Site icon Vistara News

Anil Kapoor: ಇಪ್ಪತ್ನಾಲ್ಕು ವರ್ಷಗಳ ಬಳಿಕ ಒಂದಾದ ಅನಿಲ್ ಕಪೂರ್ -ಕಾಜೋಲ್; ವಿಡಿಯೊ ವೈರಲ್‌!

Kajol and Anil Kapoor

ಬೆಂಗಳೂರು: ಇಪ್ಪತ್ನಾಲ್ಕು ವರ್ಷಗಳ ಹಿಂದೆ, ದಿವಂಗತ ಸತೀಶ್ ಕೌಶಿಕ್ ನಿರ್ದೇಶನದ `ಹಮ್ ಆಪ್ಕೆ ದಿಲ್ ಮೇ ರೆಹತೆ ಹೇʼನಲ್ಲಿ ಕಾಜೋಲ್ ಮತ್ತು ಅನಿಲ್ ಕಪೂರ್ (Anil Kapoor) ಒಟ್ಟಿಗೆ ತೆರೆಯಲ್ಲಿ ಮಿಂಚಿದ್ದರು. ಈಗ ಇಷ್ಟು ವರ್ಷಗಳ ನಂತರ ಇಬ್ಬರು ಸ್ಟಾರ್‌ಗಳು ಮತ್ತೆ ಒಂದಾಗಿದ್ದಾರೆ. ಆದರೆ ಸಿನಿಮಾ ಅಥವಾ ಶೋಗಾಗಿ ಅಲ್ಲ, ತಮ್ಮ ವೆಬ್‌ ಸಿರೀಸ್‌ ಪ್ರಚಾರದ ಸಲುವಾಗಿ. ಇಬ್ಬರ ವೆಬ್‌ ಸಿರೀಸ್‌ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ಪ್ರಸಾರ ಕಾಣಲಿದೆ. ಈ ಮೂಲಕ ತಾರೆಗಳ ಸಂಭಾಷಣೆಯ ಕ್ಲಿಪ್ಸ್‌ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ ಶೇರ್‌ ಮಾಡಿಕೊಂಡಿದೆ.

ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್ ಮತ್ತು ಶೋಭಿತಾ ಧೂಳಿಪಾಲ ಅಭಿನಯದ ʻದಿ ನೈಟ್ ಮ್ಯಾನೇಜರ್‌ 2ʼ ಸಿರೀಸ್‌ ಪ್ರಸಾರ ಈಗಾಗಲೇ ಕಾಣುತ್ತಿದೆ. ಇದೆ ಮೊದಲ ಬಾರಿ ವೆನ್‌ ಸಿರೀಸ್‌ನಲ್ಲಿ ಕಾಕೋಲ್‌ ನಟಿಸುತ್ತಿದ್ದು ವಕೀಲೆ ಪಾತ್ರದಲ್ಲಿ ಕಾಜೋಲ್ ಅವರು ಸುಪರ್ಣ್ ವರರ್ಮಾರಾಗಿ ʻದಿ ಟ್ರಯಲ್ʼ ಸಿರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿ ನೈಟ್ ಮ್ಯಾನೇಜರ್‌ ಈಗಾಗಲೇ ಸ್ಟ್ರೀಮಿಂಗ್‌ ಆಗುತ್ತಿದ್ದು, ಜುಲೈ 14 ರಂದು ಕಾಜೋಲ್‌ ಅಭಿನಯದ ದಿ ಟ್ರಯಲ್ ಸ್ಟ್ರೀಮಿಂಗ್‌ ಆಗುತ್ತಿದೆ. ಹಾಟ್‌ಸ್ಟಾರ್ ಪೋಸ್ಟ್ ಮಾಡಿದ ಹೊಸ ಪ್ರಚಾರದ ವಿಡಿಯೊದಲ್ಲಿ, ಕಾಜೋಲ್ ಅವರು ನಟ ಅನಿಲ್ ಕಪೂರ್‌ಗೆ ಫೋನ್‌ನಲ್ಲಿ ಕರೆ ಮಾಡಿ, ತಮ್ಮ ಸಿರೀಸ್‌ ಬಗ್ಗೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Anil Kapoor : ಅನಿಲ್‌ ಕಪೂರ್‌ ಸಿನಿ ಪಯಣಕ್ಕೆ 40 ವರ್ಷ: ಸಂತಸದಿಂದ ಪೋಸ್ಟ್‌ ಹಂಚಿಕೊಂಡ ನಟ

ಆದಿತ್ಯ ರಾಯ್ ಕಪೂರ್, ಅನಿಲ್ ಕಪೂರ್ ಮತ್ತು ಶೋಭಿತಾ ಧೂಳಿಪಾಲ ಅಭಿನಯದ ದಿ ನೈಟ್ ಮ್ಯಾನೇಜರ್‌ನಲ್ಲಿ ನೌಕಾಪಡೆಯ ಮಾಜಿ ಅಧಿಕಾರಿ ಶಾನ್ ಸೇನ್​ ಗುಪ್ತಾ ಅವರ ಸುತ್ತ ಕಥೆ ಸುತ್ತುತ್ತದೆ. ವರದಿಗಳ ಪ್ರಕಾರ, ಕಾಜೋಲ್ ಮುಖ್ಯ ಪಾತ್ರದಲ್ಲಿ ನಟಿಸಿರುವ ‘ದಿ ಟ್ರಯಲ್’ ಅಮೆರಿಕದ ಜನಪ್ರಿಯ ಕಾನೂನು ಮತ್ತು ರಾಜಕೀಯ ಡ್ರಾಮ ಭಾರತೀಯ ರೂಪಾಂತರವಾಗಿದೆ. ಈ ಒರಿಜಿನಲ್ ವೆಬ್ ಸಿರೀಸ್ 2009 ರಿಂದ 2016 ರವರೆಗೆ 7 ಸೀಸನ್ ಗಳವರೆಗೆ ನಡೆಯಿತು. ಜೂಲಿಯಾನಾ ಮಾರ್ಗುಲಿಸ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು.

Exit mobile version