Site icon Vistara News

Ankita Lokhande : ವಿಕ್ಕಿ ಜೈನ್‌ ಜತೆ ಮತ್ತೆ ಮದುವೆಯಾದ ನಟಿ ಅಂಕಿತಾ ಲೋಖಂಡೆ

Ankita Lokhande and vicky jain

ಮುಂಬೈ: ಬಾಲಿವುಡ್‌ ಹಾಗೂ ಹಿಂದಿ ಕಿರುತೆರೆಯಲ್ಲಿ ಮಿಂಚುತ್ತಿರುವ ನಟಿ ಅಂಕಿತಾ ಲೋಖಂಡೆ (Ankita Lokhande) ಅವರು ವಿಕ್ಕಿ ಜೈನ್‌ ಅವರೊಂದಿಗೆ ಇದೀಗ ಮತ್ತೆ ಮದುವೆಯಾಗಿದ್ದಾರೆ. ವಿದೇಶದಲ್ಲಿ ಕ್ರಿಶ್ಚಿಯನ್‌ ಸಂಪ್ರದಾಯದಂತೆ ಮದುವೆಯಾಗಿರುವ ನಟಿ ಮದುವೆಯ ಫೋಟೋ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅವರ ಮದುವೆಯ ಫೋಟೋಗಳು ಎಲ್ಲೆಡೆ ಹರಿದಾಡಿದ್ದು, ಭಾರೀ ವೈರಲ್‌ ಆಗಿವೆ.

ಇದನ್ನೂ ಓದಿ: Viral Video: ಟ್ರಾಫಿಕ್‌ ಸಿಗ್ನಲ್‌ ವೇಳೆ ಬ್ಯಾಗ್‌ಗೆ ಕೈಹಾಕಿ ತಿಂಡಿ ತಿಂದ ಡೆಲಿವರಿ ಬಾಯ್; ಆರ್ಡರ್‌ ಮಾಡಿದವನ ಬಗ್ಗೆ ಮರುಕ
ವಿಡಿಯೊದಲ್ಲಿ ವಿಕ್ಕಿ ಜೈನ್‌ ಅವರು ಮಂಡಿಯೂರಿ ಅಂಕಿತಾ ಅವರಿಗೆ ಹೂವನ್ನು ಕೊಡುತ್ತಾರೆ. ಕೊನೆಗೆ ಎದ್ದು ನಿಂತು ಇಬ್ಬರು ಪರಸ್ಪರ ಮುತ್ತಿಟ್ಟುಕೊಳ್ಳುತ್ತಾರೆ. ಅವರ ಪಕ್ಕದಲ್ಲಿ ಕ್ರಿಶ್ಚಿಯನ್‌ ಪಾದ್ರಿಯೊಬ್ಬರು ನಿಂತಿರುವುದನ್ನು ವಿಡಿಯೊದಲ್ಲಿ ಗಮನಿಸಬಹುದಾಗಿದೆ. ಈ ವಿಡಿಯೊವನ್ನು ಹಂಚಿಕೊಂಡಿರುವ ನಟಿ ವಿಡಿಯೊಗೆ ʼಐ ಗೆಟ್‌ ಟು ಲವ್‌ ಯುʼ ಹಾಡನ್ನು ಸೇರಿಸಿದ್ದಾರೆ. “ನಾವು ಮತ್ತೆ ಮದುವೆಯಾದೆವು” ಎಂದು ವಿಡಿಯೊಕ್ಕೆ ಕ್ಯಾಪ್ಶನ್‌ ಅನ್ನು ಕೊಟ್ಟಿದ್ದಾರೆ. ವಿಡಿಯೊದಲ್ಲಿ ಹಲವಾರು ಫೋಟೋಗಳನ್ನೂ ನಟಿ ಹಂಚಿಕೊಂಡಿದ್ದಾರೆ.


ಹಾಗೆಯೇ ಪತಿಯೊಂದಿಗಿರುವ ಹಲವಾರು ಫೋಟೋಗಳನ್ನು ಹಂಚಿಕೊಂಡಿರುವ ನಟಿ “ನಾನು ನಕ್ಷತ್ರದ ಬಗ್ಗೆ ಅಸೆಯೊಂದನ್ನು ಕಟ್ಟಿಕೊಂಡೆ. ತಿರುಗಿ ನೋಡಿದರೆ ಅಲ್ಲಿ ನೀನಿದ್ದೆ. ಐ ಲವ್‌ ಯು” ಎಂದು ಬರೆದುಕೊಂಡು ಪತಿಯನ್ನು ಅದಕ್ಕೆ ಟ್ಯಾಗ್‌ ಮಾಡಿದ್ದಾರೆ.


