Site icon Vistara News

Urfi Javed | ಏನ್‌ ಉಡುಗೆ, ಇದು ಏನ್‌ ಉಡುಗೆ ಎಂದವರ ಚಳಿಬಿಡಿಸಿದ ಉರ್ಫಿ; ವಿಡಿಯೊ ವೈರಲ್‌!

Urfi Javed

ಬೆಂಗಳೂರು: ಬಾಲಿವುಡ್‌ನ ಕಾಂಟ್ರವರ್ಸಿಯಲ್ ಕ್ವೀನ್ ಹಾಗೂ ಹಿಂದಿ ಬಿಗ್ ಬಾಸ್ OTT ಸೀಸನ್ 1 ರ ಸ್ಪರ್ಧಿ ಉರ್ಫಿ ಜಾವೇದ್ (Urfi Javed ) ತಮ್ಮ ಉಡುಗೆಗಳಿಂದಲೇ ಸದ್ದು ಮಾಡುತ್ತಿರುತ್ತಾರೆ. ಫ್ಯಾಷನ್‌ ಐಕಾನ್‌ ಎಂತಲೂ ಹೆಸರುವಾಸಿಯಾಗಿದ್ದ ಕರೆಸಿಕೊಳ್ಳುತ್ತಿರುತ್ತಾರೆ. ಹೊಸ ಉಡುಪಿನೊಂದಿಗೆ ಮಿಂಚುವ ಉರ್ಫಿ ಇದೀಗ ಮಾಧ್ಯಮಗಳ ಕಮೆಂಟ್‌ ಕೇಳಿ ಫುಲ್‌ ಗರಂ ಆಗಿದ್ದಾರೆ.

ಪ್ರತಿ ಬಾರಿ ಮಾಧ್ಯಮಗಳ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ಉರ್ಫಿ, ಈ ಬಾರಿ ತನ್ನ ಡ್ರೆಸ್‌ ಬಗ್ಗೆ ಕಮೆಂಟ್‌ ಮಾಡುವರಿಗೆ ತಿರುಗೇಟು ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಡ್ರೆಸ್‌ ಬಗ್ಗೆ ಕಮೆಂಟ್‌ ಮಾಡಿದವರಿಗೆ, ʻʻನಾನು ನಿಮ್ಮನ್ನು ಗೌರವಿಸುತ್ತೇನೆ. ನನ್ನ ಬಟ್ಟೆಯ ಬಗ್ಗೆ ಕಮೆಂಟ್‌ ಮಾಡಲು ಬಯಸಿದ್ದರೆ ನಿಮ್ಮ ಮನೆಯಲ್ಲಿರುವ ತಾಯಿ, ಅಕ್ಕ-ತಂಗಿ, ಗೆಳತಿಗೆ ಹೋಗಿ ಕಮಂಟ್‌ ಮಾಡಿ. ನನ್ನ ಮುಂದೆ ನನ್ನ ಬಟ್ಟೆಗಳ ಬಗ್ಗೆ ಕಮೆಂಟ್‌ ಮಾಡಬೇಡಿ” ಎಂದು ಗುಡುಗಿದ್ದಾರೆ.

ಇದನ್ನೂ ಓದಿ | Urfi Javed | ರಣವೀರ್ ಬೆತ್ತಲೆ ಅವತಾರ ನಂತರ ಉರ್ಫಿ ಜಾವೇದ್‌ ನಗ್ನಾವತಾರ, ಜೀವ ಬೆದರಿಕೆ

ನಾನು ನಿಮಗೆ ತುಂಬಾ ಗೌರವ ನೀಡುತ್ತೇನೆ ಎಂದಿದ್ದಾರೆ. ಅಷ್ಟೇ ಅಲ್ಲದೇ ಇನ್ನೊಮ್ಮೆ ಕಮೆಂಟ್‌ ಮಾಡಿದರೆ ಹುಷಾರ್‌ʼʼ ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ನೆಟಿಜನ್‌ಗಳ ಪ್ರತಿಕ್ರಿಯೆ
ಹಲವಾರು ಬಳಕೆದಾರರು ಉರ್ಫಿಯ ವೀಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಕೆಲವರು ಉರ್ಫಿಗೆ ಸಪೋರ್ಟ್‌ ಮಾಡಿದರೆ ಇತರರು ಅಸಭ್ಯವಾಗಿ ವರ್ತಿಸಿದ್ದಕ್ಕಾಗಿ ದೂಷಿಸಿದ್ದಾರೆ.. ಉರ್ಫಿ ಅವರ ಹೊಸ ವೀಡಿಯೋಗಳಿಗೂ ಹಲವು ಕಮೆಂಟ್‌ಗಳು ಬಂದಿವೆ.ಕೆಲವರು ಜೀನಿಯಸ್ ಅಂದಿದ್ದಾರೆ. ಆದರೆ ಕೆಲವರು ಬಂಡೆಗಲ್ಲು, ಕಲ್ಲುಗಳಿಂದ ಹೊಡೆಯಬೇಕು ಎಂದು ಹೇಳುತ್ತಿದ್ದಾರೆ. 

ಈ ಹಿಂದೆ ನಟ ರಣವೀರ್ ಸಿಂಗ್ ಅವರನ್ನು ಮದುವೆಯಾಗಲು ರೆಡಿ ಎಂದು ಬಹಿರಂಗವಾಗಿ ಹೇಳಿ ಸಾಕಷ್ಟು ಸುದ್ದಿಯಲ್ಲಿದ್ದರು. ತನಗೆ ನಗೆ ರೇಪ್ ಹಾಗೂ ಜೀವ ಬೆದರಿಕೆ ಬಂದಿದೆ ಎಂದು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.

ಇದನ್ನೂ ಓದಿ | ರಣವೀರ್‌ ಸಿಂಗ್‌ ನಗ್ನ ಚಿತ್ರ ವಿವಾದ : ಟ್ವಿಟರ್‌ನಲ್ಲಿ ಬಟ್ಟೆ ದಾನ ಅಭಿಯಾನ, RGV ಟ್ವೀಟ್‌ನಲ್ಲಿ ಹೇಳಿದ್ದೇನು?

Exit mobile version