Site icon Vistara News

Amulya Jagadish | ತಿರುಪತಿ ತಿಮ್ಮಪ್ಪನಿಗೆ ಅವಳಿ ಮಕ್ಕಳ ಮುಡಿ ಅರ್ಪಿಸಿದ ನಟಿ ಅಮೂಲ್ಯಾ-ಜಗದೀಶ್​ ದಂಪತಿ

amulya jagadish Couple Visit Tirupati Temple

ಬೆಂಗಳೂರು: ನಟಿ ಅಮೂಲ್ಯ ಮತ್ತು ಜಗದೀಶ್​ ದಂಪತಿ ತಮ್ಮ ಮುದ್ದಾದ ಅವಳಿ ಮಕ್ಕಳು ಮತ್ತು ಕುಟುಂಬದೊಂದಿಗೆ ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇಬ್ಬರೂ ಮಕ್ಕಳ ಮುಡಿಯನ್ನು ಶ್ರೀ ವೆಂಕಟೇಶ್ವರ ದೇವರಿಗೆ ಅರ್ಪಿಸಿ, ಸಲ್ಲಿಸಿದ್ದಾರೆ.

ಅಮೂಲ್ಯ ಮತ್ತು ಜಗದೀಶ್​ ದಂಪತಿಯ ಅವಳಿ ಮಕ್ಕಳ ನಾಮಕರಣ ಸಮಾರಂಭ ಇತ್ತೀಚೆಗೆ ನಡೆದಿದ್ದು, ಅವರಿಗೆ ಅಥರ್ವ್​ ಮತ್ತು ಆಧವ್​ ಎಂದು ಹೆಸರು ಇಡಲಾಗಿದೆ. ಈಗ ಅವರ ಕೂದಲು ತೆಗೆಯುವ ಶಾಸ್ತ್ರ ನಡೆಯಬೇಕಿತ್ತು. ಈ ಕಾರ್ಯಕ್ರಮವನ್ನು ಅಮೂಲ್ಯಾ ದಂಪತಿ ಕುಟುಂಬ ಸಮೇತ ತಿರುಪತಿಗೆ ಹೋಗಿ ಅಲ್ಲಿಯೇ ನೆರವೇರಿಸಿದ್ದಾರೆ. ಜಗದೀಶ್​ ಅವರು ಈ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​​ನಲ್ಲಿ ಹಂಚಿಕೊಂಡಿದ್ದಾರೆ. ಇಬ್ಬರೂ ಪುಟಾಣಿಗಳ ಮುಡಿ ದೇವರಿಗೆ ಅರ್ಪಿತಗೊಂಡಿದ್ದನ್ನು ಫೋಟೋದಲ್ಲಿ ನೋಡಬಹುದು.

ಅಮೂಲ್ಯಾ ಇದೇ ವರ್ಷ ಮಾರ್ಚ್​ ತಿಂಗಳಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ದೀಪಾವಳಿಯಂದು ಮೊದಲ ಬಾರಿಗೆ ಮಕ್ಕಳೊಂದಿಗೆ ಫೋಟೋಶೂಟ್ ಮಾಡಿಸಿ, ಅವರ ಮುಖ ಪರಿಚಯಿಸಿದ್ದರು. ಇತ್ತೀಚೆಗೆ ನಡೆದ ಅವಳಿ ಮಕ್ಕಳ ನಾಮಕರಣ ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು, ಕೆಲವು ರಾಜಕೀಯ ಮುಖಂಡರೂ ಪಾಲ್ಗೊಂಡಿದ್ದರು.

ಇದನ್ನೂ ಓದಿ: Amulya Actress | ನಟಿ ಅಮೂಲ್ಯ ಜನುಮದಿನ: ಈ ದಿನವೇ ವ್ಯಾಲೆಂಟೈನ್ಸ್‌ ಡೇ ಅಂದ್ರು ಪತಿ ಜಗದೀಶ್‌!

Exit mobile version