Site icon Vistara News

Anil Kapoor: ಅನಿಲ್‌ ಕಪೂರ್‌ರನ್ನು ಭೇಟಿಯಾದ ಖ್ಯಾತ ನಿರ್ದೇಶಕ, ಹೊಸ ಸಿನಿಮಾ ಘೋಷಣೆ?

Anil Kapoor director Shankar

ಬೆಂಗಳೂರು:ಗೇಮ್ ಚೇಂಜರ್‘ ಹಾಗೂ ‘ಇಂಡಿಯನ್ 2’ ಸಿನಿಮಾಗಳ ನಿರ್ದೇಶಕ ಶಂಕರ್ (S shankar) ಮುಂಬೈನಲ್ಲಿ ಬಾಲಿವುಡ್ ನಟ ಅನಿಲ್ ಕಪೂರ್ (Anil Kapoor) ಅವರನ್ನು ಭೇಟಿಯಾಗಿದ್ದಾರೆ. ಶಂಕರ್‌ ಅವರು ಅನಿಲ್‌ ಕಪೂರ್‌ ಅವರನ್ನು ಭೇಟಿಯಾಗಿದ್ದು ಇದು ಎರಡನೇ ಬಾರಿ. ಇವರಿಬ್ಬರ ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ʻನಾಯಕ್ 2ʼ (Nayak 2) ಚಿತ್ರಕ್ಕೆ ಸಂಬಂಧಿಸಿದಂತೆ ಕೆಲವು ಅಪ್‌ಡೇಟ್‌ಗಳು ಬರಲಿವೆ ಎಂಬ ಚರ್ಚೆ ಶುರುವಾಗಿದೆ.

ʻನಾಯಕ್ʼ ಚಿತ್ರದ ಸೀಕ್ವೆಲ್‌ನಲ್ಲಿ ಕರೀನಾ ಕಾಣಿಸಿಕೊಳ್ಳಲಿದ್ದಾರೆ. ಇದೀಗ ʻನಾಯಕ್ʼ ನಿರ್ದೇಶಕ ಶಂಕರ್ ಅವರು ಮುಂಬೈನಲ್ಲಿ ಅನಿಲ್ ಕಪೂರ್‌ ಅವರನ್ನು ಭೇಟಿಯಾದರು. ಚಿತ್ರದ ಸ್ಕ್ರಿಪ್ಟ್ ಬಗ್ಗೆ ಚರ್ಚಸಿಲು ಶಂಕರ್ ಅವರು ಅನಿಲ್ ಕಪೂರ್ ಅವರನ್ನು ಭೇಟಿ ಮಾಡಿದ್ದಾರೆ ಎಂದು ವರದಿಯಾಗಿದೆ.

ಶಂಕರ್ ಹಾಗೂ ಅನಿಲ್ ಕಪೂರ್ ಇಬ್ಬರಿಗೆ ಇದೇನು ಹೊಸ ಪರಿಚಯವೇನೂ ಅಲ್ಲ. 23 ವರ್ಷಗಳ ಹಿಂದೆ ಶಂಕರ್ ನಿರ್ದೇಶಿಸಿದ ‘ನಾಯಕ್’ ಸಿನಿಮಾದಲ್ಲಿ ಅನಿಲ್ ಕಪೂರ್‌ ನಟಿಸಿದ್ದರು. ಇದು ಶಂಕರ್ ಅವರೇ ನಿರ್ದೇಶಿಸಿದ್ದ 1999ರಲ್ಲಿ ತೆರೆ ಕಂಡಿದ್ದ ‘ಮೊದಲ್‌ವನ್’ ಸಿನಿಮಾ ರಿಮೇಕ್ ಇದಾಗಿತ್ತು. ಈ ಚಿತ್ರದ ಹಿಂದಿ ಆವೃತ್ತಿಯಲ್ಲಿ ಅನಿಲ್ ಕಪೂರ್, ರಾಣಿ ಮುಖರ್ಜಿ, ಅಮರೀಶ್ ಪುರಿ, ಪರೇಶ್ ರಾವಲ್, ಸೌರಭ್ ಶುಕ್ಲಾ ಮತ್ತು ಜಾನಿ ಲೀವರ್ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದರು.

