ಮುಂಬೈ: ಸಿನಿಮಾ ನಟ ನಟಿಯರು ತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕಿಂತ ವಿಭಿನ್ನವಾದ ಬದುಕು ಅವರಿಗೆ ತೆರೆಯ ಹಿಂದಿರುತ್ತದೆ. ಎಷ್ಟೋ ಬಾರಿ ಆರೋಗ್ಯ ಸರಿಯಿಲ್ಲದಿದ್ದರೂ ತೆರೆ ಮೇಲೆ ಮಾತ್ರ ಬೇರೆಯದ್ದೇ ರೀತಿಯಲ್ಲಿ ಕಾಣಿಸಿಕೊಳ್ಳಬೇಕಾದ ಅವಶ್ಯಕತೆ ಅವರಿಗೆ ಇರುತ್ತದೆ. ಅದರಲ್ಲೂ ಸೆಕ್ಸ್ ಸೀನ್‌ಗಳಂತವುಗಳಲ್ಲಂತೂ ನಟ ನಟಿಯರು ತುಂಬಾ ಸೂಕ್ಷ್ಮವಾಗಿ ನಟನೆಗೆ ಇಳಿಯಬೇಕಾಗುತ್ತದೆ. ಇದೀಗ ಅಂಥದ್ದೇ ವಿಚಾರದಲ್ಲಿ ನಟಿ ಅಮೃತಾ ಸುಭಾಷ್ (Amruta Subhash) ಮಾತನಾಡಿದ್ದಾರೆ.
ಅಮೃತಾ ಸುಭಾಷ್ ಅವರು ಸೇಕ್ರೆಡ್ ಗೇಮ್ಸ್ 2 ಸೀರಿಸ್‌ನಲ್ಲಿ ಸೆಕ್ಸ್ ಸೀನ್‌ನಲ್ಲಿ ನಟಿಸಿದ್ದಾರೆ. ಅದನ್ನು ಅನುರಾಗ್ ಕಶ್ಯಪ್ ಅವರು ನಿರ್ದೇಶನ ಮಾಡಿದ್ದರು. ಆದರೆ ಈ ವಿಚಾರದಲ್ಲಿ ಅನುರಾಗ್ ಅವರು ತುಂಬಾನೇ ಸೂಕ್ಷ್ಮತೆ ವಹಿಸಿದ್ದರಂತೆ. ನಿರ್ದೇಶನ ತಂಡವನ್ನು ಕರೆದು, ಅಮೃತಾ ಅವರ ಬಳಿ “ನಿಮ್ಮ ಮುಟ್ಟಿದ ದಿನಗಳು ಯಾವುವು?” ಎಂದು ಕೇಳಿದ್ದರಂತೆ. ಆ ಸಮಯದಲ್ಲಿ ನಿಮಗೆ ಸೆಕ್ಸ್ ಸೀನ್ ಚಿತ್ರೀಕರಣ ಮಾಡುವುದು ಕಷ್ಟವಾಗಬಹುದು. ಹಾಗಾಗಿ ನಿಮಗೆ ಸೂಕ್ತವೆನಿಸುವ ದಿನಗಳಲ್ಲೇ ಅದನ್ನು ಚಿತ್ರೀಕರಣ ಮಾಡೋಣ ಎಂದು ಹೇಳಿದ್ದರಂತೆ.
ಇದನ್ನೂ ಓದಿ: Viral Video: ಹೆರಿಗೆ ನೋವಿಂದ ಆಸ್ಪತ್ರೆಗೆ ದಾಖಲಾದ ಮಗಳು; ಆಕೆಯ ಮಾವ-ಅತ್ತೆಗೆ ಥಳಿಸಿದ ಅಪ್ಪ-ಅಮ್ಮ!
ಸಿನಿಮಾದಲ್ಲಿ ಸೆಕ್ಸ್ ಸೀನ್ ಬಂದಾಗ ನಿರ್ದೇಶಕರು ಹೆಣ್ಣಾದರೂ ಸರಿಯೇ ಗಂಡಾದರೂ ಸರಿಯೇ, ಅವರಿಗೆ ಸೂಕ್ಷ್ಮತೆ ಇದ್ದೇ ಇರುತ್ತದೆ ಎಂದು ಅಮೃತಾ ಅವರು ಹೇಳಿಕೊಂಡಿದ್ದಾರೆ. ಈ ರೀತಿಯ ವಿಚಾರದಲ್ಲಿ ಗಂಡು ಹೆಣ್ಣು ಎನ್ನುವ ಭೇದವಿಲ್ಲ ಎಂದು ಅವರು ತಿಳಿಸಿದ್ದಾರೆ.
ಅಮೃತಾ ಅವರು ಲಸ್ಟ್ ಸ್ಟೋರಿಸ್ 2ನಲ್ಲಿ ದಿ ಮಿರರ್ ಕಥೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕೊಂಕಣ ಸೇನ್ ಅವರು ನಿರ್ದೇಶಿಸಿರುವ ಈ ಕಥೆಯಲ್ಲಿ ಅವರು ತಿಲ್ಲೋತಮ ಶೋಮ್ ಅವರೊಂದಿಗೆ ನಟಿಸಿದ್ದಾರೆ. ಈ ಕಥೆಯ ನಿರೂಪಣೆಯ ಸಮಯದಲ್ಲಿ ಅವರಿಗೆ ತಮ್ಮ ಪಾತ್ರದ ಬಗ್ಗೆ ಪೂರ್ತಿ ಅರ್ಥವಾಗಿರಲಿಲ್ಲವಂತೆ. ಆದರೆ ಕೆಲವೊಮ್ಮೆ ಆ ರೀತಿ ಅರ್ಥವಾಗದಿರುವುದೇ ಒಳಿತು. ಹಾಗಾದಾಗ ನಾವು ಆ ಪಾತ್ರವಾಗಿ ಇನ್ನಷ್ಟು ಒಳಹೊಕ್ಕಬಹುದು” ಎಂದು ಅವರು ತಿಳಿಸಿದ್ದಾರೆ.