ಬೆಂಗಳೂರು: ಸುಶಾಂತ್ ಸಿಂಗ್ ರಜಪೂತ್ (Ankita Lokhande) ಮಾಜಿ ಲವರ್, ನಟಿ ಅಂಕಿತಾ ಲೋಖಂಡೆ ಹಾಗೂ ಅವರ ಪತಿ ವಿಕ್ಕಿ ಜೈನ್ ‘ಬಿಗ್ ಬಾಸ್ 17’ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇಬ್ಬರೂ ಮನೆಯಲ್ಲಿ ಕಿತ್ತಾಡಿಕೊಳ್ಳುತ್ತಿದ್ದರು. ಹಿಂದಿನ ಸಂಚಿಕೆಯಲ್ಲಿ, ನವೆಂಬರ್ 15ರಂದು ಪ್ರೆಗ್ನೆನ್ಸಿ ಟೆಸ್ಟ್ ಕೂಡ ಮಾಡಿಸಿಕೊಂಡಿದ್ದರು. ಈಗ ಅಂಕಿತಾ ರಿಪೋರ್ಟ್ ನೆಗೆಟಿವ್ ಎಂದು ವರದಿಯಾಗಿದೆ.
ನವೆಂಬರ್ 15ರಂದು ಅಂಕಿತಾ ಲೋಖಂಡೆ ಪ್ರೆಗ್ನೆನ್ಸಿ ಟೆಸ್ಟ್ ಕೂಡ ಮಾಡಿಸಿಕೊಂಡಿದ್ದರು. ತಾನು ಪ್ರೆಗ್ನೆಂಟ್ ಆಗಿರುವ ಬಗ್ಗೆ ಅನುಮಾನ ಮೂಡಿದೆ. ನನಗೆ ಪಿರಿಯಡ್ಸ್ ಆಗುತ್ತಿಲ್ಲ ಅಂತ ಈ ಬಗ್ಗೆ ಪತಿ ವಿಕ್ಕಿ ಜೈನ್ ಬಳಿ ಹೇಳಿಕೊಂಡಿದ್ದರು. ಇದೀಗ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ವರದಿಯಾಗಿದೆ. ಇದು ತುಂಬಾ ವೈಯಕ್ತಿಕ ವಿಚಾರವಾದ ಕಾರಣ ವಾಹಿನಿ ಕೂಡ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದೆ.
ಬಿಗ್ ಬಾಸ್ 17ರ ಹಿಂದಿನ ಸಂಚಿಕೆಯಲ್ಲಿ ಅಂಕಿತಾ ಲೋಖಂಡೆ ಮತ್ತು ವಿಕ್ಕಿ ಜೈನ್ ಗಾರ್ಡನ್ ಏರಿಯಾದಲ್ಲಿ ಈ ಬಗ್ಗೆ ಮಾತನಾಡಿದ್ದರು. ಆಗ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ʻʻನನಗೆ ಮಾನಸಿಕವಾಗಿ ಹಿಂಸೆ ಆಗುತ್ತಿದೆ. ನನಗೆ ಅನಾರೋಗ್ಯ ಆದಂತೆ ಭಾಸ ಆಗುತ್ತಿದೆ. ನನಗೆ ಪೀರಿಯಡ್ಸ್ ಆಗುತ್ತಿಲ್ಲ. ನನಗೆ ಮನೆಗೆ ಹೋಗಬೇಕು. ನಾನು ಪ್ರೆಗ್ನೆನ್ಸಿ ಟೆಸ್ಟ್ ಮಾಡಿಸಿದ್ದೀನಿ. ನನ್ನ ಭಾವನೆಗಳಲ್ಲಿ ಏರಿಳಿತ ಆಗುತ್ತಿದೆ. ನಾನು ಗೊಂದಲಕ್ಕೆ ಒಳಗಾಗಿದ್ದೇನೆ. ಅದಕ್ಕೆ ನಾನು ನಿನ್ನನ್ನು ದೂಷಿಸುತ್ತಿಲ್ಲʼ’ ಎಂದಿದ್ದಾರೆ ಅಂಕಿತಾ. ವಿಕ್ಕಿ ಆಟದ ಬಗ್ಗೆ ಮಾತನಾಡುತ್ತಲೇ ಇಬ್ಬರಿಗೂ ಜಗಳ ಶುರುವಾಗಿತ್ತು.
ಇದನ್ನೂ ಓದಿ: Ankita Lokhande : ವಿಕ್ಕಿ ಜೈAnkita Lokhande Pregnantನ್ ಜತೆ ಮತ್ತೆ ಮದುವೆಯಾದ ನಟಿ ಅಂಕಿತಾ ಲೋಖಂಡೆ
ಇತ್ತೀಚೆಗೆ ಬಿಗ್ ಬಾಸ್ 17 ರ ಮನೆಯಿಂದ ಹೊರನಡೆದ ನಂತರ, ನಾವಿದ್ ಸೋಲೆ ಮಾಧ್ಯಮದೊಂದಿಗೆ ಅಂಕಿತಾ ಬಗ್ಗೆ ಮಾತನಾಡಿದ್ದರು. ʻʻಎಲ್ಲವೂ ಪಾಸಿಟಿವ್ ದಿಕ್ಕಿನಲ್ಲಿ ಸಾಗುತ್ತಿದೆ. ಈ ಬಗ್ಗೆ ತುಂಬಾ ಉತ್ಸುಕನಾಗಿದ್ದೇನೆ. ಮಗುವಿಗೆ ಹೆಸರಿಡಲು ನನ್ನ ಸಹಾಯವನ್ನು ತೆಗೆದುಕೊಳ್ಳುತ್ತೇನೆ ಎಂದು ಅಂಕಿತಾ ನನಗೆ ಭರವಸೆ ಕೂಡ ನೀಡಿದ್ದಾರೆ. ಹಿಂದಿ ಮತ್ತು ವೆಸ್ಟರ್ನ್ ಹೆಸರುಗಳನ್ನು ಮಿಕ್ಸ್‌ಅಪ್ ಮಾಡಿ ಹೆಸರನ್ನು ಇಡಲು ಯೋಜಿಸಿದ್ದೇವೆ. ನನ್ನ ಮನಸ್ಸಿನಲ್ಲಿ ಕೆಲವು ಹೆಸರುಗಳಿವೆ, ಆದರೆ ಸಮಯ ಬಂದಾಗ ಮಾತ್ರ ನಾನು ಅವುಗಳನ್ನು ಹಂಚಿಕೊಳ್ಳುತ್ತೇನೆʼʼ ಎಂದಿದ್ದರು.
ಕಾರ್ಯಕ್ರಮವು ಕಲರ್ಸ್ ಟಿವಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರ ಕಾಣುತ್ತಿದೆ. ಈ ಬಾರಿಯ ಬಿಗ್ ಬಾಸ್ ಹಲವಾರು ಹೊಸ ಮತ್ತು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ.