ಬೆಂಗಳೂರು: ಸೈಕೋ, ಕನ್ನೇರಿ, ಬೆಂಗಳೂರು 69 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್ (Anita Bhat) ಅವರ ಸಹೋದರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಈ ಕುರಿತು ನಟಿಯೇ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದಾರೆ. ಇದೀಗ ನಟಿ ಸಹೋದರನ ಅಗಲಿಕೆಯಿಂದಾಗಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಅನಿತಾ ಭಟ್ ಪೋಸ್ಟ್
ʻʻನನ್ನ ಸಹೋದರ ಹೃದಯ ಸ್ತಂಭನದಿಂದ ನಮ್ಮನ್ನು ಅಗಲಿದ್ದಾರೆ. ನಾವು ಅನುಭವಿಸುತ್ತಿರುವ ನೋವನ್ನು ಹೇಳಲು ಯಾವುದೇ ಪದಗಳಿಲ್ಲ. ನಾವು ಒಪ್ಪಿಕೊಳ್ಳಬೇಕಾದ ಕಹಿ ಸತ್ಯವೆಂದರೆ ಅವನು ಮತ್ತೆ ಹಿಂತಿರುಗುವುದಿಲ್ಲ. ಆತನಿಗೆ ಸದ್ಗತಿ ಸಿಗುವಂತೆ ಅನುಗ್ರಹಿಸಿ. ಈಗ ನಿಮ್ಮ ಆಶೀರ್ವಾದ ಬೇಕುʼʼಎಂದು ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ನಟಿ ಸಹೋದರನ ಜತೆ ಇರುವ ಫೋಟೊವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Actor Dhanush: ಹೊಸ ಸಿನಿಮಾ ಅನೌನ್ಸ್ ಮಾಡಿದ ಕಾಲಿವುಡ್ ಸ್ಟಾರ್ ಧನುಷ್!
ಅನಿತಾ ಭಟ್ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜತೆಗೆ ಕನ್ನಡದ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ನಲ್ಲೂ ಕೂಡ ಭಾಗವಹಿಸಿದ್ದರು. ಇದಾದ ಬಳಿಕ ಸೂಪರ್ ಹಿಟ್ ಸಿನಿಮಾ ಟಗರು ಚಿತ್ರದಲ್ಲೂ ಕಾಣಿಸಿಕೊಂಡಿದ್ದರು. ನಟನೆ ಜತೆಗೆ ನಿರ್ಮಾಣವನ್ನೂ ಮಾಡಿರುವ ಇವರು ಈಗಾಗಲೇ ತಮ್ಮದೇ ಅನಿತಾ ಭಟ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಸಮುದ್ರಂ, ‘ಇಂದಿರಾ’ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.