Site icon Vistara News

Virat Kohli | ಬಾಬಾ ನೀಮ್ ಕರೋಲಿ ಆಶ್ರಮಕ್ಕೆ ಭೇಟಿ ಕೊಟ್ಟ ವಿರಾಟ್ ದಂಪತಿ: ಮಗಳ ವಿಡಿಯೊ ವೈರಲ್‌!

Virat Kohli

ಬೆಂಗಳೂರು : ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ (Virat Kohli ) ದಂಪತಿ ಇತ್ತೀಚೆಗೆ ಉತ್ತರಾಖಂಡದ ವೃಂದಾವನದಲ್ಲಿರುವ ಬಾಬಾ ನೀಮ್ ಕರೋಲಿ ಅವರ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. ಶ್ರೀ ಹಿತಾ ಪ್ರೇಮಾನಂದಜೀ ಅವರ ಆಶ್ರಮದಲ್ಲಿ ದಂಪತಿ ತಮ್ಮ ಮಗಳು ವಾಮಿಕಾ ಅವರೊಂದಿಗೆ ಆಶೀರ್ವಾದವನ್ನು ಪಡೆಯುತ್ತಿರುವ ವಿಡಿಯೊ ವೈರಲ್‌ ಆಗಿದೆ.

ಈ ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು ʻ”ದೇವರು ಈ ಕುಟುಂಬವನ್ನು ಆಶೀರ್ವದಿಸಲಿ” ಎಂದು ಬರೆದಿದ್ದಾರೆ. “ವಾಮಿಕಾ ತುಂಬಾ ಮುದ್ದಾಗಿದ್ದಾಳೆ” ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ. ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ದಂಪತಿ ಹೊಸ ವರ್ಷದಂದು ದುಬೈಗೆ ಹಾರಿದ್ದರು. ದುಬೈನಲ್ಲಿ ತಮ್ಮ ಸ್ನೇಹಿತರೊಂದಿಗೆ ಪಾರ್ಟಿ ಮಾಡಿದ ವಿರಾಟ್, ಚಿತ್ರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ | Virat-Anushka | ಆಶ್ರಮಕ್ಕೆ ಭೇಟಿ ಕೊಟ್ಟು ಹೊದಿಕೆ ಹಂಚಿದ ವಿರಾಟ್-ಅನುಷ್ಕಾ

ವಿರಾಟ್, ಅನುಷ್ಕಾ ಮತ್ತು ಮಗಳು ವಾಮಿಕಾ ಮೂವರು ಸೂರ್ಯನ ಕಡೆ ಮುಖ ಮಾಡಿ ನಿಂತಿರುವ ಫೋಟೊ ಸಖತ್‌ ವೈರಲ್‌ ಆಗಿತ್ತು. ಅನುಷ್ಕಾ ಶೆಟ್ಟಿ ಮದುವೆ ಬಳಿಕ ತೆರೆಮೇಲೆ ಬಂದಿಲ್ಲ. ಕೊನೆಯದಾಗಿ ಅನುಷ್ಕಾ ಝೀರೋ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಶಾರುಖ್ ಖಾನ್ ಜತೆ ನಟಿಸಿದ್ದರು. ಇದೀಗ ಮಹಿಳಾ ಕ್ರಿಕೆಟರ್‌ ಲೆಜೆಂಟ್ ಜೂಲನ್ ಗೋಸ್ವಾಮಿ ಅವರ ಬಯೋಪಿಕ್‌ ಚಿತ್ರದಲ್ಲಿ ಅನುಷ್ಕಾ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗೆ ʻಚಕ್ದಾ ಎಕ್ಸ್‌ಪ್ರೆಸ್ʼ ಎಂದು ಟೈಟಲ್ ಇಡಲಾಗಿದೆ. 

ಇದನ್ನೂ ಓದಿ | Virat Kohli | ಹೊಸ ವರ್ಷವನ್ನು ದುಬೈಯಲ್ಲಿ ಆಚರಿಸಲು ಸಿದ್ಧತೆ ಆರಂಭಿಸಿದ ವಿರುಷ್ಕಾ ದಂಪತಿ!

Exit mobile version