Site icon Vistara News

Anirudh Jatkar : chef ಚಿದಂಬರ ಚಿತ್ರದ ಡಬ್ಬಿಂಗ್‌ ಶುರು; ಊಟ ಬಡಿಸಲು ರೆಡಿ ಆದ ಬಾಣಸಿಗ ಅನಿರುದ್ಧ!

chef chidambara dubbing

ಬೆಂಗಳೂರು: ಕೇವಲ 29 ದಿನಗಳಲ್ಲೇ ಶೂಟಿಂಗ್‌ ಮುಗಿಸಿ ಸುದ್ದಿಯಲ್ಲಿದ್ದ ನಟ ಅನಿರುದ್ಧ (Anirudh Jatkar) ಅಭಿನಯದ chef ಚಿದಂಬರ ಚಿತ್ರದ ಡಬ್ಬಿಂಗ್‌ ಕಾರ್ಯ ಶುರುವಾಗಿದೆ. ಆನಂದ್‌ ರಾಜ್‌ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರಕ್ಕೆ ಅನಿರುದ್ಧ ಅವರು ನಾಯಕರಾಗಿ ಅಭಿನಯಿಸಿದ್ದಾರೆ. ಅವರು ಬಾಣಸಿಗ ಪಾತ್ರದಲ್ಲಿ ಮಿಂಚುತ್ತಿದ್ದು, ಈಗ ಡಬ್ಬಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.

ಲೂಪ್ ಸ್ಟುಡಿಯೋದಲ್ಲಿ ಚಿತ್ರದ ಡಬ್ಬಿಂಗ್‌ ಕಾರ್ಯ ನಡೆಯುತ್ತಿದ್ದು, ಅನಿರುದ್ಧ ತಮ್ಮ ಪಾಲಿನ ಮಾತಿನ ಜೋಡಣೆಯಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.

ಅನಿರುದ್ಧ ಇಲ್ಲಿ ಬಾಣಸಿಗ

ಇದೊಂದು ಡಾರ್ಕ್ ಕಾಮಿಡಿ ಜಾನರ್ ಚಿತ್ರವಾಗಿದೆ. ಅನಿರುದ್ಧ ಅವರು ಶೆಫ್ (ಬಾಣಸಿಗ) ಪಾತ್ರದಲ್ಲಿ ನಟಿಸಿದ್ದಾರೆ. ಇವರಿಗೆ ಜತೆಯಾಗಿ ನಿಧಿ ಸುಬ್ಬಯ್ಯ ಹಾಗೂ ಲವ್ ಮಾಕ್ಟೇಲ್ ಖ್ಯಾತಿಯ ರೆಚೆಲ್ ಡೇವಿಡ್‌ ಕಾಣಿಸಿಕೊಂಡಿದ್ದಾರೆ. ಐದು ವರ್ಷಗಳ ನಂತರ ಅನಿರುದ್ಧ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ಅವರು ಸಿನಿಮಾ ಹಾಗೂ ತಮ್ಮ ಪಾತ್ರದ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದರು. ನಾನು ಅಡುಗೆ ಮನೆ ಕಡೆಗೆ ಎಂದೂ ಹೋದವನಲ್ಲ. ಆದರೆ, ಈ ಚಿತ್ರದಲ್ಲಿ ನನ್ನ ಪಾತ್ರ ಬಾಣಸಿಗವಾಗಿದ್ದರಿಂದ ನನಗೆ ಕಲಿಯುವುದು ಅನಿವಾರ್ಯವಾಯಿತು. ಈ ಕಾರಣಕ್ಕಾಗಿ ನಾನು ತರಬೇತಿಯನ್ನು ಸಹ ಪಡೆದುಕೊಂಡಿದ್ದೇನೆ. ನನ್ನ ಎಲ್ಲ ಶ್ರಮ ಹಾಕಿ ನಟಿಸಿದ್ದೇನೆ. ಚಿತ್ರ ತಂಡ ಸಹ ಉತ್ತಮ ಸ್ಪಂದನೆ ನೀಡಿದೆ. ಚಿತ್ರವೂ ಅತ್ಯುತ್ತಮವಾಗಿ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಇವರ ಜತೆಗೆ ಶರತ್ ಲೋಹಿತಾಶ್ವ, ಕೆ.ಎಸ್ ಶ್ರೀಧರ್‌, ಶಿವಮಣಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ದಮ್ತಿ ಪಿಕ್ಚರ್ಸ್ ಬ್ಯಾನರ್‌ ಅಡಿ ನಿರ್ಮಾಣ

chef ಚಿದಂಬರ ಸಿನಿಮಾವನ್ನು ಬೆಂಗಳೂರು, ಮಂಗಳೂರು, ತುಮಕೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ದಮ್ತಿ ಪಿಕ್ಚರ್ಸ್ ಬ್ಯಾನರ್‌ ಅಡಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ರೂಪ ಡಿ.ಎನ್. ನಿರ್ಮಾಪಕರಾಗಿದ್ದಾರೆ.

chef ಚಿದಂಬರ ಸಿನಿಮಾದ ಶೂಟಿಂಗ್‌ ವಿಡಿಯೊ ಹಂಚಿಕೊಂಡಿರುವ ಅನಿರುದ್ಧ

ಇದನ್ನೂ ಓದಿ: BBK Season 10 : 9 ಮಂದಿ ನಾಮಿನೇಟ್‌, ಮನೆಗೆ ಹೋಗ್ತಾರಾ ವಿನಯ್‌ ಗೌಡ?

ಟೀಂ ಚೆಫ್‌ ಚಿದಂಬರ

ರಾಘು ಚಿತ್ರ ಖ್ಯಾತಿಯ ನಿರ್ದೇಶಕ ಎಂ. ಆನಂದರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರೇ ಕಥೆ ಬರೆದಿದ್ದಾರೆ. ಗಣೇಶ್ ಪರಶುರಾಮ್ ಅವರ ಚಿತ್ರಕಥೆ ಹಾಗೂ ಸಂಭಾಷಣೆ ಇದೆ. ಉದಯಲೀಲ ಛಾಯಾಗ್ರಹಣವಿದ್ದರೆ, ರಿತ್ವಿಕ್ ಮುರಳಿಧರ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ವಿಜೇತ್ ಚಂದ್ರ ಸಂಕಲನ, ವಿಕ್ರಾಂತ್ ರೋಣ ಖ್ಯಾತಿಯ ಆಶಿಕ್ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಮಾಡಿದ್ದಾರೆ. ನೃತ್ಯ ನಿರ್ದೇಶನವನ್ನು ಮಾಧುರಿ ಪರಶುರಾಮ್ ಮಾಡಿದ್ದಾರೆ.

Exit mobile version