Site icon Vistara News

Amy Jackson: ʻದಿ ವಿಲನ್‌ʼ ಸಿನಿಮಾ ನಟಿ ʻಆ್ಯಮಿ ಜಾಕ್ಸನ್ʼ ಕಂಡು ಫ್ಯಾನ್ಸ್‌ ಅಚ್ಚರಿ; ನಟಿ ಹೀಗಾಗಿದ್ದೇಕೆ?

Amy Jackson
ಪ್ರೇಮ್ ನಿರ್ದೇಶನದ ‘ದಿ ವಿಲನ್’ ಚಿತ್ರದಲ್ಲಿ ಆ್ಯಮಿ ಜಾಕ್ಸನ್ (Amy Jackson) ನಾಯಕಿಯಾಗಿ ಮಿಂಚಿದ್ದರು. ಸುದೀಪ್ ಜೋಡಿಯಾಗಿ ನಟಿಸಿದ್ದ ಆ್ಯಮಿ ಜಾಕ್ಸನ್ ಅವರ ಅವತಾರ ಬದಲಾಗಿದೆ. ಇದ್ದಕ್ಕಿದಂತೆ ನಟಿಗೆ ಏನಾಯ್ತು? ಎಂದು ಅವರ ಫ್ಯಾನ್ಸ್‌ ತಲೆಕೆಡಿಸಿಕೊಂಡಿದ್ದಾರೆ.
ನಟ, ಸಂಗೀತ ನಿರ್ದೇಶಕ ಎಡ್ ವೆಸ್ಟ್ವಿಕ್ ಜತೆ ಆ್ಯಮಿ ಜಾಕ್ಸನ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಬೆನ್ನಲ್ಲೇ ನಟಿಯ ವಿಚಿತ್ರ ಲುಕ್ ಭಾರಿ ಚರ್ಚೆಯಲ್ಲಿದೆ. ನಟಿ ಇದರಲ್ಲಿ ಬಹಳ ತೆಳ್ಳಗೆ ಕಾಣಿಸಿದ್ದು, ಹಲವು ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.
ಕೆಲವರು ಆ್ಯಮಿ ಜಾಕ್ಸನ್, ‘ಆಪೆನ್‌ಹೈಮರ್’ ಚಿತ್ರದಲ್ಲಿ ನಟಿಸಿದ್ದ ಐರಿಷ್ ನಟ ಕಿಲಿಯನ್ ಮರ್ಫಿ ಲುಕ್ ಟ್ರೈ ಮಾಡಿದ್ದಾರೆ ಎನ್ನುತ್ತಿದ್ದಾರೆ.’ದಿ ಫರ್ಪೆಕ್ಟ್’ ಎನ್ನುವ ಮ್ಯಾಗಜೀನ್ ಪಾರ್ಟಿಗಾಗಿ ಬಾಯ್‌ಫ್ರೆಂಡ್ ಜತೆ ಈ ಅವತಾರದಲ್ಲಿ ಆ್ಯಮಿ ಜಾಕ್ಸನ್ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: SS Rajamouli: ರಾಜಮೌಳಿ ಹೊಸ ಸಿನಿಮಾ ಅನೌನ್ಸ್‌; ಬಯೋಪಿಕ್‌ ಮೂಲಕ ಕಮ್‌ಬ್ಯಾಕ್‌; ನಿರ್ದೇಶಕ ಮಾತ್ರ ಬೇರೆ!

ಸದ್ಯ ತಮಿಳು ಚಿತ್ರವೊಂದರಲ್ಲಿ ಆ್ಯಮಿ ಜಾಕ್ಸನ್ ನಟಿಸಿದ್ದು ಶೂಟಿಂಗ್ ಕಂಪ್ಲೀಟ್ ಆಗಿದೆ. ಮೊದಲಿಗೆ ಕಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದ ಆ್ಯಮಿ ಜಾಕ್ಸನ್ ಬಳಿಕ ಕನ್ನಡ, ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದರು.
ವಿಕ್ರಮ್ ನಟನೆಯ ‘ ಐ’ ಮತ್ತು ರಜನಿಕಾಂತ್ ನಟನೆಯ ‘2.O’ ಚಿತ್ರಗಳಲ್ ಬಣ್ಣ ಹಚ್ಚಿದ್ದರು.
ಮೂಲತಃ ಲಂಡನ್​ನವರಾದ ಆ್ಯಮಿ ಜಾಕ್ಸನ್​ಗೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದ ಯಶಸ್ಸು ಸಿಕ್ಕಿದೆ.
Exit mobile version