ಬೆಂಗಳೂರು: 2023ರನೇ ಸಾಲಿನ 76ನೇ ಕಾನ್ ಚಿತ್ರೋತ್ಸವಕ್ಕೆ (2023 Cannes Film Festival) ಕ್ಷಣಗಣನೆ ಆರಂಭ ಆಗಿದೆ. ಮೇ 16ರಂದು ಪ್ರಾರಂಭವಾಗಿ ಮೇ 27ರಂದು ಕೊನೆಗೊಳ್ಳಲಿದೆ. ಪ್ರತಿ ವರ್ಷ, ಅನೇಕ ಭಾರತೀಯ ಸೆಲೆಬ್ರಿಟಿಗಳು ಫ್ರೆಂಚ್ ರಿವೇರಿಯಾದಲ್ಲಿ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ಸೆಲೆಬ್ರಿಟಿಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವುದು ಕಾನ್ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ಈ ವರ್ಷ, ಅನುಷ್ಕಾ ಶರ್ಮಾ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪದಾರ್ಪಣೆ ಮಾಡಲು ಫ್ರೆಂಚ್ ರಿವೇರಿಯಾಕ್ಕೆ ಹೋಗುತ್ತಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಕುತೂಹಲ ಅವರ ಅಭಿಮಾನಿಗಳಲ್ಲಿ ಇದೆ.
ಟ್ವಿಟರ್ನಲ್ಲಿ ಈ ಬಗ್ಗೆ ಇಮ್ಯಾನ್ಯುವೆಲ್ ಅವರು ಬರೆದುಕೊಂಡಿದ್ದರು. ‘ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿತು. ವಿರಾಟ್ ಹಾಗೂ ಟೀಂ ಇಂಡಿಯಾಗೆ ನಾನು ವಿಶ್ ಮಾಡಿದೆ. ಕಾನ್ ಸಿನಿಮೋತ್ಸವದ ಕುರಿತು ಅನುಷ್ಕಾ ಜತೆ ಚರ್ಚೆ ಮಾಡಿದೆ’ ಎಂದು ಅವರು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ನಟಿ ದೀಪಿಕಾ ಪಡುಕೋಣೆ ಹೃದಯ ಆರೋಗ್ಯ: ಕಳವಳಕ್ಕೆ ಕಾರಣವಿಲ್ಲ
ಇಮ್ಯಾನ್ಯುವೆಲ್ ಟ್ವೀಟ್
ನಿರ್ದೇಶಕ ಪೌಲ್ ಡೇನೋ, ಅಫ್ಘಾನಿಸ್ತಾನದ ಕಥೆಗಾರ, ನಿರ್ದೇಶಕ ಅತಿಖ್ ರಹೀಮಿ ಮೊದಲಾದವರು ಈ ಸಿನಿಮೋತ್ಸವದ ಪ್ಯಾನೆಲ್ನಲ್ಲಿದ್ದಾರೆ. ಈ ಮೊದಲು ಐಶ್ವರ್ಯಾ ರೈ ಬಚ್ಚನ್, ಪ್ರಿಯಾಂಕಾ ಚೋಪ್ರಾ, ದೀಪಿಕಾ ಪಡುಕೋಣೆ ಕಾನ್ ಚಿತ್ರೋತ್ಸವದಲ್ಲಿ ಈ ಮೊದಲು ಭಾಗಿ ಆಗಿದ್ದರು. ಈ ವರ್ಷ ಅನುಷ್ಕಾ ಶರ್ಮಾ ಅವರು ಭಾಗಿ ಆಗುತ್ತಿದ್ದಾರೆ. ಅವರು ರೆಡ್ ಕಾರ್ಪೇಟ್ ಮೇಲೆ ಹೆಜ್ಜೆ ಹಾಕುತ್ತಿದ್ದಾರೆ. ಈ ಮೊದಲ ಅನುಷ್ಕಾ ಇತರೆ ಸಮಾರಂಭಗಳಲ್ಲಿ ಫ್ಯಾಷನ್ ಐಕಾನ್ ಆಗಿ ಹೇಗೆ ಕಂಡಿದ್ದರು? ಇದರ ಝಲಕ್ ಇಲ್ಲಿದೆ.
