ಬೆಂಗಳೂರು: ನಟಿ ಅಮೂಲ್ಯ ಮದುವೆ ಆದ ನಂತರ ತಮ್ಮ ವೈವಾಹಿಕ ಜೀವನದಲ್ಲಿ ಬ್ಯುಸಿ ಆಗಿದ್ದರು. ಈ ಸಂದರ್ಭದಲ್ಲಿ ಯಾವುದೇ ಸಿನಿಮಾಗಳಲ್ಲಿ ನಟಿಸಲೇ ಇಲ್ಲ. ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ ಈವರೆಗೆ ಎಲ್ಲಿಯೂ ತಮ್ಮ ಅವಳಿ ಮಕ್ಕಳ ಫೋಟೋಗಳನ್ನು ಬಹಿರಂಗಪಡಿಸಿರಲಿಲ್ಲ. ಇದೇ ಮೊದಲ ಬಾರಿಗೆ ಅಮೂಲ್ಯ ಮಕ್ಕಳ ಜತೆಗಿನ ಫೋಟೋ ಹಂಚಿಕೊಂಡಿದ್ದಾರೆ.
ಸೆಲೆಬ್ರಿಟಿಸ್ ತಮ್ಮ ಮಕ್ಕಳ ಮುದ್ದು ಮುದ್ದಾದ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳೋದು ಸಹಜ. ಅಭಿಮಾನಿಗಳು ಕೂಡ ನೆಚ್ಚಿನ ಸೆಲೆಬ್ರೆಟಿಗಳ ಮಕ್ಕಳ ಫೋಟೋ ನೋಡಲು ಕಾತರದಿಂದ ಕಾಯುತ್ತಿರುತ್ತಾರೆ. ಆದರೆ ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಮಾತ್ರ ಯಾವುದೇ ಫೋಟೋ ಹಂಚಿಕೊಂಡಿರಲಿಲ್ಲ. ಈ ಹಿಂದೆ ಯುಗಾದಿ ಹಬ್ಬದ ಪ್ರಯುಕ್ತ ಅಮೂಲ್ಯ ಅವರ ಪತಿ ಜಗದೀಶ್ ತಮ್ಮ ಮಕ್ಕಳ ಹಸ್ತದ ವಿಡಿಯೋ ಹಂಚಿಕೊಂಡಿದ್ದರು ಅಷ್ಟೇ.
ಈ ಬಾರಿ ಅಮೂಲ್ಯ ಒಂದು ವಿಶೇಷವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ತಮ್ಮ ಮುಖದ ಮೇಲೆ ಮಕ್ಕಳ ಪಾದಗಳನ್ನು ಇಟ್ಟು ಸ್ಮೈಲ್ ಕೊಟ್ಟಿದ್ದಾರೆ. ಅಲ್ಲದೆ ʼಬ್ಲೆಸ್ಡ್ʼ ಎಂದು ಕ್ಯಾಪ್ಶನ್ ಹಾಕಿದ್ದಾರೆ.
ಅಂದು ಜಗದೀಶ್ ಮಕ್ಕಳ ಕೈಗಳ ವಿಡಿಯೋ ಹಾಕಿದ್ದರೆ, ಇಂದು ಅಮೂಲ್ಯ ಮಕ್ಕಳ ಕಾಲುಗಳನ್ನು ರಿವೀಲ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು, ಹಾಗಾದರೆ ಮುಂದಿನ ಫೋಟೋದಲ್ಲಿ ಅವರ ಮಕ್ಕಳ ಮುಖ ಕಾಣಿಸಬಹುದು ಎಂದು ಕಾಮೆಂಟ್ ಮಾಡಿದ್ದಾರೆ!
ಒಟ್ಟಿನಲ್ಲಿ ಈ ತಾಯಿ – ಮಗುವಿನ ಸುಂದರ ಚಿತ್ರವನ್ನು ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.