Site icon Vistara News

ರಕ್ಷಿತ್‌ ಶೆಟ್ಟಿ ನಿರ್ಮಾಣದ ಹೊಸ ಸಿನಿಮಾದಲ್ಲಿ ನಮ್ಮನೆ ಯುವರಾಣಿ ಅಂಕಿತಾ ಅಮರ್‌

ಅಂಕಿತಾ ಅಮರ್

ಬೆಂಗಳೂರು: ನಮ್ಮನೆ ಯುವರಾಣಿ ಖ್ಯಾತಿಯ ಅಂಕಿತಾ ಅಮರ್‌ ಕಲರ್ಸ್‌ ಕನ್ನಡ ವಾಹಿನಿಯಲ್ಲಿ  ಪ್ರಸಿದ್ಧಿ ಪಡೆದವರು. ಇದೀಗ ತಮ್ಮ ಹುಟ್ಟು ಹಬ್ಬದ ದಿನದಂದು ಹೊಸ ಸುದ್ದಿಯನ್ನು ನೀಡಿದ್ದಾರೆ ಅಂಕಿತಾ. ರಕ್ಷಿತ್‌ ಶೆಟ್ಟಿ (Rakshit Shetty) ನಿರ್ಮಾಣದ ಹೊಸ ಚಿತ್ರಕ್ಕೆ ಅಂಕಿತಾ ಅಮರ್‌ (Ankitha Amar) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. 

ಸಿನೆಮಾ ಕಾವ್ಯಾತ್ಮಕ ಪ್ರೇಮಕಥೆ ಹೊಂದಿದ್ದು. ಕಥಾಸಂಗಮ ಚಿತ್ರದಲ್ಲಿ ಒಂದು ಕಿರುಚಿತ್ರ ನಿರ್ದೇಶಿಸಿದ್ದ ಪ್ರತಿಭಾವಂತ ಬರಹಗಾರ ಚಂದ್ರಜಿತ್‌ ಬೆಳ್ಳಿಯಪ್ಪ ಈ ಸಿನೆಮಾದ ನಿರ್ದೇಶಕ ಎಂದು ಮೂಲಗಳು ತಿಳಿಸಿವೆ. 

ಇದನ್ನೂ ಓದಿ | Major : ಮೇಜರ್‌ ಸಂದೀಪ್‌ ಉನ್ನಿಕೃಷ್ಣನ್‌ ಜೀವನಾಧಾರಿತ ಸಿನಿಮಾ ಟ್ರೈಲರ್‌ ಔಟ್

ಬಾಲ್ಯದಿಂದಲೂ ಸಂಗೀತ ಮತ್ತು ನೃತ್ಯದಲ್ಲಿ ಆಸಕ್ತಿ ಹೊಂದಿರುವ ಅಂಕಿತಾ ಅಮರ್‌ ಹಾಡು, ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕಿಯಾಗಿ, ತಮ್ಮ ಧ್ವನಿಯಿಂದ ನೂರಾರು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು.

ಮೂಲತಃ ಮೈಸೂರಿನವರಾಗಿರುವ ಅಂಕಿತಾ, ಮಾಸ್ಟರ್ ಡಿಗ್ರಿ ಪಡೆದು ಡಬಲ್ ಗೋಲ್ಡ್‌ ಮೆಡಲ್ ಪಡೆದಿದ್ದಾರೆ. ಮೆಡಿಕಲ್ ಬಯೋಕೆಮಿಸ್ಟ್ರಿ ಓದಿದ್ದಾರೆ. ಆರ್‌ಜೆ ಮಯೂರ ನಿರ್ದೇಶನ ಮಾಡುವ ಸಿನಿಮಾದಲ್ಲೂ ಅಂಕಿತಾ ಗಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಕಿತಾ ಹಲವಾರು ಬೀದಿ ನೃತ್ಯ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು.

ರಕ್ಷಿತ್‌ ಶೆಟ್ಟಿ ನಿರ್ಮಾಣದ ಚಿತ್ರದಲ್ಲಿ ಹೆಸರನ್ನು ಇನ್ನೂ ಪ್ರಕಟಿಸಿಲ್ಲ. ಬದಲಾಗಿ ಕವಿಯತ್ರಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಎಂಬ ಮಾಹಿತಿ ಇದೆ.

ʼಅಬ ಜಬ ದಬʼ ಚಿತ್ರದ ಮೂಲಕ ಸಿನಿಮಾ ಎಂಟ್ರಿ ಕೊಟ್ಟ ಇವರು ನಟ ಪೃಥ್ವಿ ಅಂಬಾರ್‌ ಜೊತೆ ನಾಯಕಿ ಆಗಿ ನಟಿಸಲಿದ್ದಾರೆ. ಸುಧಾರಾಣಿ, ಅಚ್ಯುತ್ ಕುಮಾರ್, ಪಿಡಿ ಸತೀಶ್ ಚಂದ್ರ, ಮಹಾಂತೇಶ್, ಮುಖ್ಯಮಂತ್ರಿ ಚಂದ್ರು, ಅನಿರುದ್ಧ ಮಹೇಶ್, ನಿಧಿ ಸುಬ್ಬಯ್ಯ, ಮಯೂರ ರಾಘವೇಂದ್ರ, ಅನಂತ ಕೃಷ್ಣ, ಬಿಗ್ ಬಾಸ್ ಖ್ಯಾತಿಯ ರಘು, ಊರ್ವಶಿ, ವಿಶ್ವಕಿರಣ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಇದನ್ನೂ ಓದಿ | Dancing Champion: ʼಚಾಂಪಿಯನ್’ ಪಟ್ಟ  ಪಡೆದವರಿಗೆ ವಿಶೇಷ ಟ್ರೋಫಿ

Exit mobile version