುಕೊಳ್ಳುವ ಮತ್ತು ವೀಕ್ಷಿಸುವ ಮೂಲ ಚಿತ್ರ ಮುಂದಿನ ವರ್ಷಕ್ಕೆ 20 ವರ್ಷಗಳನ್ನು ಪೂರೈಸುತ್ತದೆ. ಮುಂದಿನ ವರ್ಷದ ವೇಳೆಗೆ ಹೊಸ ಚಿತ್ರದೊಂದಿಗೆ ಬರಲು ಫ್ಲ್ಯಾನ್‌ ಮಾಡಿಕೊಂಡಿದ್ದೇವೆʼʼಎಂದರು. ಈ ಚಲನಚಿತ್ರವನ್ನು ನಂತರ ತೆಲುಗಿನಲ್ಲಿ ಸತ್ಯಮೇವ ಜಯತೆ (2009) ಎಂದು ಮರುನಿರ್ಮಾಣ ಮಾಡಲಾಯಿತು.

ಇದನ್ನೂ ಓದಿ: Actor Rajinikanth: ತಲೈವರ್ 170 ಸೆಟ್‌ನಲ್ಲಿ ಅಮಿತಾಭ್‌ ಜತೆ ಪೋಸ್‌ ಕೊಟ್ಟ ರಜನಿ!

Amitabh Bachchan's Khakee To Get A Sequel

ಪಾತ್ರವರ್ಗದ ಬಗ್ಗೆ ಮಾತನಾಡುತ್ತಾ, “ನನ್ನ ಕುಟುಂಬ ಅಕ್ಷಯ್ ಸರ್‌ಗೆ ಹತ್ತಿರವಾಗಿದೆ, ಆದರೆ ದುರದೃಷ್ಟವಶಾತ್ ಅವರ ಪಾತ್ರವು ಮೊದಲ ಭಾಗದಲ್ಲಿ ಸಾಯುತ್ತದೆ ಆದ್ದರಿಂದ ನಾವು ಅವರನ್ನು ತೋರಿಸಲು ಸಾಧ್ಯವಿಲ್ಲ. ಚಿತ್ರದಲ್ಲಿ ಅಜಯ್ ಸರ್ (ಅಜಯ್ ದೇವಗನ್) ಮತ್ತು ಐಶ್ವರ್ಯಾ ಪಾತ್ರವೂ ಸಾಯುತ್ತದೆ. ನನ್ನ ಬಳಿ ಸರಿಯಾದ ಸ್ಕ್ರಿಪ್ಟ್ ಸಿಕ್ಕಿದ ತಕ್ಷಣ ನಾನು ಅಮಿತ್‌ಜಿ (ಅಮಿತಾಭ್‌ ಬಚ್ಚನ್) ಅವರೊಂದಿಗೆ ಮಾತುಕತೆಯನ್ನು ಪ್ರಾರಂಭಿಸುತ್ತೇನೆ. ತುಷಾರ್ ಕಪೂರ್ ಅವರ ಪಾತ್ರವನ್ನು ಚಿತ್ರದಲ್ಲಿ ಮುಂದುವರಿಸಲು ನಾನು ಇಷ್ಟಪಡುತ್ತೇನೆ. ನಾನು ರಾಜ್‌ಕುಮಾರ್ ಸಂತೋಷ್‌ಜಿ ಅವರೊಂದಿಗೆ ಮಾತನಾಡಿದ್ದೇನೆ. ಅವರ ಮುಂದಿನ ಭಾಗವನ್ನು ನಿರ್ದೇಶಿಸಲು ನಾನು ಬಯಸುತ್ತೇನೆʼʼಎಂದರು ಆರ್ಯೆಮನ್ ರಾಮ್ಸೆ .

ಖಾಕಿ ಜನವರಿ 2004ರಲ್ಲಿ ಗಣರಾಜ್ಯೋತ್ಸವದ ವಾರಾಂತ್ಯದಲ್ಲಿ ಬಿಡುಗಡೆಯಾಯಿತು. ಸಿನಿಮಾ ವಾಣಿಜ್ಯಾತ್ಮಕ ಮತ್ತು ವಿಮರ್ಶಾತ್ಮಕವಾಗಿ ಯಶಸ್ಸನ್ನು ಗಳಿಸಿತು. ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಸುಮಾರು 50 ಕೋಟಿ ರೂ. ಗಳಿಸಿತು. ವರ್ಷದ 5ನೇ ಅತಿ ಹೆಚ್ಚು ಗಳಿಕೆಯ ಚಿತ್ರವಾಗಿ ಹೊರಹೊಮ್ಮಿತ್ತು.

Exit mobile version