Site icon Vistara News

Anant Ambani: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌ ಪ್ಲ್ಯಾನಿಂಗ್‌ ಹೇಗಿದೆ? ಸಖತ್‌ ಕ್ಯೂರಿಯಸ್‌ ಆಗಿರಲಿದೆ ರಾಧಿಕಾ ಉಡುಪು!

Anant Ambani things to know from celebrity guests to space theme bash

ಬೆಂಗಳೂರು: ಮುಕೇಶ್‌ ಅಂಬಾನಿ ಮತ್ತು ನೀತಾ ಅಂಬಾನಿ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ಗಾಗಿ (Anant Ambani Radhika) ಎರಡನೇ ವಿವಾಹ ಪೂರ್ವ ಸಮಾರಂಭವನ್ನು ಮೇ 28ರಿಂದ 30ರವರೆಗೆ ಇಟಲಿಯಲ್ಲಿ ಆಯೋಜಿಸಿದ್ದಾರೆ.  ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟಿಗರು ಮತ್ತು ಅಂಬಾನಿ ಕುಟುಂಬದ ಇತರ ಗಣ್ಯ ವ್ಯಕ್ತಿಗಳು ಎರಡನೇ ವಿವಾಹ ಪೂರ್ವ ಸಂಭ್ರಮಾಚರಣೆಗೆ ತೆರಳುತ್ತಿದ್ದಾರೆ. 2024ರ ಮಾರ್ಚ್‌ನಲ್ಲಿ ಜಾಮ್‌ನಗರದಲ್ಲಿ ನಡೆದ ಪ್ರಿ ವೆಡ್ಡಿಂಗ್‌ ಆಚರಣೆಗಳಂತೆಯೇ ಇದು ಕೂಡ ಅದ್ಧೂರಿಯಾಗಿ ನಡೆಯುವ ನಿರೀಕ್ಷೆಯಿದೆ ಎನ್ನಲಾಗಿದೆ.

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ,ಮಗಳು ರಾಹಾ ಕಪೂರ್, ಹಾಗೆಯೇ ರಣವೀರ್ ಸಿಂಗ್, ಸಲ್ಮಾನ್ ಖಾನ್, ಮಾಜಿ ಭಾರತೀಯ ಕ್ರಿಕೆಟ್ ನಾಯಕ ಎಂಎಸ್ ಧೋನಿ – ಪತ್ನಿ ಸಾಕ್ಷಿ ಧೋನಿ ಮತ್ತು ಮಗಳು ಝಿವಾ ಈಗಾಗಲೇ ಇಟಲಿಗೆ ತೆರಳಿದ್ದಾರೆ. ಇವರೆಲ್ಲರೂ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.

ಆಚರಣೆ ಎಲ್ಲಿ ಪ್ರಾರಂಭವಾಗುತ್ತದೆ? ಹೇಗೆ ಇರಲಿದೆ?

ವರದಿಯ ಪ್ರಕಾರ, ಮೇ 28 ಮತ್ತು 30ರ ನಡುವೆ ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್‌ ಹಡಗು)  800 ಅತಿಥಿಗಳಿಗಾಗಿ  ಪಾರ್ಟಿ ಆಯೋಜಿಸಲಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ತನಕ ಸುಮಾರು 4380 ಕಿ. ಮೀ ಚಲಿಸಲಿದೆ ಎನ್ನಲಾಗಿದೆ. 

ಮೇ 30 ರಂದು, ಅತಿಥಿಗಳು ಬಂದಿಳಿಯುತ್ತಾರೆ. ನಂತರ ಔತಣಕೂಟ ಮತ್ತು ಪಾರ್ಟಿಯು 1 ಗಂಟೆಗೆ ಪ್ರಾರಂಭವಾಗುತ್ತದೆ. ಮೇ 31 ರಂದು ಬೆಳಗ್ಗೆ ಕ್ರೂಸ್‌ನಲ್ಲಿ ಅತಿಥಿಗಳು ಇಳಿಯುತ್ತಾರೆ. ಅತಿಥಿಗಳ ಪಟ್ಟಿಯಲ್ಲಿ ಸಲ್ಮಾನ್ ಖಾನ್, ರಣಬೀರ್ ಕಪೂರ್, ಆಲಿಯಾ ಭಟ್, ರಣವೀರ್ ಸಿಂಗ್ ಮುಂತಾದ ಗಣ್ಯ ಸೆಲೆಬ್ರಿಟಿಗಳು ಇರಲಿದ್ದಾರೆ. ಆಮೀರ್ ಖಾನ್ ಮತ್ತು ಶಾರುಖ್ ಖಾನ್ ಕುಟುಂಬದೊಂದಿಗೆ ಆಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.

