ಬೆಂಗಳೂರು: ಹಿರಿಯ ನಟರಾದ ಅಮಿತಾಭ್ ಬಚ್ಚನ್ (Amitabh Bachchan) ಮತ್ತು ರಜನಿಕಾಂತ್ (Rajinikanth ) ಶನಿವಾರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಮುಂಬೈನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಶನ್ ಸೆಂಟರ್‌ನಲ್ಲಿ ಶುಕ್ರವಾರ (ಜುಲೈ 12) ರಾತ್ರಿ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರು ಸಾವಿರಾರು ಗಣ್ಯರು (Anant Ambani Wedding), ಸೆಲೆಬ್ರಿಟಿಗಳ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮಾರಂಭದ ಹಲವು ಫೋಟೊ ಹಾಗೂ ವಿಡಿಯೊಗಳು ವೈರಲ್ ಆಗಿವೆ. ಅಮಿತಾಭ್ ಅವರನ್ನು ಕಂಡೊಡನೆ ರಜನಿಕಾಂತ್ ಅವರು, ಬಚ್ಚನ್ ಅವರ ಪಾದಗಳಿಗೆ ನಮಸ್ಕರಿಸಲು ಮುಂದಾಗಿದ್ದರು. ಈ ವೇಳೆ ಅಮಿತಾಭ್ ಅವರು ಪಾದಗಳನ್ನು ಸ್ಪರ್ಶಿಸಲು ಬಿಡದೆ ಅಪ್ಪಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆದ ಪ್‌ನಲ್ಲಿ, ಇಬ್ಬರೂ ಪರಸ್ಪರ ಶುಭಾಶಯ ಕೋರಿದ್ದಾರೆ. ಅಮಿತಾಭ್ ಕೈ ಚಾಚುತ್ತಿದ್ದಂತೆ, ರಜನಿಕಾಂತ್ ಅವರು, ಬಚ್ಚನ್ ಅವರ ಪಾದಗಳನ್ನು ಮುಟ್ಟಲು ಪ್ರಯತ್ನಿಸಿದರು. ಅಮಿತಾಭ್ ಶೀಘ್ರವಾಗಿ ರಜನಿ ಅವರ ಕೈಗಳನ್ನು ಹಿಡಿದು ಬಳಿಕ ಅಪ್ಪಿಕೊಂಡರು. ಇಬ್ಬರೂ ಪರಸ್ಪರ ಕೈಕುಲುಕಿದರು. ಸ್ವಲ್ಪ ಸಮಯ ಮಾತನಾಡಿದರು. ಈ ಕಾರ್ಯಕ್ರಮಕ್ಕಾಗಿ ಅಮಿತಾಭ್ ಅವರು ಬಣ್ಣಬಣ್ಣದ ಶೇರ್ವಾನಿ ಮತ್ತು ಶಾಲು ಧರಿಸಿದ್ದರು. ರಜನಿಕಾಂತ್ ಅವರು ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: IPL 2024 : ಶಾರುಖ್ ಮಾಲೀಕತ್ವದ ಕೆಕೆಆರ್ ವಿರುದ್ಧ ಎಸ್ಆರ್ಎಚ್ ಸೋತಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಅಮಿತಾಭ್ ಬಚ್ಚನ್
ವಿಡಿಯೋಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ಇವರಿಬ್ಬರು ಪ್ರೀತಿ ಮತ್ತು ಗೌರವಕ್ಕೆ ಅರ್ಹರು” ಎಂದು ಕಮೆಂಟ್ ಮಾಡಿದ್ದಾರೆ. “ಎಷ್ಟು ವಿನಮ್ರ ಮಹಾನ್ ವ್ಯಕ್ತಿಗಳು” ಎಂದು ಮತ್ತೊಬ್ಬರು ಬರೆದಿದ್ದಾರೆ. ʻತುಂಬಾ ಡೌನ್ ಟು ಅರ್ಥ್” ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ನಟ ರಜನಿಕಾಂತ್ ಅವರು ಕುಟುಂಬ ಸಮೇತರಾಗಿ ಅನಂತ್ ಅಂಬಾನಿಯ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಅವರು ಭರ್ಜರಿಯಾಗಿ (Anant Ambani Wedding) ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಅವರ ಡ್ಯಾನ್ಸ್ ಮತ್ತು ಉತ್ಸಾಹ ನೋಡಿ ಯುವಕರೂ ನಾಚುವಂತಿದೆ. ಹಾಲಿವುಡ್ ಸೆಲೆಬ್ರಿಟಿಗಳು, ಬಾಲಿವುಡ್ ತಾರೆಯರು, ದಕ್ಷಿಣ ಭಾರತದ ಸಿನಿಮಾ ಮಂದಿ ಸೇರಿದಂತೆ ನೂರಾರು ಗಣ್ಯರು ಮದುವೆಗೆ ಸಾಕ್ಷಿ ಆಗಿದ್ದಾರೆ. ಬಂದಿರುವ ಅತಿಥಿಗಳ ಜೊತೆ ಅಂಬಾನಿ ಕುಟುಂಬದವರು ಖುಷಿಯಿಂದ ಬೆರೆತಿದ್ದಾರೆ.ಜನಿಕಾಂತ್ ಅವರು ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ಈ ಸೂಪರ್ ಸ್ಟಾರ್ಗಳ ಜೊತೆ ಅನಂತ್ ಅಂಬಾನಿ ಕೂಡ ಹೆಜ್ಜೆ ಹಾಕಿದ್ದಾರೆ. ಅವರ ಮದುವೆಯಲ್ಲಿ ತಾರಾ ಮೆರುಗು ತುಂಬಿದೆ.‘ತಲೈವಾ’ ರಜನಿಕಾಂತ್ ಜೊತೆ ಅವರ ಪತ್ನಿ ಲತಾ, ಮಗಳು ಸೌಂದರ್ಯಾ ಕೂಡ ಅನಂತ್ ಅಂಬಾನಿಯ ಮದುವೆಗೆ ಬಂದಿದ್ದಾರೆ.
ಶುಭ್ ಆಶೀರ್ವಾದ್ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಜಾನ್ವಿ ಕಪೂರ್, ಐಶ್ವರ್ಯ ರೈ, ರಣಬೀರ್ ಕಪೂರ್, ಆಲಿಯಾ ಭಟ್, ಸಾರಾ ಅಲಿ ಖಾನ್, ಸಂಜಯ್ ದತ್, ಅಜಯ್ ದೇವಗನ್, ಹೇಮಾ ಮಾಲಿನಿ ಕೂಡ ಭಾಗವಹಿಸಿದ್ದರು. ಶನಯಾ ಕಪೂರ್, ದಿಶಾ ಪಟಾನಿ, ಖುಷಿ ಕಪೂರ್, ಸಚಿನ್ ತೆಂಡೂಲ್ಕರ್ ಮತ್ತು ಸಾನಿಯಾ ಮಿರ್ಜಾ ಸೇರಿದಂತೆ ಅತಿಥಿಗಳು ಸಮಾರಂಭಕ್ಕೆ ಆಗಮಿಸಿದ್ದರು. ಸಮಾರಂಭದಲ್ಲಿ ರಶ್ಮಿಕಾ ಮಂದಣ್ಣ, ವಿಧು ವಿನೋದ್ ಚೋಪ್ರಾ, ವೆಂಕಟೇಶ್ ದಗ್ಗುಬಾಟಿ, ಶಾಹಿದ್ ಕಪೂರ್ ಮತ್ತು ಅವರ ಪತ್ನಿ ಮೀರಾ ರಜಪೂತ್ ಕೂಡ ಕಾಣಿಸಿಕೊಂಡರು. ವಿದ್ಯಾ ಬಾಲನ್ ಮತ್ತು ದಂಪತಿ ರಿತೇಶ್ ದೇಶ್‌ಮುಖ್ ಮತ್ತು ಜೆನಿಲಿಯಾ ಡಿಸೋಜಾ ಸಹ ಹಾಜರಿದ್ದರು.