Site icon Vistara News

Anchor Aparna: ಒನ್ ಆ್ಯಂಡ್ ಒನ್ಲಿ ವರಲಕ್ಷ್ಮಿ ‘ಮಜಾ ಟಾಕೀಸ್’ ನಿಂದ ಹೊರ ಬರಲು ನಿರ್ಧರಿಸಿದ್ದೇಕೆ?

Anchor Aparna decided to quit Maja Talkies What is the reason

ಬೆಂಗಳೂರು: ಕನ್ನಡ ನಾಡು ಕಂಡ ನಿರೂಪಕಿ, ನಟಿ ಅಪರ್ಣಾ (Anchor Aparna) ಬಾರದ ಲೋಕಕ್ಕೆ ಹೋಗಿದ್ದಾರೆ. ಸಿನಿಮಾ, ಧಾರಾವಾಹಿ, ದೂರದರ್ಶನ ನಿರೂಪಣೆ, ಆಕಾಶವಾಣಿ, ವೇದಿಕೆ ಕಾರ್ಯಕ್ರಮ ಹೀಗೆ ಎಲ್ಲೆಡೆಯೂ ಮಿಂಚಿದ್ದ ಅಪರ್ಣಾ, ‘ಮಜಾ ಟಾಕೀಸ್’ ಮೂಲಕ ʻಒನ್ ಆ್ಯಂಡ್ ಒನ್ಲಿ ವರಲಕ್ಷ್ಮಿʼ ಎಂಬ ಖ್ಯಾತಿಯನ್ನೂ ಗಳಿಸಿದ್ದರು. ಈ ಕಾರ್ಯಕ್ರಮದಲ್ಲಿ ತಮ್ಮ ಹಾಸುದ ಮೂಲಕ ನೋಡುಗರನ್ನು ರಂಜಿಸಿದ್ದರು. ಮೊದಲಿಗೆ ‘ಮಜಾ ಟಾಕೀಸ್‌;ಗೆ ಬರಲು ಒಲ್ಲದ ಅಪರ್ಣಾ ಅವರಿಗೆ ಮನವೊಲಿಸಿದ್ದು ಸೃಜನ್‌ ಲೋಕೇಶ್‌.

ಮಜಾ ಟಾಕೀಸ್‌ ವೇದಿಕೆಯಲ್ಲಿ ಸ್ವೀಟ್ 16 ಕ್ಯಾರೆಕ್ಟರ್ ಎಂದು ‘ಒನ್ ಅಂಡ್ ಒನ್ಲಿ ವರಲಕ್ಷ್ಮಿ’ ಪಾತ್ರಕ್ಕೆ ಜೀವ ತುಂಬಿ ವೀಕ್ಷಕರ ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿದ್ದವರು ಅಪರ್ಣಾ. ಸಲ್ಮಾನ್ ಖಾನ್, ಶಾರುಖ್ ಖಾನ್ ಹೀಗೆ ಅನೇಕ ದೊಡ್ಡ ದೊಡ್ಡ ಗಣ್ಯರ ಹೆಸರುಗಳನ್ನು ಬಳಸಿ ಕಾಮಿಡಿ ಮಾಡಿ ನೋಡುಗರನ್ನು ರಂಜಿಸುತ್ತಿದ್ದರು. ಆದರೆ ‘ಮಜಾ ಟಾಕೀಸ್‌;ಗೆ ಬರಲು ಒಲ್ಲದ ಅಪರ್ಣಾ ಅವರಿಗೆ ಮನವೊಲಿಸಿದ್ದು ಸೃಜನ್‌ ಲೋಕೇಶ್‌.