ಇದನ್ನೂ ಓದಿ: Anant Ambani Radhika: ಅಂಬಾನಿ ಮಗನ ಮತ್ತೊಂದು ಪ್ರಿ ವೆಡ್ಡಿಂಗ್‌: ಇಟಲಿಗೆ ಹೊರಟ ಆಲಿಯಾ ಭಟ್ ದಂಪತಿ!

ತಂತ್ರಜ್ಞಾನ ಬಳಸಿ ತಯಾರಿಸಲಾಗಿದೆ ರಾಧಿಕಾ ಮರ್ಚಂಟ್‌ ಡ್ರೆಸ್‌!

ರಾಧಿಕಾ ಮರ್ಚಂಟ್‌ ಅಂದವಾದ ಕಸ್ಟಮ್-ನಿರ್ಮಿತ ಗ್ರೇಸ್ ಲಿಂಗ್ ಕೌಚರ್ ( Grace Ling Couture piece) ಪೀಸ್ ಧರಿಸುತ್ತಾರೆ ಎನ್ನಲಾಗಿದೆ. ಈ ಉಡುಪು 3D ವಿನ್ಯಾಸದಲ್ಲಿ ಇರಲಿದೆಯಂತೆ. ಏರೋಸ್ಪೇಸ್ ಅಲ್ಯೂಮಿನಿಯಂ ತಂತ್ರಜ್ಞಾನವನ್ನು ಬಳಸಿ ತಯಾರಿಸಲಾಗಿದೆ ಎನ್ನಲಾಗಿದೆ.

ಜಾಮ್‌ನಗರದಲ್ಲಿ ನಡೆದ ಆಚರಣೆಯಲ್ಲಿ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ರಿಹಾನ್ನಾ, ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ, ಶಾರುಖ್ ಖಾನ್, ಆಲಿಯಾ ಭಟ್, ಕತ್ರಿನಾ ಕೈಫ್ ಸೇರಿದಂತೆ ಸುಮಾರು 1,200 ಅತಿಥಿಗಳು ಭಾಗವಹಿಸಿದ್ದರು. ಕಳೆದ ವರ್ಷ ಜನವರಿಯಲ್ಲಿ ಅನಂತ್ ಮತ್ತು ರಾಧಿಕಾ ನಿಶ್ಚಿತಾರ್ಥ ಸಾಂಪ್ರದಾಯಿಕ ಗೋಲ್‌ ಧನಾ ಕಾರ್ಯಕ್ರಮವಾಗಿ ನಡೆದಿತ್ತು. ಮದುವೆ ಜುಲೈ 12ರಂದು ನಡೆಯಲಿದೆ.

ಈ ಮುಂಚೆ ನಡೆದ ಪ್ರಿ ವೆಡ್ಡಿಂಗ್‌ ಕಾರ್ಯಕ್ರಮಕ್ಕೆ ಮುಕೇಶ್‌ ಅಂಬಾನಿ ಅವರು ಸುಮಾರು 1 ಸಾವಿರ ಕೋಟಿ ರೂ. ವ್ಯಯಿಸಿದ್ದಾರೆ ಎಂದು ತಿಳಿದುಬಂದಿದೆ. ಖ್ಯಾತ ಪಾಪ್‌ ಗಾಯಕಿ ರಿಹಾನಾ, ಸಚಿನ್‌ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಕುಟುಂಬಸ್ಥರು, ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಆಮೀರ್‌ ಖಾನ್‌, ರಣವೀರ್‌ ಸಿಂಗ್‌, ದೀಪಿಕಾ ಪಡುಕೋಣೆ, ಗೌತಮ್‌ ಅದಾನಿ, ಆಲಿಯಾ ಭಟ್‌, ರಣಬೀರ್‌ ಕಪೂರ್‌, ಬಿಲ್‌ ಗೇಟ್ಸ್‌ ಸೇರಿ ದೇಶ-ವಿದೇಶಗಳ ನೂರಾರು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Exit mobile version