Site icon Vistara News

Bigg Boss 17: ಬಿಗ್‌ ಬಾಸ್‌ ಮನೆಯಲ್ಲಿ ಚಪ್ಪಲಿ ಎಸೆತ! ಸ್ಪರ್ಧಿಯ ವಿರುದ್ಧ ಆಕ್ರೋಶ!

Ankita Lokhande Loses Calm Throws Chappal

ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ (Bigg Boss 17) ಮಾಜಿ ಲವರ್, ನಟಿ ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಗಮನ ಸೆಳೆಯುತ್ತಿದ್ದಾರೆ. ಮಾತ್ರವಲ್ಲ ಆಗಾಗ ಈ ಜೋಡಿ ಗಲಾಟೆ ಕೂಡ ಮಾಡಿಕೊಳ್ಳುತ್ತಲೇ ಇರುತ್ತದೆ. ಅಂಕಿತಾ ಅವರು ಇತರ ಮನೆಯ ಸದಸ್ಯರ ಮುಂದೆ ಪತಿ ವಿಕ್ಕಿ ಮೇಲೆ ಚಪ್ಪಲಿ ಬಿಸಾಡಿದ್ದಾರೆ. ವಿಕ್ಕಿ ಅವರ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ಹೊರ ಹಾಕುತ್ತಿದ್ದಾರೆ.

ಸ್ಪರ್ಧಿಗಳಾದ ಮುನಾವರ್ ಫರುಕಿ ಮತ್ತು ಇಶಾ ಮಾಳವಿಯಾ, ವಿಕ್ಕಿ ಮತ್ತು ಇತರರೊಂದಿಗೆ ತಮ್ಮ ಆಹಾರವನ್ನು ಹಂಚಿಕೊಳ್ಳುವ ಚರ್ಚೆ ನಡೆಯುತ್ತಿತ್ತು. ಇದನ್ನು ಇಶಾ ನಿರಾಕರಿಸಿದರು. ಆಗ ಅಂಕಿತಾ ಲೋಖಂಡೆ ಆಗಮಿಸಿ ಇಶಾ ಅವರನ್ನು ಬೆಂಬಲಿಸಿದಾಗ, ಖಂಜಾಡಿ ಅವರು ಸದಸ್ಯರ ಆಹಾರವನ್ನು ತಿನ್ನುವುದನ್ನು ನೋಡಿದೆ ಎಂದು ಹೇಳಿದರು. ಅಂಕಿತಾ ಅವರನ್ನು ದೂರ ತಳ್ಳಲು ಪ್ರಯತ್ನಿಸಿದಾಗ ವಿಕ್ಕಿ ತಮಾಷೆಯಾಗಿ ಅಂಕಿತಾ ಅವರ ಕುತ್ತಿಗೆಯನ್ನು ಹಿಡಿದಿದ್ದಾರೆ. ಕೈಗಳಿಂದ ಬಿಡಿಸಿದ ಅಂಕಿತಾ ವಿಕ್ಕಿ ಹಿಂದೆ ಓಡಿ, ತನ್ನ ಚಪ್ಪಲಿಗಳನ್ನು ತೆಗೆದು ಗಂಡನ ಮೇಲೆ ಎಸೆದರು. ವಿಕ್ಕಿ ಸೇರಿದಂತೆ ಎಲ್ಲರೂ ನಕ್ಕರು.

ವಿಕ್ಕಿ ಜೈನ್ ಅವರು ಸನಾ ರಯೀಸ್ ಖಾನ್ ಅವರ ಕೈಗಳನ್ನು ಹಿಡಿದಿರುವ ದೃಶ್ಯಗಳು ಔಟ್‌ ಆದ ಬಳಿಕ ಅವರ ನಡವಳಿಕೆ ಬಗ್ಗೆ ಜನರು ಕಮೆಂಟ್‌ ಮಾಡಿದ್ದಾರೆ. ಕೆಲವು ವೀಕ್ಷಕರು ವಿಕ್ಕಿಯ ವರ್ತನೆಯು ಅವರ ಪತ್ನಿ ಅಂಕಿತಾಗೆ ಅಗೌರವ ತರುವಂತೆ ಮಾಡಿದೆ. ಅವರು ಇನ್ನೊಬ್ಬ ಮಹಿಳೆಯ ಕೈ ಹಿಡಿಯಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು, “ಇದು ತುಂಬಾ ತಪ್ಪು, ನಾನು ಅಂಕಿತಾ ಬಗ್ಗೆ ವಿಷಾದಿಸುತ್ತೇನೆ” ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Bigg Boss 17: ಬಿಗ್‌ ಬಾಸ್‌ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಸಿಕೊಂಡ ಸುಶಾಂತ್ ಸಿಂಗ್ ರಜಪೂತ್ ಮಾಜಿ ಲವರ್!

