Site icon Vistara News

Salman Khan: ʻಸಲ್ಮಾನ್ ಖಾನ್ʼ ಜತೆ ಸಿನಿಮಾ ಮಾಡಲಿದ್ದಾರಾ ʼಅನಿಮಲ್‌ʼ ನಿರ್ದೇಶಕ?

Animal Director Sandeep Reddy Vanga film With Salman Khan

ಬೆಂಗಳೂರು: ರಣಬೀರ್ ಕಪೂರ್ (Ranbir Kapoor) ಮುಖ್ಯ ಭೂಮಿಕೆಯಲ್ಲಿ ನಟಿಸಿರುವ (Animal OTT Release) ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ʼಅನಿಮಲ್‌ʼ ಚಿತ್ರ ಯಶಸ್ಸನ್ನು ಕಂಡಿದೆ. ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ ಮುಂಬರುವ ಡಾರ್ಕ್ ಆ್ಯಕ್ಷನ್ ಕ್ರೈಮ್ ಥ್ರಿಲ್ಲರ್‌ಗಾಗಿ ಸಲ್ಮಾನ್ ಖಾನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆಂದು ವರದಿಯಾಗಿದೆ. ಮಾತ್ರವಲ್ಲ ತಮ್ಮ ಇತರ ಪ್ರಾಜೆಕ್ಟ್‌ಗಳಿಗಾಗಿ ಅಲ್ಲು ಅರ್ಜುನ್ ಮತ್ತು ಪ್ರಭಾಸ್ ಜತೆ ಕೈಜೋಡಿಸುತ್ತಿದ್ದಾರೆ ಎಂದೂ ವರದಿಯಾಗಿದೆ. ಚಿರಂಜೀವಿ ಮತ್ತು ಶಾರುಖ್ ಖಾನ್ ಅವರಂತಹ ದೊಡ್ಡ ಸ್ಟಾರ್‌ಗಳ ಜತೆ ಕೆಲಸ ಮಾಡುವ ಬಯಕೆಯನ್ನು ಸಂದೀಪ್‌ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ʻಅರ್ಜುನ್ ರೆಡ್ಡಿʼ ಮತ್ತು ʻಕಬೀರ್ ಸಿಂಗ್ʼ, ʻಅನಿಮಲ್‌ʼ ಹೀಗೆ ಹಿಟ್‌ ಸಿನಿಮಾಗಳನ್ನು ನೀಡಿದ್ದವರು ಸಂದೀಪ್ ರೆಡ್ಡಿ ವಂಗಾ. ರಣಬೀರ್ ಕಪೂರ್ ಅಭಿನಯದ ʻಅನಿಮಲ್ʼ ಚಿತ್ರ ಬಿಡುಗಡೆಯಾದಾಗಿನಿಂದ ಹಲವಾರು ಕಾರಣಗಳಿಗಾಗಿ ಸುದ್ದಿ ಮಾಡುತ್ತಲೇ ಇದೆ. ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್‌ ನೀಡಿದ್ದರೂ ಸಹ ಕೆಲವರು ಸಿನಿಮಾ ದೃಶ್ಯಗಳ ಬಗ್ಗೆ ಆರೋಪ ಮಾಡಿದ್ದೂ ಇದೆ.

