Site icon Vistara News

Amulya Actress | ನಟಿ ಅಮೂಲ್ಯ ಜನುಮದಿನ: ಈ ದಿನವೇ ವ್ಯಾಲೆಂಟೈನ್ಸ್‌ ಡೇ ಅಂದ್ರು ಪತಿ ಜಗದೀಶ್‌!

Amulya Actress

ಬೆಂಗಳೂರು: ಸ್ಯಾಂಡಲ್‌ವುಡ್‌ ನಟಿ ಅಮೂಲ್ಯ (Amulya Actress) ಅವರಿಗೆ ಬುಧವಾರ (ಸೆ. 14 ) ಜನುಮ ದಿನ. ಹುಟ್ಟು ಹಬ್ಬಕ್ಕೆ ಸಾಕಷ್ಟು ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಅಮೂಲ್ಯ ಜೂನ್‌ ತಿಂಗಳಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದರು. ಇವತ್ತಿನ ವಿಶೇಷ ದಿನದಂದು ಪತಿ ಜಗದೀಶ್‌ ಸ್ಪೆಷಲ್‌ ವಿಶ್‌ ಮಾಡಿದ್ದಾರೆ. “”ನನ್ನ ಪಾಲಿಗೆ ಈ ದಿನವೇ ವ್ಯಾಲೆಂಟೈನ್ಸ್‌ ಡೇʼʼ ಎಂದು ಹೇಳಿಕೊಂಡಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ಹಲವಾರು ಪೋಟೋಗಳನ್ನು ಜಗದೀಶ್‌ ಹಂಚಿಕೊಂಡು ʻʻಇವತ್ತಿನ ದಿನ ಸೆ.14 ನನಗೆ ವ್ಯಾಲೆಂಟೈನ್ಸ್‌ ಡೇ. ನೀನು ಯಾವಾಗಲೂ ಮಿನುಗುವ ನಕ್ಷತ್ರವಾಗಿರಬೇಕು. ಹುಟ್ಟು ಹಬ್ಬದ ಶುಭಾಶಯ. ಇದು ನಾವು ಕಳೆದ ಸುಂದರ ಕ್ಷಣಗಳುʼʼ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಈ ಬಾರಿ ಅಮ್ಮನಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ಖುಷಿಯ ಸಂಗತಿ ಎಂದು ಅಮೂಲ್ಯ ಅವರು ಮಕ್ಕಳ ಪೋಟೊದೊಂದಿಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻʻಈ ವರ್ಷ ನಾನು ನನ್ನ ಮಕ್ಕಳೊಂದಿಗೆ ಅಮ್ಮನಾಗಿ ನನ್ನ ಮೊದಲ ಜನ್ಮದಿನವನ್ನು ಆಚರಿಸುತ್ತಿದ್ದೇನೆ. ಇಂದಿನ ದಿನವು ಅತ್ಯಂತ ಅಮೂಲ್ಯವಾಗಿದ್ದು, ಪ್ರತಿ ವರ್ಷವೂ ಶಾಶ್ವತವಾಗಿ ನೆನಪುಳಿಯುವಂತಹ ಉಡುಗೊರೆಯಾಗಿದೆ. ಮಕ್ಕಳ ಆ ಪುಟ್ಟ ಪಾದಗಳನ್ನು ಆನಂದಿಸುವುದು ಮತ್ತು ನನ್ನ ಈ ಜೀವನದ ಹಾದಿ ಖುಷಿ ನೀಡುತ್ತಿದೆʼʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | ಹುಟ್ಟು ಹಬ್ಬದ ಸಂಭ್ರಮದಲ್ಲಿ ಸೃಜನ್‌ ಲೋಕೇಶ್‌.

ಬಾಲ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಅಮೂಲ್ಯ ʻಚೆಲುವಿನ ಚಿತ್ತಾರʼ ಸಿನಿಮಾ ಮೂಲಕ ನಾಯಕಿಯಾಗಿ ಕಾಣಿಸಿಕೊಂಡರು. ರಾಕಿಂಗ್‌ ಸ್ಟಾರ್‌ ಯಶ್‌, ಚಾಕೊಲೇಟ್‌ ಹೀರೊ ಪ್ರೇಮ್‌, ದುನಿಯಾ ವಿಜಯ್‌, ಕೃಷ್ಣ ಅಜಯ್‌ ರಾವ್‌, ಪ್ರಕಾಶ್‌ ರಾಜ್‌ ಮುಂತಾದ ಸ್ಟಾರ್‌ ನಟರ ಜತೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ʻಶ್ರಾವಣಿ ಸುಬ್ರಹ್ಮಣ್ಯʼ ಚಿತ್ರದಲ್ಲಿ ನಟಿಸಿ ಫಿಲ್ಮ್‌ಫೇರ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 2017ರಲ್ಲಿ ʻಮುಗುಳು ನಗೆʼ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ ಬಳಿಕ ಮತ್ತೆ ಬಣ್ಣ ಹಚ್ಚಿಲ್ಲ. ಇವರು ಮತ್ತೆ ಸ್ಯಾಂಡಲ್‌ವುಡ್‌ಗೆ ಬರಲಿದ್ದಾರಾ ಎಂಬ ನಿರೀಕ್ಷೆ ಅಭಿಮಾನಿಗಳದು.

ಇದನ್ನೂ ಓದಿ | ನಟಿ ಅಮೂಲ್ಯಾಳ ಮುದ್ದಾದ ಮುಖಕ್ಕೆ ಮುದ್ದಾದ ಪಾದಗಳ ಸ್ಪರ್ಶ!

Exit mobile version