ಈ ಕಾರ್ಯಕ್ರಮ ಮಾಡುತ್ತಿರುವಾಗ ಅಪರ್ಣಾ ಅವರಿಗೆ ನೆಟ್ಟಿಗರು ಟ್ರೋಲ್‌ ಮಾಡುತ್ತಾರೆ. ಕೆಟ್ಟ ಕಮೆಂಟ್‌ ಮಾಡುತ್ತಾರೆ. ಇದೆಲ್ಲ ನೋಡಿ ಬೇಸರಗೊಂಡು ಕಾರ್ಯಕ್ರಮಕ್ಕೆ ಬರದಿರಲು ನಿರ್ಧಾರ ಮಾಡುತ್ತಾರೆ. ಆದರೆ ಆಗ ಅವರ ಮನವೊಲಿಸಿದ್ದು ಸೃಜನ್‌ ,ಲೋಕೇಶ್‌. ಎಂಬತ್ತು ಜನ ಚೆನ್ನಾಗಿ, ಪಾಸಿಟಿವ್ ಆಗಿ ಕಮೆಂಟ್ ಮಾಡಿದ್ದಾರೆ. ನಿಮಗೆ ಈ ಎಂಬತ್ತು ಜನರ ಕಮೆಂಟ್‌ಗಳು ಮುಖ್ಯನಾ? ಅಥವಾ ನೆಗೆಟಿವ್ ಮಾತನಾಡಿರುವ ಇಪ್ಪತ್ತು ಜನರ ಅಭಿಪ್ರಾಯ ಮುಖ್ಯನಾ? ವರಲಕ್ಷ್ಮಿ ಕ್ಲಿಕ್ ಆಗುತ್ತಾಳೆ ಎಂಬ ನಂಬಿಕೆ ಇದ್ದರೆ ಇರಿ. ಇಲ್ಲ ಅಂದರೆ ಬೇಡ ಎಂದು ಸೃಜನ್ ಲೋಕೇಶ್ ಅಪರ್ಣಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದರು. ಆ ನಂತರ ಕಾರ್ಯಕ್ರಮದಲ್ಲಿ ಅಪರ್ಣಾ ಮುಂದುವರಿದರು.

ಇದನ್ನೂ ಓದಿ: Anchor Aparna: ಅಪರ್ಣಾ ಕೊನೆ ಆಸೆ ಏನಾಗಿತ್ತು? ಕನಸು ಈಡೇರುವ ಮುನ್ನವೇ ಕಣ್ಮುಚ್ಚಿದ ನಟಿ!

ವರಲಕ್ಷ್ಮೀ ಪಾತ್ರ ಜನ ಮನ ಗೆದ್ದ ನಂತರ ಚಿತ್ರರಂಗದಿಂದ ಅನೇಕ ಅವಕಾಶಗಳು ಅಪರ್ಣಾ ಅವರನ್ನು ಹುಡುಕಿಕೊಂಡು ಹೋಗಿದ್ದವು. ಕಾಮಿಡಿ ಸಿನಿಮಾಗಳಲ್ಲಿ ಅಭಿನಯಿಸುವ ಚಾನ್ಸ್ ಅಪರ್ಣಾಗೆ ಸಿಕ್ಕಿತ್ತು. ಆದರೆ, ಅದನ್ನು ಅಪರ್ಣಾ ಒಪ್ಪಿಕೊಳ್ಳಲಿಲ್ಲ.

ಇದೀಗ ಅಪರ್ಣಾ ಬಾರದ ಲೋಕಕ್ಕೆ ಹೋಗಿದ್ದಾರೆ. ಮಜಾ ಟಾಕೀಸ್ ಇಜಿಲಾ , ಇಂದ್ರಜೀತ್‌ ಇದೀಗ ಈ ಬಗ್ಗೆ ಮಾತನಾಡಿ ʻʻನಾನು ಚಿಕ್ಕವನಿದ್ದಾಗಿಂದಲು ಅಪರ್ಣಾ ನನಗೆ ಪರಿಚಯ. ಇತ್ತೀಚಿನ ನಮ್ಮ ತಂದೆಯವರ ಕಾರ್ಯಕ್ರಮ ವನ್ನ ನಡೆಸಿಕೊಟ್ಡಿದ್ದರು. ಅದ್ಭುತವಾದ ನಟಿ. ಅವರ ಮಾತುಗಳನ್ನು ಕೇಳಿಸೊಕೊಳ್ಳುವುದೆ ಖುಷಿಯಾಗ್ತಿತ್ತುʼʼಎಂದು ಹೇಳಿದರು.

ಮಧ್ಯಾಹ್ನ 12ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಮನೆಯ ಬಳಿಯೇ ವ್ಯವಸ್ಥೆ ಮಾಡಲಾಗಿದೆ. ನಂತರ ಕುಟುಂಬದಿಂದ ಅಂತಿಮ ವಿಧಿವಿಧಾನ ಕಾರ್ಯ ನಡೆಯಲಿದೆ. ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ’

Exit mobile version