Anupama Gowda: ಕಪ್ಪು ಉಡುಪಿನಲ್ಲಿ ಮಿಂಚಿದ ʻಬಿಗ್ ಬಾಸ್ʼ ಖ್ಯಾತಿಯ ಅನುಪಮಾ ಗೌಡ! Yashaswi Devadiga 9 months ago ಬಿಗ್ ಬಾಸ್ ಖ್ಯಾತಿಯ ಅನುಪಮಾ ಗೌಡ (Anupama Gowda) ಆಗಾಗ ಹೊಸ ಫೋಟೊಶೂಟ್ ಮಾಡಿಸಿಕೊಳ್ಳುತ್ತಲೇ ಇರುತ್ತಾರೆ. ಇದೀಗ ನಟಿ ಕಪ್ಪು ಬಣ್ಣದ ಬಟ್ಟೆಯಲ್ಲಿ ಮಿಂಚಿದ್ದಾರೆ. ಅಕ್ಕ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು ಅನುಪಮಾ. ನಗಾರಿ, ಕರಾಳ ರಾತ್ರಿ, ಪುಟ 109 ಸೇರಿದಂತೆ ಹಲವು ಸಿನಿಮಾಗಳಲ್ಲಿ ಅನುಪಮಾ ನಟಿಸಿದ್ದರು. ಇದನ್ನೂ ಓದಿ: Anupama Gowda: ಅನುಪಮಾ ಗೌಡ ಯಾರು ಗೊತ್ತಾ? ಅನುಪಮಾ ಗೌಡ ಎರೆಡೆರಡು ಬಾರಿ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಎಲ್ಲರ ಮನೆ ಮಾತಾಗಿದ್ದರು. ಸದ್ಯ ನಟಿ ರಿಯಾಲಿಟಿ ಶೋಗಳಲ್ಲಿ ನಿರೂಪಕಿಯಾಗಿ ಮಿಂಚುತ್ತಿದ್ದಾರೆ.