ಬಿಗ್‌ ಬಾಸ್‌ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಸಿಕೊಂಡಿದ್ದ ಅಂಕಿತಾ

ಅಂಕಿತಾ ಲೋಖಂಡೆ ಹಾಗೂ ಪತಿ ಇಬ್ಬರೂ ಮನೆಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಮನೆಯಲ್ಲಿ ಒಂಟಿತನ ಕಾಡುತ್ತಿದೆ ಎಂದು ಅಂಕಿತಾ ಆಗಾಗ ಹೇಳುತ್ತಿದ್ದರು. ಹಿಂದಿನ ಸಂಚಿಕೆಯಲ್ಲಿ, ನವೆಂಬರ್ 15ರಂದು ಪ್ರೆಗ್ನೆನ್ಸಿ ಟೆಸ್ಟ್‌ ಕೂಡ ಮಾಡಿಸಿಕೊಂಡಿದ್ದರು. ಈಗ ಅಂಕಿತಾಗೆ ತಾನು ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನುಮಾನ ಮೂಡಿತ್ತು. ನನಗೆ ಪಿರಿಯಡ್ಸ್ ಆಗುತ್ತಿಲ್ಲ ಅಂತ ಈ ಬಗ್ಗೆ ಪತಿ ವಿಕ್ಕಿ ಜೈನ್ ಬಳಿ ಹೇಳಿಕೊಂಡಿದ್ದರು.

ಬಿಗ್ ಬಾಸ್ 17ರ ಹಿಂದಿನ ಸಂಚಿಕೆಯಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಗಾರ್ಡನ್ ಏರಿಯಾದಲ್ಲಿ ಈ ಬಗ್ಗೆ ಮಾತನಾಡಿದ್ದರು. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ʻʻನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ನನಗೆ ಅನಾರೋಗ್ಯ ಆದಂತೆ ಭಾಸ ಆಗುತ್ತಿದೆ. ನನಗೆ ಪಿರಿಯಡ್ಸ್ ಆಗುತ್ತಿಲ್ಲ. ನನಗೆ ಮನೆಗೆ ಹೋಗಬೇಕು. ನಾನು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದೀನಿ. ನನ್ನ ಭಾವನೆಗಳಲ್ಲಿ ಏರಿಳಿತ ಆಗುತ್ತಿದೆ. ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಅದಕ್ಕೆ ನಾನು ನಿನ್ನನ್ನು ದೂಷಿಸುತ್ತಿಲ್ಲʼ’ ಎಂದಿದ್ದರು ಅಂಕಿತಾ. ವಿಕ್ಕಿ ಆಟದ ಬಗ್ಗೆ ಮಾತನಾಡುತ್ತಲೇ ಇಬ್ಬರಿಗೂ ಜಗಳ ಶುರುವಾಗಿತ್ತು.

ಅಕ್ಟೋಬರ್ 15 ರಂದು ಬಿಗ್‌ ಬಾಸ್‌ ಸೀಸನ್‌ 17 ಶುರುವಾಯ್ತು. ಜಿಯೋ ಸಿನಿಮಾದಲ್ಲಿ ಸ್ಟ್ರೀಮ್ ಆಗುತ್ತಿದೆ. ಪರ್ಯಾಯವಾಗಿ, ಕಾರ್ಯಕ್ರಮವು ಕಲರ್ಸ್ ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಬಾರಿಯ ಬಿಗ್‌ ಬಾಸ್‌ ಹಲವಾರು ಹೊಸ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.

Exit mobile version