Site icon Vistara News

Ananya Panday: ‘ಹಾವು’ ಜತೆಗಿದ್ದ ಫೋಟೊ ಡಿಲಿಟ್ ಮಾಡಿದ ನಟಿ ಅನನ್ಯಾ ಪಾಂಡೆ

ananya pandays definition of heaven is puppies and snakes

ಬೆಂಗಳೂರು: ಅನನ್ಯಾ ಪಾಂಡೆ (Ananya Panday) ಅವರು ಮುಖೇಶ್ ಅಂಬಾನಿಯವರ ಮೊಮ್ಮಕ್ಕಳಾದ ಆದಿಯಾ ಮತ್ತು ಕೃಷ್ಣ ಅವರ ಮೊದಲ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಇಶಾ ಅಂಬಾನಿ ಮತ್ತು ಅವರ ಪತಿ ಆನಂದ್ ಪಿರಮಾಲ್ ಅವರು ಈ ಸಂದರ್ಭಕ್ಕಾಗಿ ಗ್ರ್ಯಾಂಡ್ ಕಂಟ್ರಿ ಫೇರ್-ಥೀಮ್ ಪಾರ್ಟಿಯನ್ನು ನಡೆಸಿದ್ದರು. ಪಾರ್ಟಿಯ ಝಲಕ್‌ಗಳನ್ನು ಹಂಚಿಕೊಂಡ, ಅನನ್ಯಾ ನಾಯಿಮರಿಗಳು ಮತ್ತು ಹಾವುಗಳೊಂದಿಗೆ ಪೋಸ್‌ ಕೊಟ್ಟಿರುವ ಫೋಟೊವನ್ನು ಶೇರ್‌ ಮಾಡಿಕೊಂಡಿದ್ದರು. ಆದರೆ ಈ ಫೋಟೊ ಭಾರಿ ವಿವಾದಕ್ಕೆ ಒಳಗಾಗಿ ಏಕಾಏಕಿ ನಟಿ ಫೋಟೊವನ್ನು ಡಿಲೀಟ್‌ ಮಾಡಿದ್ದಾರೆ.

ಚಿತ್ರಗಳಲ್ಲಿ ಅನನ್ಯಾ ಅವರು ಬೀಜ್ ಫ್ಲೋರಲ್ ಆಫ್ ಶೋಲ್ಡರ್ ಶಾರ್ಟ್ ಡ್ರೆಸ್ ಧರಿಸಿದ್ದರು. ಈ ಫೋಟೊಗಳು ವೈರಲ್‌ ಆಗುತ್ತಿದ್ದಂತೆ “ಆದಿತ್ಯ ರಾಯ್ ಕಪೂರ್ ಸೆರೆಹಿಡಿದ ಚಿತ್ರಗಳು” ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಸೂಪರ್‌ಸ್ಟಾರ್ ಶಾರುಖ್ ಖಾನ್ ಮತ್ತು ಮುಖೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ ಅವರು ಶಾರುಖ್‌ ಅವರಿಗೆ ಹಾವನ್ನು ಹಸ್ತಾತಂರಿಸಿರುವ ಫೋಟೊ ಕೂಡ ವೈರಲ್‌ ಆಗಿತ್ತು.

ಅನಂತ್ ಹಾವನ್ನು ಶಾರುಖ್‌ ಅವರಿಗೆ ಹಸ್ತಾಂತರಿಸುತ್ತಿದ್ದಂತೆ, ಒಬ್ಬ ವ್ಯಕ್ತಿ ಹಿಂದಿನಿಂದ ನಟನ ಕುತ್ತಿಗೆಗೆ ಮತ್ತೊಂದು ಹಾವನ್ನು ಹಾಕುತ್ತಿರುವುದನ್ನು ಹಾಕಿದ್ದಾರೆ. ಇದೀಗ ಅನನ್ಯಾ ಪಾಂಡೆ ಈ ಫೋಟೊವನ್ನು ಡಿಲೀಟ್‌ ಮಾಡಿದ್ದಾರೆ.

ಇದನ್ನೂ ಓದಿ: Ananya Pandey | ಇಲ್ಲಿವೆ ಅನನ್ಯಾ ಪಾಂಡೆ ನ್ಯೂ ಲುಕ್ಸ್‌

ಅನನ್ಯಾ ಪಾಂಡೆ ಕೊನೆಯದಾಗಿ ‘ಡ್ರೀಮ್ ಗರ್ಲ್ 2’ ನಲ್ಲಿ ಕಾಣಿಸಿಕೊಂಡರು. ‘ಖೋ ಗಯೇ ಹಮ್ ಕಹಾಂ’ ಸಿನಿಮಾ ಸದ್ಯ ಅವರ ಕೈಯಲ್ಲಿದೆ. ಆದಿತ್ಯ ರಾಯ್ ಕಪೂರ್ ಕೊನೆಯ ಬಾರಿಗೆ ‘ಗುಮ್ರಾ’ ಚಿತ್ರದಲ್ಲಿ ಕಾಣಿಸಿಕೊಂಡರು.

Exit mobile version