ಬೆಂಗಳೂರು: ಸಾರಾ ಅಲಿ ಖಾನ್ ಮತ್ತು ಅನನ್ಯಾ ಪಾಂಡೆ (Ananya Panday) ‘ಕಾಫಿ ವಿತ್ ಕರಣ್’ ಸೀಸನ್ 8ರಲ್ಲಿ ಅತಿಥಿಗಳಾಗಿ ಆಗಮಿಸಿದ್ದರು. ಇವರ ಎಪಿಸೋಡ್ ಬಗ್ಗೆ ಅಭಿಮಾನಿಗಳು ತಮ್ಮ ಪ್ರೀತಿಯನ್ನು ಧಾರೆ ಎರೆದರೆ, ಇನ್ನು ಕೆಲವರು ಅನನ್ಯಾ ಪಾಂಡೆ ಡೇಟಿಂಗ್ ಸುದ್ದಿ ಕೇಳಿ ಅಚ್ಚರಿಗೊಂಡಿದ್ದಾರೆ. ಇಬ್ಬರೂ ಜೀವನದ ಬಗ್ಗೆ ಕೆಲವು ರೋಚಕ ಗಾಸಿಪ್‌ಗಳನ್ನು ಹಂಚಿಕೊಂಡಿದ್ದಾರೆ.
ಸಾರಾ ಅವರು ಶುಭಮಾನ್ ಗಿಲ್ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳನ್ನು ನಿರಾಕರಿಸಿದರೆ, ಅನನ್ಯಾ ಅವರು ಆದಿತ್ಯ ರಾಯ್ ಕಪೂರ್ ಜತೆಗಿನ ಸಂಬಂಧವನ್ನು ಬಹುತೇಕ ದೃಢಪಡಿಸಿದರು. ಚಲನಚಿತ್ರ ನಿರ್ಮಾಪಕ ಮತ್ತು ನಿರೂಪಕ ಕರಣ್ ಜೋಹರ್ ಅನನ್ಯಾ ಅವರನ್ನು ʻಆದಿತ್ಯ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದೀರ? ಎಂದು ಪ್ರಶ್ನೆ ಕೇಳಿದರು. ಇದರಿಂದ ಬಚಾವ್ ಆಗಲು ಅನನ್ಯಾ ಹಲವಾರು ಪ್ರಯತ್ನಗಳನ್ನು ಮಾಡಿದರು. ಆದರೆ ಕೊನೆಗೂ ಆಗಲಿಲ್ಲ.
ಕರಣ್ ಜೋಹರ್ ಅನನ್ಯಾ ಪಾಂಡೆ ಅವರೊಂದಿಗೆ ಮಾತನಾಡುತ್ತಾ ‘ರಿಲೇಶನ್ ಸ್ಟೇಟಸ್ ಬಗ್ಗೆ ಪ್ರಶ್ನೆ ಎತ್ತುತ್ತಾರೆ. ಈ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಅನನ್ಯಾ ಪಾಂಡೆ ʻʻಸಂಬಂಧಗಳನ್ನು ನಿರಾಕರಿಸಬೇಕು ಅಥವಾ ಅವುಗಳನ್ನು ಒಪ್ಪಿಕೊಳ್ಳಬೇಕು ಎಂದು ನಾನು ಹೇಳುತ್ತಿಲ್ಲ.. ಸರಿಯಾದ ಸಂದರ್ಭದಲ್ಲಿ ಸೂಕ್ತವಾದುದನ್ನು ಮಾಡಬೇಕು ಎಂದಿದ್ದಾರೆ. ಅಲ್ಲದೆ, ಕೆಲವು ವಿಷಯಗಳು ಖಾಸಗಿಯಾಗಿದ್ದು, ವಿಶೇಷವಾಗಿರುತ್ತವೆ. ಅವುಗಳನ್ನು ಅದರ ಪಾಡಿಗೆ ಬಿಟ್ಟು ಬಿಡಬೇಕುʼʼ ಎಂದು ಹೇಳಿದ್ದಾರೆ.
ಇದನ್ನೂ ಓದಿ: Ananya Panday: ತನ್ನನ್ನು ಎಸಿಪಿ ಎಂದು ಕರೆಯದಂತೆ ಮಾಧ್ಯಮಗಳಿಗೆ ವಿನಂತಿಸಿದ ಅನನ್ಯಾ ಪಾಂಡೆ
ಬಳಿಕ ಕರಣ್ ಅವರು ಮತ್ತೆ ಆದಿತ್ಯ ಜತೆ ಇರುವುದು ನಿಮ್ಮ ಸ್ನೇಹಾನಾ ಅಥವಾ ಸ್ನೇಹಕ್ಕಿಂತ ಮುಂದುವರಿದ ಸಂಬಂಧನಾ?ಎಂದು ಪ್ರಶ್ನೆ ಇಟ್ಟರು. “ಸ್ನೇಹಿತರಲ್ಲ, ನಾವು ಸ್ನೇಹಿತರು” ಎಂದು ಅನನ್ಯಾ ಹೇಳಿದರು, ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಕರಣ್ ವ್ಯಂಗ್ಯವಾಡಿದರು,”ಬೆಸ್ಟ್ ಫ್ರೆಂಡ್ಸ್, ನಾವು ನಿಜವಾಗಿಯೂ ಒಳ್ಳೆಯ ಸ್ನೇಹಿತರು” ಎಂದರು ಅನನ್ಯಾ.
ಅನನ್ಯಾ ಪಾಂಡೆ ಮತ್ತು ಆದಿತ್ಯ ರಾಯ್ ಕಪೂರ್ ನಡುವೆ ಡೇಟಿಂಗ್ ವದಂತಿಗಳು ಬಹಳ ಸಮಯದಿಂದ ಕೇಳಿ ಬರುತ್ತಿದೆ. ಅನನ್ಯಾ ಪಾಂಡೆ ಕೊನೆಯದಾಗಿ ‘ಡ್ರೀಮ್ ಗರ್ಲ್ 2’ ನಲ್ಲಿ ಕಾಣಿಸಿಕೊಂಡರು. ‘ಖೋ ಗಯೇ ಹಮ್ ಕಹಾಂ’ ಸಿನಿಮಾ ಸದ್ಯ ಅವರ ಕೈಯಲ್ಲಿದೆ. ಆದಿತ್ಯ ರಾಯ್ ಕಪೂರ್ ಕೊನೆಯ ಬಾರಿಗೆ ‘ಗುಮ್ರಾ’ ಚಿತ್ರದಲ್ಲಿ ಕಾಣಿಸಿಕೊಂಡರು.