‘ನಾಯಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ಜತೆ ಖಳನಾಯಕನಾಗಿ ಅಮರೀಶ್ ಪುರಿ ನಟಿಸಿದ್ದರು.ಆದರೆ, ಬಾಕ್ಸಾಫೀಸ್‌ನಲ್ಲಿ ಅಂದುಕೊಂಡಷ್ಟು ಗಳಿಕೆ ಕಂಡಿರಲಿಲ್ಲ. ಶಂಕರ್‌ ಈಗಾಗಲೇ ‘2.0’, ‘ಇಂಡಿಯನ್ 2’ ನಿರ್ದೇಶನ ಮಾಡಿದ್ದು, ‘ನಾಯಕ್’ ಕೂಡ ಸೀಕ್ವೆಲ್ ಆದರೂ ಆಗಬಹುದು.

ಇದನ್ನೂ ಓದಿ: Kamal Haasan: ಇಂಡಿಯನ್ 2 ಚಿತ್ರೀಕರಣಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ಕಮಲ್‌ ಹಾಸನ್‌: ವಿಡಿಯೊ ವೈರಲ್‌!

ಇಂಡಿಯನ್ 2

ಈ ಸಿನಿಮಾದಲ್ಲಿ ಕಮಲ್ ಹಾಸನ್ ದ್ವಿಪಾತ್ರಗಳಲ್ಲಿ ನಟಿಸಲಿದ್ದಾರೆ ಎಂಬುದಾಗಿಯೂ ವರದಿಯಾಗಿದೆ. ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಮತ್ತು ರಾಕುಲ್ ಪ್ರೀತ್ ಸಿಂಗ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿದ್ಧಾರ್ಥ್ ಇಂಡಿಯನ್ 2 ಸಿನಿಮಾದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವರದಿ ಪ್ರಕಾರ, ಅವರು ಕಮಲ್ ಹಾಸನ್ ಪಾತ್ರದಲ್ಲಿ ಮೊಮ್ಮಗನಾಗಿ ಕಾಣಿಸಿಕೊಳ್ಳಲಿದ್ದಾರೆ. 2003ರಲ್ಲಿ ತಮಿಳು ಚಲನಚಿತ್ರ ಬಾಯ್ಸ್‌ ಸಿನಿಮಾದಲ್ಲಿ ಸಿದ್ಧಾರ್ಥ್‌ ನಟಿಸಿದ್ದರು. ವಿಶೇಷ ಅಂದರೆ ಈ ಸಿನಿಮಾ ನಿರ್ದೇಶಿಸಿದ್ದು ಶಂಕರ್. ಇದೀಗ ಎರಡನೇ ಬಾರಿಗೆ ಶಂಕರ್‌ ಹಾಗೂ ಸಿದ್ಧಾರ್ಥ್‌ ಒಟ್ಟಿಗೆ ಕೆಲಸ ಮಾಡುವಂತಾಗಿದೆ.

ಗೇಮ್ ಚೇಂಜರ್

ಶಂಕರ್ ನಿರ್ದೇಶನದ ಈ ಚಿತ್ರದಲ್ಲಿ ಕಿಯಾರಾ ಆಡ್ವಾಣಿ ನಾಯಕಿಯಾಗಿ ಮಿಂಚಲಿದ್ದಾರೆ. ಈ ಚಿತ್ರ ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಅತಿ ದೊಡ್ಡ ಬಜೆಟ್‌ ಸಿನಿಮಾವಾಗಿರಲಿದೆ ಎಂದು ಹೇಳಲಾಗುತ್ತಿದೆ. ರಾಮ್ ಚರಣ್ ಅವರ ‘ಗೇಮ್ ಚೇಂಜರ್’ ಈ ವರ್ಷದ ಆರಂಭದಲ್ಲಿ ಘೋಷಣೆಯಾದಾಗಿನಿಂದ ಗಮನ ಸೆಳೆಯುತ್ತಿದೆ. ಗೇಮ್ ಚೇಂಜರ್‌ಗಾಗಿ ನಿರ್ದೇಶಕ ಎಸ್‌ ಶಂಕರ್ ಚಿತ್ರದ ಹಾಡುಗಳಿಗೆ 90 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಎಸ್ ಥಮನ್ ಈ ಚಿತ್ರದ ಐದು ಹಾಡುಗಳನ್ನು ಸಂಯೋಜಿಸಿದ್ದಾರೆ. ಈ ಹಿಂದೆ ‘ವಿನಯಾ ವಿಧೇಯ ರಾಮ’ ಸಿನಿಮಾದಲ್ಲಿ ಚರಣ್-ಕಿಯಾರಾ ಜೋಡಿಯಾಗಿ ನಟಿಸಿದ್ದರು. ಇದೀಗ ಗೇಮ್ ಚೇಂಜರ್‌ಗಾಗಿ ಮತ್ತೆ ಜತೆಯಾಗಿ ಕಾಣಿಸಿಕೊಂಡಿದ್ದಾರೆ.

Exit mobile version