ಇತ್ತೀಚಿನ ಸಂದರ್ಶನವೊಂದರಲ್ಲಿ, ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ತಮ್ಮ ಸಿನಿಮಾಗಳ ಬಗ್ಗೆ ಮಾತನಾಡುವ ವಿಮರ್ಶಕರ ಬಗ್ಗೆ ತೆರೆದಿಟ್ಟಿದ್ದರು. ಸಂದೀಪ್ ರೆಡ್ಡಿ ವಂಗಾ ಮಾತನಾಡಿ “ನನ್ನ ಚಿತ್ರವನ್ನು ಟೀಕಿಸುವ ಮೂಲಕ ನೀವು ಹಣ, ಖ್ಯಾತಿ, ಹೆಸರು ಎಲ್ಲವನ್ನೂ ಮಾಡುತ್ತಿದ್ದೀರಿ. ʻಕಬೀರ್ ಸಿಂಗ್ʼ ಸಮಯದಲ್ಲಿ ಹೀಗೆ ಆಗಿತ್ತು. ಯಾವೊಬ್ಬ ವಿಮರ್ಶಕನು ಕ್ರಾಫ್ಟ್, ಎಡಿಟಿಂಗ್, ಧ್ವನಿ ವಿನ್ಯಾಸದ ಬಗ್ಗೆ ಮಾತನಾಡುವುದಿಲ್ಲ, ಏಕೆಂದರೆ ಅವರು ಈ ಬಗ್ಗೆ ಅನಕ್ಷರಸ್ಥರು.ಸಿನಿಮಾ ವಿಚಾರಕ್ಕೆ ಬಂದಾಗ ಅವರು ಅವಿದ್ಯಾವಂತರು. ಸಿನಿಮಾಗಳನ್ನು ಹೇಗೆ ಟೀಕಿಸಬೇಕು ಅಥವಾ ಚಲನಚಿತ್ರವನ್ನು ಹೇಗೆ ವಿಮರ್ಶಿಸಬೇಕುಎಂಬ ಪ್ರಜ್ಞೆಯು ಅವರಿಗೆ ಇರುವುದಿಲ್ಲʼʼಎಂದು ಖಾರವಾಗಿಯೇ ಹೇಳಿದ್ದರು.

ಇದನ್ನೂ ಓದಿ: Salman Khan : ತಮ್ಮ ಅರ್ಬಾಜ್ ರಿಂದ ದೂರವಾದ ಮಲೈಕಾಗೆ ಕ್ರಿಸ್ಮಸ್​ ಗಿಫ್ಟ್​ ಕಳುಹಿಸಿದ ಸಲ್ಮಾನ್​ ಖಾನ್​

ಇನ್ನು ಅನಿಮಲ್‌ ಸಿನಿಮಾ ʼ 3 ಗಂಟೆ 21 ನಿಮಿಷಗಳ ಅವಧಿಯ ಚಲನಚಿತ್ರವಾಗಿದೆ. ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿ ಬಂದಿದೆ.ʼಅನಿಮಲ್‌’ ಚಿತ್ರ 3 ಗಂಟೆ 21 ನಿಮಿಷಗಳಷ್ಟು ದೀರ್ಘವಾಗಿದೆ. ಅಲ್ಲದೆ ಹಿಂಸಾತ್ಮಕ, ಬೋಲ್ಡ್‌ ದೃಶ್ಯಗಳಿಂದಾಗಿ ಎ ಸರ್ಟಿಫಿಕೇಟ್ ಪಡೆದುಕೊಂಡಿದೆ. ಇವುಗಳ ಹೊರತಾಗಿಯೂ ಚಿತ್ರವು ಭರ್ಜರಿ ಯಶಸ್ಸು ದಾಖಲಿಸಿದ್ದು, ರಣಬೀರ್‌ ಕಪೂರ್‌ ವೃತ್ತಿ ಜೀವನದಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿ ಹೊರ ಹೊಮ್ಮಿದೆ. ಈ ಹಿಂದೆ ʼಸಂಜುʼ ರಣಬೀರ್‌ ಕಪೂರ್‌ ನಟನೆಯ ಅತೀ ಹೆಚ್ಚು ಕಲೆಕ್ಷನ್‌ ಮಾಡಿದ ಚಿತ್ರವಾಗಿತ್ತು.

ಮುಂದೆ, ಸಲ್ಮಾನ್ ಖಾನ್ ಶೀಘ್ರದಲ್ಲೇ ಕರಣ್ ಜೋಹರ್ ಅವರೊಂದಿಗೆ ವಿಷ್ಣುವರ್ಧನ್ ನಿರ್ದೇಶನದ ಹೈ-ಬಜೆಟ್ ಆ್ಯಕ್ಷನ್ ಚಿತ್ರಕ್ಕಾಗಿ ಕೈ ಜೋಡಿಸಲಿದ್ದಾರೆ.

Exit mobile version