ಬೆಂಗಳೂರು: ಅನುರಾಗ್ ಕಶ್ಯಪ್ (Anurag Kahsyap) ಅವರ ಪುತ್ರಿ ಆಲಿಯಾ ಕಶ್ಯಪ್ ಅವರ ನಿಶ್ಚಿತಾರ್ಥ ಕಾರ್ಯಕ್ರಮವು ಮುಂಬೈನಲ್ಲಿ ನೆರವೇರಿತು. ಆಲಿಯಾ ತಮ್ಮ ಬಹುಕಾಲದ ಗೆಳೆಯ ಶೇನ್ ಗ್ರೆಗೊಯಿರ್ (Shane Gregoire) ಜತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಆಲಿಯಾ ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ಬಿಟೌನ್ ನಟ-ನಟಿಯರು ಭಾಗಿಯಾಗಿದ್ದರು. ವಿಶೇಷ ಎಂದರೆ ಮಾಜಿ ಪತ್ನಿ ಕಲ್ಕಿ ಕೊಚ್ಲಿನ್ (Kalki Keochlin) ಹಾಗೂ ಅವರ ಬಾಯ್‌ಫ್ರೆಂಡ್ ಗೈ ಹರ್ಷ್‌ಬರ್ಗ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ಮುಂಬೈನಲ್ಲಿ ಆಲಿಯಾ ಕಶ್ಯಪ್ ಮತ್ತು ಶೇನ್ ಗ್ರೆಗೊಯಿರ್ ಅವರ ನಿಶ್ಚಿತಾರ್ಥದ ಪಾರ್ಟಿಯು ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಹಾಜರಿದ್ದರು. ಪ್ರಿಂಟೆಡ್ ಸೀರೆಯಲ್ಲಿ ಮಗಳ ಜತೆ ಪೋಸ್ ಕೊಟ್ಟಿದ್ದಾರೆ. ಕಲ್ಕಿ ಕೊಚ್ಲಿನ್ ಹಾಗೂ ಅನುರಾಗ್ ಕಶ್ಯಪ್ 2011ರಿಂದ 2015ರವರೆಗೆ ಒಟ್ಟಿಗೆ ಇದ್ದರು. 48ರ ಹರೆಯದ ಅನುರಾಗ್ ಕಶ್ಯಪ್ 1997ರಲ್ಲಿ ಆರತಿ ಬಜಾಜ್ ಜತೆ ಮದುವೆ ಆಗಿದ್ದರು. ಆದರೆ, 2009ರಲ್ಲಿ ಈ ದಂಪತಿ ವಿಚ್ಛೇದನ ಪಡೆದುಕೊಂಡರು. ಆನಂತರ ಎರಡು ವರ್ಷ ಒಂಟಿಯಾಗಿದ್ದ ಅನುರಾಗ್, 2011ರಲ್ಲಿ ನಟಿ ಕಲ್ಕಿ ಕೊಚ್ಲಿನ್ ಜತೆ ಮದುವೆಯಾದರು. ಆದರೆ, ಆ ಮದುವೆ ಕೂಡ ಬಹಳ ದಿನ ಉಳಿಯಲಿಲ್ಲ. 2015ರಲ್ಲಿ ವಿಚ್ಛೇದನ ಪಡೆದುಕೊಂಡರು.
ಇದನ್ನೂ ಓದಿ: Sunny Leone: ಅನುರಾಗ್ ಕಶ್ಯಪ್,ನಟ ರಾಹುಲ್ ಭಟ್ ಜತೆ ಕಾನ್‌ನಲ್ಲಿ ಸನ್ನಿ ಲಿಯೋನ್!
ಆಲಿಯಾ ಕಶ್ಯಪ್ ಅವರು ನಟನೆಯಿಂದ ದೂರವಿದ್ದಾರೆ. ತಮ್ಮದೇ ಖಾಸಗಿ ಯೂಟ್ಯೂಬ್ ಚಾನೆಲ್‌ವೊಂದರಲ್ಲಿ ಸಂದರ್ಶನ, ಫಿಟ್‌ನೆಸ್ ಟಿಪ್ಸ್ ನೀಡುವ ಮೂಲಕ ಆ್ಯಕ್ಟಿವ್ ಆಗಿದ್ದಾರೆ. ಶೇನ್ ಜತೆ ಆಲಿಯಾ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಕೂಡ ಇದ್ದರು. ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.