Site icon Vistara News

Dhamki vishwak | ಸ್ಯಾಂಡಲ್‌ವುಡ್‌ಗೆ ತೆಲುಗು ಸಿನಿಮಾ ಪ್ರತಿಭೆ: ದೀಪಾವಳಿಗೆ ‘ಧಮ್ಕಿ‘ ಫಸ್ಟ್‌ ಲುಕ್ !

Dhamki vishwak

ಪ್ಯಾನ್‌ ಇಂಡಿಯಾ ಸಿನಿಮಾಗಳ ಅಬ್ಬರ ದಿನದಿಂದ ದಿನಕ್ಕೆ ಜೋರಾಗುತ್ತಿದೆ. ಕೆಜಿಎಫ್‌ ಬಳಿಕ ಪ್ಯಾನ್‌ ಇಂಡಿಯಾ ಸಿನಿಮಾಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಈ ಸಾಲಿಗೆ ಮತ್ತೊಂದು ಚಿತ್ರ ಸೇರ್ಪಡೆಯಾಗುತ್ತಿದೆ. ತೆಲುಗು ಸಿನಿರಂಗದ ಪ್ರತಿಭೆ ಪ್ಯಾನ್‌ ಇಂಡಿಯಾ ಮೆರವಣಿಗೆಗೆ ಸಜ್ಜಾಗಿದ್ದಾರೆ. ವಿಶ್ವಕ್ ಸೇನ್ ಟಾಲಿವುಡ್‌ ಜೊತೆಗೆ ದೇಶಾದ್ಯಂತ ಸದ್ದು ಮಾಡಲು ರೆಡಿ ಅಂತಿದ್ದಾರೆ. ‘ಫಲಕ್ನುಮಾ ದಾಸ್‘ ಸಿನಿಮಾದಲ್ಲಿ ಸಖತ್‌ ಸದ್ದು ಮಾಡಿದ್ದ ವಿಶ್ವಕ್ ಸೇನ್ ‘ಧಮ್ಕಿ‘ (Dhamki vishwak) ಹಾಕಲು ರೆಡಿಯಾಗಿದ್ದಾರೆ.

‘ಧಮ್ಕಿ‘ಯಲ್ಲಿ ನಾಯಕನಾಗಿ ಬಣ್ಣ ಹಚ್ಚಿರುವ ವಿಶ್ವಕ್ ನಿರ್ದೇಶಕನಾಗಿಯೂ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮನ್ಮಯೆ ಕ್ರಿಯೇಷನ್ಸ್ & ವಿಶ್ವಕ್ ಸೇನ್ ಸಿನಿಮಾಸ್ ಬ್ಯಾನರ್ ಅಡಿ ಕರಾಟೆ ರಾಜು ನಿರ್ಮಾಣ ಮಾಡ್ತಿರುವ ‘ಧಮ್ಕಿ‘ಗೆ ಪ್ರಸನ್ನ ಕುಮಾರ್ ಬೆಜವಾಡ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಮತ್ತೊಂದುಕಡೆ ವಿಶ್ವಕ್ ಸೇನ್‌ಗೆ ಜೋಡಿಯಾಗಿ ನಿವೇತಾ ಪೇತುರಾಜ್ ನಟಿಸುತ್ತಿದ್ದಾರೆ.

ರೋಮ್ಯಾಂಟಿಕ್ ಕಾಮಿಡಿ
‘ಧಮ್ಕಿ‘ ಚಿತ್ರತಂಡ ಪ್ರೇಕ್ಷಕರಿಗೆ ಸಮ್‌ಥಿಂಗ್‌ ಸ್ಪೆಷಲ್‌ ಕೊಡಲು ಸಜ್ಜಾಗಿದೆ. ಆ್ಯಕ್ಷನ್ ಥ್ರಿಲ್ಲರ್ ಜೊತೆಗೆ ರೋಮ್ಯಾಂಟಿಕ್ & ಕಾಮಿಡಿ ಕಂಟೆಂಟ್‌ ಕೂಡ ಇರಲಿದೆ. ಹೀಗಾಗಿ 100% ಎಂಟರ್‌ಟೈನ್‌ಮೆಂಟ್‌ ಸಿನಿಮಾ ಅಂತಿದ್ದಾರೆ ಚಿತ್ರತಂಡದವರು. ಶೇ.95ರಷ್ಟು ಶೂಟಿಂಗ್ ಮುಗಿಸಿರುವ ಚಿತ್ರತಂಡ ಉಳಿದ ಭಾಗದ ಚಿತ್ರೀಕರಣವನ್ನೂ ಈ ವಾರದಲ್ಲಿ ಮುಗಿಸಲು ಯೋಜನೆ ಹಾಕಿಕೊಂಡಿದೆ. ಹೈದ್ರಾಬಾದ್ ಸಾರಥಿ ಸ್ಟುಡಿಯೋದಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲು ಅದ್ಧೂರಿ ಸೆಟ್ ಹಾಕಿದೆ.

ಆದಷ್ಟು ಬೇಗ ಬಾಕಿ ಶೂಟಿಂಗ್ ಮುಗಿಸಿ ದೀಪಾವಳಿಗೆ ಫಸ್ಟ್ ಲುಕ್‌ ರಿಲೀಸ್ ಮಾಡುವ ಪ್ಲ್ಯಾನ್‌ ಇದೆ. ಫಸ್ಟ್ ಲುಕ್ ರಿಲೀಸ್ ಆಗುತ್ತಿದ್ದಂತೆ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಪ್ರಮೋಷನ್‌ ಮಾಡಲು ತೀರ್ಮಾನಿಸಿದೆ ಚಿತ್ರತಂಡ. ‘ಧಮ್ಕಿ‘ ತಾರಾಬಳಗದಲ್ಲಿ ರಾವ್ ರಮೇಶ್, ಹೈಪರ್ ಆದಿ, ರೋಹಿಣಿ, ಪೃಥ್ವಿರಾಜ್ ಸೇರಿದಂತೆ ಮತ್ತಿತರರಿದ್ದಾರೆ. ಹಾಗೇ ದಿನೇಶ್ ಕೆ. ಬಾಬು ಛಾಯಾಗ್ರಹಣ, ಲಿಯಾನ್ ಜೇಮ್ಸ್ ಸಂಗೀತ ಮತ್ತು ಅನ್ವರ್ ಅಲಿ ಸಂಕಲನ ‘ಧಮ್ಕಿ‘ಗೆ ಇದೆ.

ಇದನ್ನೂ ಓದಿ: Sudeep birthday | ಒಟಿಟಿ ಅಖಾಡದಲ್ಲೂ ಅಬ್ಬರಿಸಲು ‘ವಿಕ್ರಾಂತ್‌ ರೋಣ’ ಸಿನಿಮಾ ಸಿದ್ಧ !

Exit mobile version