Site icon Vistara News

Vivek Agnihotri | ವಿವೇಕ್ ಅಗ್ನಿಹೋತ್ರಿಯ ʻದಿ ವ್ಯಾಕ್ಸಿನ್ ವಾರ್ʼ ಸಿನಿಮಾ ಸೆಟ್‌ನಲ್ಲಿ ಅನುಪಮ್‌ ಖೇರ್‌

Vivek Agnihotri

ಬೆಂಗಳೂರು : ‘ದಿ ಕಾಶ್ಮೀರ್ ಫೈಲ್ಸ್‌’ ಸಿನಿಮಾ ನಂತರ ವಿವೇಕ್ ಅಗ್ನಿಹೋತ್ರಿ (Vivek Agnihotri) ‘ದಿ ವ್ಯಾಕ್ಸಿನ್ ವಾರ್’ ಸಿನಿಮಾದ ನಿರ್ದೇಶನಕ್ಕೆ ಇಳಿದಿದ್ದಾರೆ. ಇದೀಗ ಅನುಪಮ್‌ ಖೇರ್‌ ಅವರು ಕ್ಲ್ಯಾಪ್‌ ಬೋರ್ಡ್‌ ಹಿಡಿದಿರುವ ಫೋಟೊ ಒಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ಬಾಲಿವುಡ್‌ನ ಪ್ರಖ್ಯಾತ ನಟ ನಾನಾ ಪಾಟೇಕರ್ ಅವರು ‘ದಿ ವ್ಯಾಕ್ಸಿನ್ ವಾರ್‌’ (The Vaccine War) ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಅನುಪಮ್‌ ಖೇರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದು ಖಾತ್ರಿಯಾದಂತಿದೆ. ಲಖನೌನಲ್ಲಿ ವ್ಯಾಕ್ಸಿನ್ ವಾರ್ ಚಿತ್ರೀಕರಣ ನಡೆಯುತ್ತಿದ್ದು, ನಾನಾ ಪಾಟೇಕರ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

ಇದನ್ನು ಪಲ್ಲವಿ ಜೋಶಿ ನಿರ್ಮಿಸಿದ್ದಾರೆ. ತಾವು ಸಿನಿಮಾದಲ್ಲಿ ನಟಿಸುತ್ತಿರುವ ಈ ಬಗ್ಗೆ ಅಭಿಮಾನಿಗಳಿಗೆ ತಿಳಿಸಲು ನಟ ಸೆಟ್‌ನಿಂದಲೇ ಫೋಟೊವನ್ನು ಹಂಚಿಕೊಂಡಿದ್ದಾರೆ. ಅನುಪಮ್‌ ಖೇರ್‌ ಪೋಸ್ಟ್‌ ಮಾಡಿ, “ನನ್ನ 534 ನೇ ಚಲನಚಿತ್ರವನ್ನು ಘೋಷಿಸುತ್ತಿದ್ದೇನೆ. ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ವ್ಯಾಕ್ಸಿನ್ ವಾರ್ ಆಕರ್ಷಕ ಮತ್ತು ಸ್ಫೂರ್ತಿದಾಯಕʼ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | Kantara Movie | ನಟ ಅನುಪಮ್‌ ಖೇರ್‌ ಜತೆ ರಿಷಬ್‌ ಶೆಟ್ಟಿ: ನಿರ್ದೇಶಕ ಮಧುರ್ ಭಂಡಾರ್ಕರ್ ಹೇಳಿದ್ದೇನು?

ಮಧುರ್ ಭಂಡಾರ್ಕರ್‌ ಅವರ ‘ಇಂಡಿಯಾ ಲಾಕ್‌ಡೌನ್‌’ ಸಿನಿಮಾದಲ್ಲಿ ನಟಿಸಿದ್ದ ಗೋಪಾಲ್ ಸಿಂಗ್, ಹಿರಿಯ ನಟಿ ದಿವ್ಯಾ ಸೇಠ್‌ ಸೇರಿದಂತೆ ಸಾಕಷ್ಟು ಜನ ಅನುಭವಿ ಕಲಾವಿದರು ಈ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ. ದಿ ವ್ಯಾಕ್ಸಿನ್‌ ವಾರ್ ಸಿನಿಮಾವು ಹಿಂದಿ, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ ಸೇರಿದಂತೆ ಒಟ್ಟು 11 ಭಾಷೆಗಳಲ್ಲಿ ತೆರೆಗೆ ಬರಲಿದೆ. 

ಇದನ್ನೂ ಓದಿ | ಇವು ಸ್ವತಂತ್ರ ಭಾರತದ ಸಿಂಹಗಳು; ರಾಷ್ಟ್ರ ಲಾಂಛನ ವಿವಾದಕ್ಕೆ ಪ್ರತಿಕ್ರಿಯಿಸಿದ ಅನುಪಮ್‌ ಖೇರ್‌

Exit mobile version