ಈ ಮದುವೆಗೆಂದು ಅಂಕಿತಾ ರಚಿತಾ ಖನ್ನಾ ಅವರ ಬ್ರ್ಯಾಂಡ್‌ನ ಶಿಮ್ಮರಿ ಸೀರೆಯನ್ನು ಉಟ್ಟಿದ್ದರು. ಅದೇ ರೀತಿಯ ಮ್ಯಾಚಿಂಗ್‌ ಬ್ಲೌಸ್‌ ಅನ್ನು ತೊಟ್ಟಿದ್ದರು. ಹಾಗೆಯೇ ಅದಕ್ಕೆ ಮ್ಯಾಚ್‌ ಆಗುವ ರೀತಿಯಲ್ಲಿ ದೊಡ್ಡದೊಂದು ನೆಕ್ಲೇಸ್‌ ಅನ್ನು ತೊಟ್ಟಿದ್ದರು. ಅದರ ಹೊರೆತಾಗಿ ನಟಿ ಬೇರಾವುದೇ ಆಭರಣ ತೊಟ್ಟಿರಲಿಲ್ಲ. ಹಾಗೆಯೇ ವಿಕ್ಕಿ ಜೈನ್‌ ಅವರು ಮೋತಿಫ್‌ ಬ್ರ್ಯಾಂಡ್‌ನ ಕಪ್ಪು ಬಣ್ಣದ ಪ್ಯಾಂಟ್‌ ಮತ್ತು ಬಿಳಿ ಶರ್ಟ್‌ ಹಾಗೂ ಅದರ ಮೇಲೆ ಬಿಳಿ ಬಣ್ಣದ ಕೋಟ್‌ ಅನ್ನು ಧರಿಸಿದ್ದರು. ಅದರೊಂದಿಗೆ ಕಪ್ಪು ಬಣ್ಣದ ಬೋ ಟೈ ಅನ್ನೂ ಧರಿಸಿದ್ದರು.


ಅಂಕಿತಾ ಮತ್ತು ವಿಕ್ಕಿ ಜೈನ್‌ ಅವರು 2021ರ ಡಿಸೆಂಬರ್‌ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕುಟುಂಬಸ್ಥರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ ನಟಿ ಆ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. “ಪ್ರೀತಿಗೆ ತಾಳ್ಮೆಯಿದೆ ಆದರೆ ನಮಗಿಲ್ಲ. ಸರ್ಪೈಸ್‌! ನಾವೀಗ ಅಧಿಕೃತವಾಗಿ ಮಿಸ್ಟರ್‌ ಅಂಡ್‌ ಮಿಸಸ್‌” ಎಂದು ಬರೆದುಕೊಂಡಿದ್ದರು.


ಅಂಕಿತಾ ಅವರು ಪವಿತ್ರ ರಿಶ್ತಾ ಧಾರಾವಾಹಿಯಲ್ಲಿ ಅರ್ಚನಾ ಪಾತ್ರದಲ್ಲಿ ನಟಿಸಿ ಮನೆ ಮಾತಾದವರು. ಅದಾದ ನಂತರ ಅವರು ಏಕ್‌ ಥೀ ನಾಯ್ಕಾ ಮತ್ತು ಶಕ್ತಿ- ಅಸ್ತಿತ್ವ ಕೆ ಎಹ್ಸಾಸ್‌ ಕಿ ಧಾರಾವಾಹಿಗಳಲ್ಲಿ ನಟಿಸಿದ್ದರು. ಅಂಕಿತಾ ಅವರು 2019ರಲ್ಲಿ ಕಂಗನಾ ರಣಾವತ್‌ ಅವರ ಮಣಿಕರ್ಣಿಕ: ದಿ ಕ್ವೀನ್‌ ಆಫ್‌ ಜಾನ್ಸಿ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟರು. ಅದಾದ ನಂತರ ಅವರು ಟೈಗರ್‌ ಶಾರ್ಫ್‌ ನಟನೆಯ ಬಾಘಿ 3 ಸಿನಿಮಾದಲ್ಲಿ ಕಾಣಿಸಿಕೊಂಡರು. ಅದಲ್ಲದೆ ಅವರು ಜಲಕ್‌ ದಿಖ್ಲಾ ಜಾ ಮತ್ತು ಕಾಮಿಡಿ ಸರ್ಕಸ್‌ ಶೋಗಳಲ್ಲೂ ಕಾಣಿಸಿಕೊಂಡಿದ್ದರು.

Exit mobile version