ಅನುಷ್ಕಾ ಶರ್ಮಾ ಕಪ್ಪು ಬಣ್ಣದ ಗೌನ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಗ್ಲಾಮರ್ ಆಗಿ ಕಂಡಿದ್ದರು. ಬಲ್ಗರಿ ನೆಕ್‌ಪೀಸ್, ಡೈಮಂಡ್ ರಿಂಗ್‌ಗಳು, ಹೈ ಹೀಲ್ಸ್, ಸ್ಟೈಲ್‌ನಲ್ಲಿ ಕಂಡದ್ದು ಹೀಗೆ.
ಅನುಷ್ಕಾ ಶರ್ಮಾ ತನ್ನ ಪತಿ ವಿರಾಟ್ ಕೊಹ್ಲಿಯೊಂದಿಗೆ ಪ್ರಶಸ್ತಿ ಸಮಾರಂಭವೊಂದರಲ್ಲಿ ಭಾಗವಹಿಸಿದ್ದರು. ಕೆನ್ನೇರಳೆ ಬಣ್ಣದ ಆಫ್-ದ-ಶೋಲ್ಡರ್ ಗೌನ್‌ನಲ್ಲಿ ಕಂಡಿದ್ದರು.
ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಯೊಂದಿಗೆ ಡಿಯೊರ್‌ನ ಮುಂಬೈ ಶೋಗೆ ಹಾಜರಾಗಿದ್ದರು. ಸನ್‌ಶೈನ್ ಹಳದಿ ಗೌನ್‌ನಲ್ಲಿ ಅನುಷ್ಕಾ ಮನಮೋಹಕವಾಗಿ ಕಾಣುತ್ತಿದ್ದರು.
ಈ ಹಿಂದೆ ಸಮಾರಂಭವೊಂದರಲ್ಲಿ ಮೆಟಾಲಿಕ್ ಗೌನ್‌ನಲ್ಲಿ ಕಂಡಿದ್ದರು ಅನುಷ್ಕಾ. ಪ್ಲಂಗಿಂಗ್ ನೆಕ್‌ಲೈನ್, ಮ್ಯಾಚಿಂಗ್ ಹೀಲ್ಸ್, ಕಿವಿಯೋಲೆಗಳು ಅದ್ಭುತವಾಗಿ ಕಂಡಿದ್ದವು.
ಅನುಷ್ಕಾ ಶರ್ಮಾ ಅವರ ಪರ್ಲ್-ವೈಟ್ ಗೌನ್ ಹಳೆಯ ಹಾಲಿವುಡ್ ಗ್ಲಾಮರ್ ವಿನ್ಯಾಸದೊಂದಿಗೆ ಬೆರೆತಂತೆ ಕಂಡಿದ್ದಾರೆ. ಹೈ ನೆಕ್, ಉಬ್ಬಿದ ತೋಳುಗಳು, ಎತ್ತರದ ಸ್ಲಿಟ್ ನೊಂದಿಗೆ ಸೊಗಸಾಗಿ ಕಂಡಿದ್ದರು.
ಅನುಷ್ಕಾ ಶರ್ಮಾ ಅವರು ಚಕ್ ದೇ ಎಕ್ಸ್ಪ್ರೆಸ್ ಸಿನಿಮಾದ ಶೂಟಿಂಗ್ ಮುಗಿಸಿದ್ದಾರೆ. ಭಾರತ ಮಹಿಳೆಯರ ತಂಡದ ಮಾಜಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯನ್ನು ಆಧರಿಸಿದ ಈ ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮಾ ಜೂಲನ್ ಗೋಸ್ವಾಮಿ ಪಾತ್ರವನ್ನು ಮಾಡಿದ್ದಾರೆ.