Site icon Vistara News

Animal Pre-Teaser: ಅನಿಮಲ್‌ ಪ್ರಿ-ಟೀಸರ್ ಔಟ್‌; ರಗಡ್‌ ಲುಕ್‌ನಲ್ಲಿ ರಣಬೀರ್‌ ಕಪೂರ್‌!

Animal Pre-Teaser Out Animal is scheduled to release on August 11

Animal Pre-Teaser Out Animal is scheduled to release on August 11

ಬೆಂಗಳೂರು: ನಟ ರಣಬೀರ್‌ ಕಪೂರ್‌ (Ranbir Kapoor) ಅವರ ಬಹು ನಿರೀಕ್ಷಿತ ಚಿತ್ರ ಅನಿಮಲ್‌ ಸಿನಿಮಾ ಪ್ರಿ-ಟೀಸರ್ (Animal Pre-Teaser) ಬಿಡುಗಡೆಗೊಂಡಿದೆ. ʻಅರ್ಜುನ್​ ರೆಡ್ಡಿ’ ಸಿನಿಮಾ ಖ್ಯಾತಿಯ ಸಂದೀಪ್​ ರೆಡ್ಡಿ ವಾಂಗ ಅವರು ‘ಅನಿಮಲ್​’ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಿ-ಟೀಸರ್‌ನಲ್ಲಿ ರಣಬೀರ್‌ ರಗಡ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಳಿ ಕುರ್ತಿ ಮತ್ತು ಲುಂಗಿಯಲ್ಲಿ ರಣಬೀರ್ ಕಪೂರ್ ಕಂಡಿದ್ದಾರೆ.

‘ಅನಿಮಲ್​’ ಸಿನಿಮಾದಲ್ಲಿ ರಣಬೀರ್ ಕಪೂರ್​ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ .ಆಗಸ್ಟ್​ 11ರಂದು ‘ಅನಿಮಲ್​’ ಸಿನಿಮಾ ತೆರೆಕಾಣಲಿದೆ. ಅದಕ್ಕೆ ಇನ್ನು 2 ಎರಡು ತಿಂಗಳು ಬಾಕಿ ಇದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇದೇ ಸಮಯದಲ್ಲಿ ಅಕ್ಷಯ್​ ಕುಮಾರ್​ ನಟನೆಯ ‘ಓಹ್​ ಮೈ ಗಾಡ್​ 2’, ಸನ್ನಿ ಡಿಯೋಲ್​ ಅಭಿನಯದ ‘ಗದರ್​ 2’ ಕೂಡ ಆಗಸ್ಟ್​ 11ರಂದು ತೆರೆಕಾಣಲಿದೆ. ಹಾಗಾಗಿ ಪೈಪೋಟಿ ತುಂಬ ಜೋರಾಗಿದೆ.

ಕೆಲವು ದಿನಗಳ ಹಿಂದೆ, ಬಾಲಿವುಡ್ ಟ್ರೇಡ್ ವಿಶ್ಲೇಷಕ ತರಣ್ ಆದರ್ಶ್ ಅವರು ಅನಿಮಲ್ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು ಎಂಬುದರ ಬಗ್ಗೆ ಸ್ಪಷ್ಟನೆ ನೀಡಿದ್ದರು. ನಟಿ ರಶ್ಮಿಕಾ ಮಂದಣ್ಣ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ರಶ್ಮಿಕಾಗೆ ಹಿಂದಿ ಚಿತ್ರರಂಗದಲ್ಲಿ ಸಖತ್​ ಡಿಮ್ಯಾಂಡ್​ ಸೃಷ್ಟಿ ಆಗಿದೆ. ಅವರ ಮೊದಲ ಬಾಲಿವುಡ್​ ಸಿನಿಮಾ ‘ಗುಡ್​ ಬೈ’ ನಿರೀಕ್ಷಿತ ಮಟ್ಟದಲ್ಲಿ ಗಳಿಕೆ ಮಾಡಲಿಲ್ಲ. ಎರಡನೇ ಸಿನಿಮಾ ‘ಮಿಷನ್​ ಮಜ್ನು’ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತು.

ಇದನ್ನೂ ಓದಿ: Cow Hug Day: ಪ್ರೇಮಿಗಳ ದಿನದಂದು ‘ಗೋವುಗಳನ್ನು ಅಪ್ಪುವ ದಿನ’ ಆಚರಿಸಿ, ಅನಿಮಲ್‌ ವೆಲ್‌ಫೇರ್‌ ಬೋರ್ಡ್‌ ನೋಟಿಸ್

ಚಿತ್ರದಲ್ಲಿ ಬಾಬಿ ಡಿಯೋಲ್, ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಮಿಂಚಲಿದ್ದಾರೆ. ತಮಿಳು, ಮಲಯಾಳಂ, ತೆಲುಗು ಮತ್ತು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಚಿತ್ರೀಕರಣ ಪ್ರಾರಂಭಗೊಂಡಿತ್ತು. ಮುರಾದ್ ಖೇತಾನಿಯ ಸಿನಿ 1 ಸ್ಟುಡಿಯೋಸ್ ಮತ್ತು ಪ್ರಣಯ್ ರೆಡ್ಡಿ ವಂಗಾ ಅವರ ಭದ್ರಕಾಳಿ ಪಿಕ್ಚರ್ಸ್‌ ನಿರ್ಮಿಸಿದೆ.

Exit mobile version