Site icon Vistara News

Ananya Panday: ಸಿಗರೇಟ್ ಸೇದುತ್ತಿರುವ ಅನನ್ಯಾ ಪಾಂಡೆ: ಸ್ಮೋಕರ್ ಎಂದು ಟ್ರೋಲ್‌ ಮಾಡಿದ ನೆಟ್ಟಿಗರು

Ananya Panday Caught Smoking

ಬೆಂಗಳೂರು: ಬಾಲಿವುಡ್‌ ನಟಿ ಅನನ್ಯಾ ಪಾಂಡೆ(Ananya Panday) ತನ್ನ ಸೋದರಸಂಬಂಧಿ ಅಲನ್ನಾ ಪಾಂಡೆಯ ಮೆಹೆಂದಿ ಸಮಾರಂಭದಲ್ಲಿ ಸಿಗರೇಟ್ ಸೇದುತ್ತಿರುವ ಫೋಟೊ ವೈರಲ್‌ ಆಗಿದೆ. ತನ್ನ ಕುಟುಂಬದೊಂದಿಗೆ ನಟಿ ಹಾಜರಾಗಿದ್ದರು. ವ್ಯಕ್ತಿಯೊಬ್ಬರು ಹಂಚಿಕೊಂಡ ಚಿತ್ರದಲ್ಲಿ ನಟಿ ಸಿಗರೇಟ್ ಹಿಡಿದುಕೊಂಡಿದ್ದಾರೆ. ಜನರು ಗುಂಪುಗುಂಪಾಗಿ ನಿಂತು ಮದುವೆ ಕಾರ್ಯಗಳಲ್ಲಿ ಬ್ಯುಸಿ ಇದ್ದರೆ, ಅನನ್ಯಾ ಮಾತ್ರ ಸಿಗರೇಟ್ ಸೇದುತ್ತಾ ನಿಂತಿದ್ದರು. ಇದೀಗ ಈ ಪೋಟೊ ವೈರಲ್‌ ಆಗಿದ್ದು, ನಟಿ ಟ್ರೋಲ್‌ಗೆ ಗುರಿಯಾಗಿದ್ದಾರೆ.

“ಅನನ್ಯಾ ಸಿಗರೇಟ್ ಸೇದುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ” ಎಂದು ನೆಟ್ಟಿಗರೊಬ್ಬರು ಕಮೆಂಟ್‌ ಮಾಡಿದರೆ ಇನ್ನೊಬ್ಬರು ʻʻನಟಿ ತುಂಬಾ ಸುಂದರವಾಗಿದ್ದಾರೆ, ಮುದ್ದಾದ ತುಟಿಗಳನ್ನು ಹೊಂದಿದ್ದಾರೆ, ಆದರೆ, ಸ್ಮೋಕರ್ ಎಂದು ಗೊತ್ತಿರಲಿಲ್ಲ. ನಂಬಲು ಸಾಧ್ಯವಿಲ್ಲʼʼ. ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು,ʻʻ ನಟಿ ತನ್ನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಈ ರೀತಿ ಆಗಿರಬಹುದೆಂದುʼʼ ಕಮೆಂಟ್‌ ಮಾಡಿದ್ದಾರೆ. ನಟಿಯ ಬಗ್ಗೆ ಕೆಲವರು ಛೀಮಾರಿ ಹಾಕಿದರೆ ಇನ್ನೂ ಕೆಲವರು ಇದರಲ್ಲಿ ತಪ್ಪೇನಿಲ್ಲ ಎಂತಲೂ ಸಮರ್ಥಿಸಿಕೊಂಡಿದ್ದಾರೆ. ಮಹಿಳೆ ಎಂಬ ಕಾರಣಕ್ಕಾಗಿ ಅವರನ್ನು ಅವಮಾನಿಸಬೇಡಿ ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: Ananya Pandey | ಇಲ್ಲಿವೆ ಅನನ್ಯಾ ಪಾಂಡೆ ನ್ಯೂ ಲುಕ್ಸ್‌

ಸಮಾರಂಭದಲ್ಲಿ ಅತುಲ್ ಅಗ್ನಿಹೋತ್ರಿ ಮತ್ತು ಅಲ್ವಿರಾ ಅಗ್ನಿಹೋತ್ರಿ, ಚಂಕಿ ಪಾಂಡೆ ಮತ್ತು ಭಾವನಾ ಪಾಂಡೆ ಉಪಸ್ಥಿತರಿದ್ದರು. ಮೆಹೆಂದಿ ಕಾರ್ಯಕ್ರಮ ಸೊಹೈಲ್ ಖಾನ್ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು. ಹೆಲೆನ್ ಮತ್ತು ಸಲ್ಮಾ ಖಾನ್ ಕೂಡ ಭಾಗವಹಿಸಿದ್ದರು.

Exit mobile version