ಮುಂಬೈ: ʼಮೊಗ್ಯಾಂಬೋ ಖುಷ್ ಹುವಾʼ ಈ ಡೈಲಾಗ್ ಮರೆಯುವುದಕ್ಕೆ ಸಾಧ್ಯವೇ? 1987ರಲ್ಲಿ ಬಿಡುಗಡೆಯಾದ ಮಿಸ್ಟರ್ ಇಂಡಿಯಾ ಸಿನಿಮಾದ ಅತ್ಯಂತ ಪ್ರಸಿದ್ಧ ಪಾತ್ರವಾದ ಮೊಗ್ಯಾಂಬೋನ ಡೈಲಾಗ್ ಇದು. ಈ ಪಾತ್ರ ಅಮರೀಶ್ ಪುರಿ (Amrish Puri ) ಅವರ ಬದುಕಿನಲ್ಲಿ ಅತಿ ದೊಡ್ಡ ಮೈಲಿಗಲ್ಲು ಅಂದರೂ ತಪ್ಪಾಗದು.
ಅಂದ ಹಾಗೆ ಅಮರೀಶ್ ಪುರಿ ಅವರು ಜನಿಸಿದ್ದು 1932ರ ಜನವರಿ 22ರಂದು. ಇಂದು ಅವರ 91ನೇ ಜನ್ಮದಿನಾಚರಣೆ. ಅನಿಲ್ ಕಪೂರ್ ಮತ್ತು ಶ್ರೀದೇವಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಮಿಸ್ಟರ್ ಇಂಡಿಯಾ ಸಿನಿಮಾದಲ್ಲಿ ಅಮರೀಶ್ ಪುರಿ ಅವರ ಪಾತ್ರವನ್ನು ಯಾರೊಬ್ಬರೂ ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಆದರೆ ವಿಶೇಷವೆಂದರೆ ಈ ಸಿನಿಮಾ ಅರ್ಧ ಚಿತ್ರೀಕರಣ ಮುಗಿಸಿದರೂ ಅದರಲ್ಲಿ ಅಮರೀಶ್ ಪುರಿ ನಟಿಸುತ್ತಾರೆ ಎನ್ನುವ ವಿಚಾರ ಯಾರೊಬ್ಬರಿಗೂ ಗೊತ್ತಿರಲಿಲ್ಲವಂತೆ.
ಇದನ್ನೂ ಓದಿ: Video Viral: 4 ನೈಂಟಿ ಕೊಡುವೆನೆಂದು ಹಣ ಪಡೆದು ಎರಡೇ ಕೊಟ್ಟವನಿಗೆ ಮುಟ್ಟಿ ನೋಡಿಕೊಳ್ಳುವಂತೆ ತಟ್ಟಿದ ನಾರಿಯರು!
ಹೌದು. ಅಮರೀಶ್ ಪುರಿ ನಟಿಸಿದ ಮೊಗ್ಯಾಂಬೋ ಪಾತ್ರಕ್ಕೆ ಮೊದಲು ಅನುಪಮ್ ಖೇರ್ ಅವರನ್ನು ಕರೆತರಲಾಗಿತ್ತು. ಆದರೆ ಸಿನಿಮಾ ಅರ್ಧ ಚಿತ್ರೀಕರಣ ಮುಗಿಸಿದ ನಂತರ ಆ ಪಾತ್ರವನ್ನು ಬೇರೆಯವರಿಂದ ಮಾಡಿಸುವುದಕ್ಕೆ ಚಿತ್ರತಂಡ ನಿರ್ಧರಿಸಿದೆ. ಅದೇ ಹಿನ್ನೆಲೆ ಅಮರೀಶ್ ಪುರಿ ಅವರ ಬಳಿ ಕೇಳಿದೆ.
ಅಮರೀಶ್ ಪುರಿ ಅವರಿಗೆ ಈ ಬಗ್ಗೆ ಬೇಸರವಿತ್ತಂತೆ. ಇಷ್ಟು ದಿನ ನನ್ನನ್ನು ನೆನಪು ಮಾಡಿಕೊಳ್ಳದವರು ಈಗ ಬಂದು ಕೇಳುತ್ತಿದ್ದಾರಲ್ಲಾ? ನಿಜಕ್ಕೂ ನಾನು ಈ ಸಿನಿಮಾದಲ್ಲಿ ನಟಿಸಬೇಕಾ? ಎಂದು ಹಲವು ಬಾರಿ ತಮಗೆ ತಾವೇ ಪ್ರಶ್ನೆ ಕೇಳಿಕೊಂಡಿದ್ದರಂತೆ. ಕೊನೆಗೆ ಗಟ್ಟಿ ಮನಸ್ಸು ಮಾಡಿ ಸಿನಿಮಾಕ್ಕೆ ಓಕೆ ಎಂದಿದ್ದರು. ಸಿನಿಮಾ ಚಿತ್ರೀಕರಣ ವೇಳೆ 15-20 ದಿನ ಅಮರೀಶ್ ಪುರಿ ಅವರು ಸ್ಟುಡಿಯೋದಿಂದ ಹೊರಗೇ ಹೋಗಿರಲಿಲ್ಲವಂತೆ. ಆರ್‌ಕೆ ಸ್ಟುಡಿಯೋದಲ್ಲಿ ಸಿನಿಮಾದ ಚಿತ್ರೀಕರಣ ಅಷ್ಟರ ಮಟ್ಟಿಗೆ ಭರದಿಂದ ನಡೆಸಲಾಗಿತ್ತಂತೆ. ಅದರ ಪ್ರತಿಫಲವೇ ಆ ಮೊಗ್ಯಾಂಬೋ ಪಾತ್ರವನ್ನು ಇಂದಿಗೂ ಜನರು ನೆನಪಿನಲ್ಲಿಟ್ಟುಕೊಂಡಿರುವುದು.